Advertisement
ನಗರದ ತುಳಜಾಭವಾನಿ ನರ್ಸಿಂಗ್ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸಕಾರ್ಯಕ್ರಮದಲ್ಲಿ ಶರಣರು ಹಾಗೂ ಕಾಯಕ ಸದೃಢ ಆರೋಗ್ಯ ಹಾಗೂ ಯುವಕರು ವಿಷಯದ ಕುರಿತು ಉಪನ್ಯಾಸ ಮಂಡಿಸಿದ ಅವರು, ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ. ಮನುಷ್ಯನಿಂದು ಎಲ್ಲ ರಂಗಗಳಲ್ಲಿ ಸಾಕಷ್ಟು ಸಾಧನೆ ಮಾಡುತ್ತಿದ್ದಾನೆ. ಆದರೆ ಅತಿಯಾದ ಆಸೆಯಿಂದ ನೆಮ್ಮದಿ ಕಳೆದುಕೊಂಡಿದ್ದಾನೆ ಎಂದರು.
ಆರೋಗ್ಯ ಇಲ್ಲದಿದ್ದರೆ ಎಲ್ಲವೂ ಶೂನ್ಯ. ಅತಿಯಾದ ಸ್ವೇಚ್ಛಾಚಾರದ ಜೀವನ ಭವಿಷ್ಯಕ್ಕೆ ಮಾರಕವಾಗಲಿದೆ. ವ್ಯಕ್ತಿತ್ವವನ್ನೇ ಬಲಿ ಪಡೆಯುವ ಮನೋವಿಕಾರ ಗುಣಗಳನ್ನು ಬಿಡದಿದ್ದರೆ ಜೀವನ ನರಕವಾಗುತ್ತದೆ. ಕಾರ್ಖಾನೆಗಳು ಹೊರ ಸೂಸುವ ಪರಿಸರಕ್ಕೆ ಧಕ್ಕೆ ತರುವ ರಾಸಾಯನಿಕಯುಕ್ತ ತ್ಯಾಜ್ಯ ವಾವು, ನೀರು ಸೇರಿದಂತೆ ಇಡಿ ಪರಿಸರಕ್ಕೆ ಮಾರಕವಾಗಿ ಪರಿಣಮಿಸಿದೆ. ಇದರಿಂದ
ಮನುಷ್ಯ ಮಾತ್ರವಲ್ಲ ಜಲಚರಗಳು, ಪಶು, ಪಕ್ಷಿಗಳ ಸಂಕುಲಕ್ಕೂ ಸಂಚಕಾರ ತಂದಿದೆ. ಇನ್ನಾದರೂ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು ಎಂದರು. ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ತಾಲೂಕಾಧ್ಯಕ್ಷ ಯು.ಎನ್.ಕುಂಟೋಜಿ ಮಾತನಾಡಿದರು. ಡಾ| ಪ್ರಭಾವತಿ ಕಾಳೆ ಅಧ್ಯಕ್ಷತೆ ವಹಿಸಿದ್ದರು. ಸೋಮಶೇಖರ ಕುರ್ಲೆ, ಎಸ್. ವೈ. ನಡುವಿನಕೇರಿ, ಲಲಿತಾ ಯಲಿಗಾರ, ಮುತ್ತಣ್ಣ ಕಬಾಡೆ, ರಾಜಶೇಖರ ಕಳಕಳಮಠ, ದಿಲೀಪಕುಮಾರ ಮರಾಠೆ, ಹನುಮಂತ ಬತಗುಣಕಿ, ಅಲ್ಪಾ ಡಿ, ಅನಿಲ ತರಣಳ್ಳಿ, ಸೋಮನಾಥ ಬಿರಾದಾರ, ಆದರ್ಶ ನಾಯಕ, ನರಸಿಂಹ ಗುರುವ, ಜಾವೇದ ಮುಲ್ಲಾ, ಶಿವಾನಂದ ಬೀಳಗಿ ಇದ್ದರು.