ಕಾರುಗಳ ಉತ್ಪಾದಕ ಹ್ಯುಂಡೈ ಕಂಪೆನಿ ಇಲೆಕ್ಟ್ರಿಕಲ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಹ್ಯುಂಡೈ ಕೋನಾ ಎಂಬ ಹೆಸರಿನಲ್ಲಿ ಕಂಪೆನಿ ಕಾರನ್ನು ಬಿಡುಗಡೆ ಮಾಡಿದ್ದು, ಸಂಪೂರ್ಣ ಮಾದರಿಯ ಇಲೆಕ್ಟ್ರಿಲ್ ಕಾರನ್ನು ಪರಿಚಯಿಸಿದ ಖ್ಯಾತಿಗೆ ಹ್ಯುಂಡೈ ಭಾಜನವಾಗಿದೆ. ಇಲೆಕ್ಟ್ರಿಕಲ್ ಕಾರುಗಳ ಓಡಾಟಕ್ಕೆ ಚಾರ್ಜಿಂಗ್ ಪಾಯಿಂಟ್ ವ್ಯವಸ್ಥೆಗಳು ಭಾರತದಲ್ಲಿ ಇಲ್ಲದಿರುವ ನಡುವೆಯೂ ಕಂಪೆನಿ ಕಾರನ್ನು ಬಿಡುಗಡೆಗೊಳಿಸುವ ಮೂಲಕ ಧೈರ್ಯ ಪ್ರದರ್ಶಿಸಿದೆ. 136ಬಿಎಚ್‌ಪಿ ಅಥವಾ 100 ಕೆ.ವಿ. ಎಲೆಕ್ಟ್ರಿಕಲ್ ಮೋಟಾರ್ ಮತ್ತು 39.2ಕೆಡಬ್ಲ್ಯುಎಚ್ ಬ್ಯಾಟರಿಯನ್ನು ಕಾರು ಹೊಂದಿದೆ. 8 ವರ್ಷ ಅಥವಾ 1,60,000 ಕಿ.ಮೀ.ಗಳ ವ್ಯಾರಂಟಿಯನ್ನು ಬ್ಯಾಟರಿಗೆ ನೀಡಲಾಗಿದೆ. ಒಂದು ಬ್ಯಾಟರಿ ಸುಮಾರು 2,000 ಬಾರಿ ಚಾರ್ಚಿಂಗ್ ಬಾಳಿಕೆ ಹೊಂದಿದೆ. ಕಾರಿನೊಂದಿಗೆ ಎರಡು ಚಾರ್ಚರ್‌ಗಳನ್ನು ಕಂಪೆನಿ ನೀಡಲಿದೆ. ಮೊದಲನೇ ಚಾರ್ಜರ್ ತ್ರೀ ಪಿನ್ ಪ್ಲಗ್‌ಗಳಲ್ಲಿ ಬಳಸಬಹುದಾಗಿದ್ದು, ಬ್ಯಾಟರಿ ಒಮ್ಮೆ ಪೂರ್ತಿ ಚಾರ್ಜ್ ಆಗಲು 13 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.