Advertisement

Budget; ಮನುಷ್ಯತ್ವ ಇಲ್ಲ,ಉತ್ತರಕನ್ನಡ ಜಿಲ್ಲೆಯ ಜನರಿಗೆ ಅವಮಾನ: ಅನಂತಮೂರ್ತಿ

07:41 PM Feb 16, 2024 | Team Udayavani |

ಶಿರಸಿ: ರಾಜ್ಯ ಕಾಂಗ್ರೆಸ್ ಸರಕಾರ ಜಿಲ್ಲೆಯ ಜನರಿಗೆ ಅವಮಾನ ಮಾಡಿದೆ. ಉತ್ತರ ಕನ್ನಡದ ಜನರಿಗೆ ನ್ಯಾಯ ಕೊಡಿಸಲಾಗದ, ಜನರ ಸ್ವಾಭಿಮಾನಕ್ಕೆ ಪೆಟ್ಟು‌ಕೊಟ್ಟ, ಅಸ್ಪತ್ರೆ ಕೊಡಿಸಲು ವಿಫಲರಾದ ಜಿಲ್ಲಾ ಉಸ್ತುವಾರಿ ಸಚಿವರು ತತ್ ಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಾಮಾಜಿಕ ಹೋರಾಟಗಾರ ಹಾಗೂ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಅಸಮಧಾನ ಹೊರ ಹಾಕಿದ್ದಾರೆ.

Advertisement

ಸಚಿವರಿಗೆ ಜಿಲ್ಲೆಯ‌ಜನರ ಬಗ್ಗೆ ಕರುಣೆ ಇಲ್ಲ. ಸರಕಾರ ಬಂದು 9 ತಿಂಗಳಾದರೂ ಅಸ್ಪತ್ರೆ ಬಗ್ಗೆ ಒಂದೇ ಒಂದು ಸಭೆ ಇಲ್ಲ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಘೋಷಣೆಯಾಗಿದ್ದ ಆಸ್ಪತ್ರೆಗೆ ಹಣ ಬಿಡುಗಡೆ ಇಲ್ಲ. ತಮಗೆ ಲಾಭ ಆಗುವ ಯೋಜನೆಗೆ ಸಾವಿರಾರು ಕೋಟಿ ಕೊಡುವವರಿಗೆ, ಆಸ್ಪತ್ರೆಗೆ ರೂಪಾಯಿ ಕೂಡ ಇಲ್ಲ, ಅಲ್ಲಿಗೆ ಸರ್ಕಾರಕ್ಕೆ ಮನುಷ್ಯತ್ವ ಇಲ್ಲ ಅಂತ ಮನವರಿಕೆಯಾಗಿದೆ. ಜನ ರಕ್ತದ ಮಡುವಿನಲ್ಲಿ ರಸ್ತೆ ಮೇಲೆ ಬಿದ್ದು ಒದ್ದಾಡುವಾಗ ಪಡುವ ನೋವು, ಅಸ್ಪತ್ರೆಗಾಗಿ ಮಂಗಳೂರಿಗೆ ಹೋಗುವಾಗ ಪಡುವ ಕಷ್ಟದ ಅರಿವೇಕೆ ಆಗುವುದಿಲ್ಲ. ಕಳೆದ 2 ಬಜೆಟ್ ನಲ್ಲಿ ಹಣ ಕೊಡದೇ ತಮಾಷೆ ಮಾಡುತ್ತಿದ್ದಂತೆ ಅಲ್ಲವಾ ಎಂದು ಪ್ರಶ್ನಿಸಿದ್ದಾರೆ.

ಇಷ್ಟು ಹೋರಾಟ ಆದರೂ ಒಂದೇ ಒಂದು ಮಾತನಾಡದ ನೀವು ಶಾಸಕನಾಗಿ ಆಯ್ಕೆಯಾದರೆ ಸ್ವಂತ ಹಣದಿಂದ ಅಸ್ಪತ್ರೆ ಮಾಡುತ್ತೇನೆ ಎಂದು ಬದ್ಧತೆಯಿಂದ ಹೇಳಿದ್ದೀರಾ ಅಥವಾ ತಮಾಷೆ ಮಾಡಿದ್ದೀರಾ ತಿಳಿಸಿ. ಆಸ್ಪತ್ರೆ ಮಾಡುವುದಿಲ್ಲ ಅಂತ ಆದರೆ ಹೇಳಿಬಿಡಿ, ನಮಗೆ ಏನು ಮಾಡಬೇಕೆಂದು ಗೊತ್ತಿದೆ ಎಂದಿದ್ದಾರೆ.

ಮುಂದಿನ ದಿನದಲ್ಲಿ ಜಿಲ್ಲೆಯ ಎಲ್ಲಾ ಗ್ರಾಮದಲ್ಲಿ ಓಡಾಡಿ ಜನಾಂದೋಲನ ನಿರ್ಮಾಣ ಮಾಡಿ, ನಿಮ್ಮ ರಾಜೀನಾಮೆ ಮತ್ತು ಆಸ್ಪತ್ರೆ ನಿರ್ಮಾಣಕ್ಕೆ ಹೋರಾಟ ಮಾಡುತ್ತೇವೆ.ಹೋರಾಟದಿಂದ ಏನಾಗುವುದು ಅಂತ ತಾತ್ಸಾರ ಬೇಡ , ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದೇ ಹೋರಾಟದಿಂದ ಎಂದು ಕಿಡಿ ಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next