Advertisement

ಮಾನವೀಯತೆಯೇ ನಿಜ ಭಕ್ತಿ: ಪಾಳಾ ಶ್ರೀ

04:27 PM Aug 17, 2022 | Team Udayavani |

ವಾಡಿ: ದೇವರ ಮೇಲೆ ಭಕ್ತಿ ಹೊಂದುವುದು ಆತ್ಮಶಕ್ತಿಯ ನಂಬಿಕೆ. ಆದರೆ ಮಾನವೀಯತೆ ಎಂಬುದು ಮನುಷ್ಯನ ನಿಜವಾದ ಭಕ್ತಿಯಾಗಿದೆ ಎಂದು ಪಾಳಾ ಕಟ್ಟಿಮನಿ ಹಿರೇಮಠದ ಶ್ರೀ ಗುರುಮೂರ್ತಿ ಸ್ವಾಮೀಜಿ ನುಡಿದರು.

Advertisement

ಶ್ರಾವಣ ಮಾಸಾಚರಣೆ ನಿಮಿತ್ತ ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವೀರಶೈವ ಲಿಂಗಾಯಿತ ಸಮಾಜದ ವತಿಯಿಂದ ಏರ್ಪಡಿಸಲಾಗಿದ್ದ ಶರಣ ಪಲ್ಲಕ್ಕಿ ಉತ್ಸವದ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು. ದೇವರ ಧ್ಯಾನ ಎಂಬುದು ಜೀವನದ ನಿಜ ಮಾರ್ಗದ ತಪಸ್ಸು ಇದ್ದಂತೆ. ಸುಸಂಸ್ಕೃತ ಮೌಲ್ಯಗಳನ್ನು ಅಳವಡಿಸಿಕೊಂಡವರು ಸದಾ ಸಮಾಜದ ಒಳಿತನ್ನೇ ಬಯಸುತ್ತಾರೆ. ಅಂತಹ ಸಜ್ಜನರಿಂದಲೇ ಧರ್ಮ ಕಾರ್ಯಗಳು ಮುಂದೆ ಸಾಗುತ್ತವೆ ಎಂದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಶಾಂತಪ್ಪ ಶೆಳ್ಳಗಿ, ವೀರಶೈವ ಲಿಂಗಾಯಿತ ಸಮಾಜದ ಅಧ್ಯಕ್ಷ ಶರಣಗೌಡ ಪಾಟೀಲ ಚಾಮನೂರ, ಕಾರ್ಯದರ್ಶಿ ಬಸವರಾಜ ಕಿರಣಗಿ, ಮುಖಂಡರಾದ ಅಣ್ಣಾರಾವ ಪಸಾರೆ, ಭೀಮಶಾ ಜಿರೊಳ್ಳಿ, ಶಿವಶಂಕರ ಕಾಶೆಟ್ಟಿ, ಶಂಕ್ರಯ್ಯಸ್ವಾಮಿ ಮದರಿ, ಪರುತಪ್ಪ ಕರದಳ್ಳಿ, ಮಲ್ಲಣಗೌಡ ಗೌಡಪ್ಪನೋರ, ಸಂಗಣ್ಣ ಇಂಡಿ, ನಿಂಗಣ್ಣ ದೊಡ್ಡಮನಿ, ವೀರಣ್ಣ ಯಾರಿ, ಕಾಶೀನಾಥ ಶೆಟಗಾರ, ಅರುಣಕುಮಾರ ಪಾಟೀಲ ಹಾಗೂ ನೂರಾರು ಭಕ್ತರು ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡಿದ್ದರು. ನಂತರ ದೇವಸ್ಥಾನದಲ್ಲಿ ಯುವಕರಿಂದ ಭಜನೆ ಕಾರ್ಯಕ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next