ಒಬ್ಬ ಭ್ರಷ್ಟ ರಾಜಕಾರಣಿಯ ಭ್ರಷ್ಟತೆಯನ್ನು ಮಾತ್ರವಲ್ಲದೆ ಭ್ರಷ್ಟ ರಾಜಕೀಯವನ್ನು, ಸಮಾಜದ ಕೊಳಕನ್ನು ಕಾಮೆಡಿಯಿಂದಲೂ ತೋರಿಸಬಹುದು ಎಂದು ದಾನಿಶ್ ಹಾಗೂ ನಿರ್ದೇಶಕ ಸಾದ್ ಖಾನ್ ತೋರಿಸಿಕೊಟ್ಟಿದ್ದಾರೆ ! ಒಬ್ಬ ಭ್ರಷ್ಟ ರಾಜಕಾರಣಿ ತನ್ನ ಸ್ವಾರ್ಥಯಕ್ಕೆ ಮತ್ತು ವೋಟಿಗಾಗಿ ಏನೆಲ್ಲಾ ಮಾಡುತ್ತಾನೆ, ಕಾರ್ಪೊರೇಟರ್ ಆಗಿದ್ದವ ಎಂಎಲ್ಎ ಆಗ್ಬೇಕು ಅಂದುಕೊಂಡು ಏನೇನೆಲ್ಲ ಕಸರತ್ತು ಮಾಡಿ ಕೊನೆಗೂ ಟಿಕೆಟ್ ಸಿಕ್ಕಿದಾಗ ಪ್ರತಿಸ್ಫರ್ಧಿಯಾಗಿ ಒಳ್ಳೆ ವ್ಯಕ್ತಿ ಸ್ಪರ್ಧಿಸಿದಾಗ ಏನಾಗಬಹುದು ಎನ್ನುವುದು ಈ ಚಿತ್ರದ ಸಾರಾಂಶ ..
ನಾಗರಾಜ್ ದಾನಿಶ್ ಚಿತ್ರದ ಪ್ರಮುಖ ಆಕರ್ಷಣೆ ಅಭಿನಯ ಹಾಸ್ಯದಿಂದ ಎಲ್ಲರನ್ನು ನಗಿಸಲು ಸಫಲರಾಗಿದ್ದಾರೆ ಹಾಗೆ ಅವರೊಂದಿಗೆ ಸುಮುಖೀ ಸುರೇಶ್,ವಿಜಯ್ ಮುಂತಾದವರು ಜನರನ್ನು ನಗೆಕಡಲಲ್ಲಿ ತೇಲಿಸಿದರೆ ರೋಜರ್ ನಾರಾಯಣ್ ಹಾಗು ಶ್ರುತಿ ಹರಿಹರನ್ ಅಭಿನಯದಿಂದ ಪ್ರಸಕ್ತ ರಾಜಕೀಯದ ವ್ಯವಸ್ಥೆ ಅವಸ್ಥೆಯನ್ನು ತೋರಿಸಿದ್ದಾರೆ .
ಕಥೆಯಲ್ಲೇನೂ ಹೊಸತನ ಇಲ್ಲದಿದ್ರೂ ಕಥೆಯನ್ನು ತೋರಿಸಿದ ವಿಧಾನ ಹೊಸತು ! ಕನ್ನಡ ಹಾಗು ಇಂಗ್ಲಿಷ್ ನ ಮಿಶ್ರಣ ‘ಕಂಗ್ಲಿಷ್ ‘ ಈ ಎರಡು ಭಾಷೆಯನ್ನ ಸರಿಯಾಗಿ ಅರ್ಥೈಸಿಕೊಳ್ಳಬಲ್ಲ ಕ್ಲಾಸ್ ಪ್ರೇಕ್ಷಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗು ಪಟ್ಟಣದ ಜನರಿಗೆ ಬಹಳಷ್ಟು ನಗಿಸಿದರೆ ! ಉಳಿದವರಿಗೆ ನಗಿಸಿದರೂ ಅಷ್ಟೊಂದು ಇಷ್ಟವಾಗಲಿಕ್ಕಿಲ್ಲ .
ಕಾಮೆಡಿ ಕಥಾ ಹಂದರ, Background score, ಹಾಗು ಎಲ್ಲಕ್ಕಿಂತ ಪ್ರಮುಖವಾಗಿ ದಾನಿಶ್ ಈ ಚಿತ್ರದ ಪ್ರಮುಖ ಆಕರ್ಷಣೆ . ಚಿತ್ರದಲ್ಲಿ ಬರುವ ಒಂದೆರಡು ಹಾಡುಗಳು ಕೇಳಲು ಅಷ್ಟೊಂದು ಇಂಪಾಗಿಲ್ಲವಾದರೂ ಸಾಹಿತ್ಯದಿಂದ ನಗೆ ತರಿಸುತ್ತದೆ .
ಕಾಮಿಡಿ ಹಾಗೂ ಕಂಗ್ಲಿಷ್ ಇಷ್ಟಪಡುವ ಜನರು ಫ್ಯಾಮಿಲಿ ಸಮೇತ ಒಮ್ಮೆ ನೋಡಬಹುದಾದ ಚಿತ್ರ ಹಂಬಲ್ ಪೊಲಿಟಿಷಿಯನ್ ನೋಗರಾಜ್.
ರವಿಕಿರಣ್