Advertisement

ಕುಂಟು ಕುದುರೆಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಗ್ರಾಮಸ್ಥರು

05:59 PM Oct 13, 2021 | Team Udayavani |

ಶ್ರೀರಂಗಪಟ್ಟಣ: ಕುದುರೆಯೊಂದರ ಕಾಲೊಂದು ಕೊಳತು ಹೋಗಿ ನೋವಿನ ನರಕಯಾತನೆ ಅನುಭವಿಸುತ್ತಾ ಊರಿನ‌ ಬೀದಿಯಲ್ಲಿ ಅಲೆಯುತ್ತಿದ್ದ ಕುದುರೆಯನ್ನು ಗ್ರಾಮಸ್ಥರು ಆಸ್ಪತ್ರೆಗೆ ಕಳಿಸಿ ಮಾನವೀಯತೆ ಮೆರೆದಿರುವ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ.

Advertisement

ಶ್ರೀರಂಗಪಟ್ಟಣದ ಗಂಜಾಮ್ ನಲ್ಲಿ‌ ಕಳೆದ 15  ದಿನಗಳಿಂದ ಕುದುರೆಯೊಂದರ  ಮುಂಗಾಲಿನ‌ ಬಲಗಾಲು ಕೊಳೆತು ಹೋಗಿ ಕುದುರೆ ಮೂಕ ವೇದನೆಯ ಅನುಭವಿಸುತ್ತಾ ನೋವಿನಿಂದ ಬೀದಿ ಬೀದಿ ಅಲೆದಾಡುತ್ತಿತ್ತು. ಕಡೆಗೆ  ಗ್ರಾಮದ ರಾಮ್ ಪ್ರಸಾದ್ ಹಾಗೂ ಜಯರಾಂ ಎಂಬ ಪ್ರಾಣಿ ಪ್ರಿಯರ ಸಹೃದಯಿ ತಂಡದ ಸದಸ್ಯರು ಮೈಸೂರಿನ ಇನ್ಫೋಸಿಸ್  ಫೌಂಡೇಶನ್ ನ ಪೀಪಲ್ ಫಾರ್ ಎನಿಮಲ್ ಎನ್ನುವ ಪ್ರಾಣಿದಯಾ ಸಂಘಕ್ಕೆ ಕರೆ ಮಾಡಿ ಕುದುರೆ ಸಂಕಷ್ಟ ವಿವರಿಸಿದ್ದಾರೆ‌.

ಇದಕ್ಕೆ ತಕ್ಷಣವೇ ಸ್ಪಂದಿಸಿದ ಪೀಪಲ್ ಫಾರ್ ಎನಿಮಲ್ ಸಂಸ್ಥೆ ಪ್ರಾಣಿ ಸಾಗಿಸುವ ಆ್ಯಂಬುಲೆನ್ಸ್ ನೊಂದಿಗೆ ಗ್ರಾಮಕ್ಕೆ ಆಗಮಿಸಿ ಆ ಕುಂಟು ಕುದುರೆಯನ್ನು ವಾಹನದಲ್ಲಿ ಚಿಕಿತ್ಸೆಗೆ ಕರೆದೊಯ್ದಿದ್ದಾರೆ‌.

ಊರಿನ ಪ್ರಾಣಿ ಸಹೃದಯ ತಂಡದ ಸದಸ್ಯರು ಮಾಡಿದ ಈ ಮಾನವೀಯತೆ  ಕೆಲಸಕ್ಕೆ‌ ಜನರಿಂದ  ಮೆಚ್ಚುಗೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next