Advertisement

ಮಾನವೀಯ ಕಾರ್ಯಕ್ಕೆ ಸಾಕ್ಷಿಯಾದ ಪೊಲೀಸ್ ಮಲ್ಲಿಕಾರ್ಜುನ ಸವದತ್ತಿ

04:45 PM Aug 27, 2021 | Team Udayavani |

ದಾಂಡೇಲಿ : ಅವರು ದಕ್ಷತೆ ಹಾಗೂ ಮಾನವೀಯ ಕಾರ್ಯಗಳ ಮೂಲಕ ದಾಂಡೇಲಿಯ ಜನಪ್ರಿಯ ಪೊಲೀಸೆಂಬ ಹೆಗ್ಗಳಿಕೆಗೆ ಪಾತ್ರರಾದವರು. ಸಂಕಷ್ಟಕ್ಕೆ ಸ್ಪಂದಿಸುವ ಸ್ನೇಹಜೀವಿ. ಇನ್ನು ಪ್ರಾಣಿಗಳೆಂದರೇ ವಿಶೇಷ ಪ್ರೀತಿ, ವಾತ್ಸಲ್ಯ. ದಾಂಡೇಲಿಯಲ್ಲಿ ಅನೇಕನೇಕ ಬಾರಿ ದನಕರುಗಳು ಅಪಘಾತಕ್ಕೆ ತುತ್ತಾದಾಗ ತಕ್ಷಣವೆ ಧಾವಿಸಿ ಉಪಚರಿಸುವ ಅವರು ಇಂದು ಸಹ ನಾಯಿಗಳಿಗೆ ಬಲಿಯಾಗುತ್ತಿದ್ದ ಆಗ ತಾನೆ ಜನಿಸಿದ ಕರುವನ್ನು ರಕ್ಷಿಸಿ ನಿಜವಾದ ಗೋ ಪ್ರೇಮವನ್ನು ಮೆರೆಯುವುದರ ಜೊತೆಯಲ್ಲಿ ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ. ಹಾಗಾದ್ರೆ ಅವರಾರು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ ನೋಡಿ.

Advertisement

ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಹವಾಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಲ್ಲಿಕಾರ್ಜುನ ಸವದತ್ತಿಯವರು ಶುಕ್ರವಾರ ಬೆಳಿಗ್ಗೆ ಗುಡ್ ಮಾರ್ನಿಂಗ್ ರೌಂಡ್ಸ್ಗೆಂದು ತೆರಳಿ ಹಿಂದುರುಗಿ ಬರುತ್ತಿರುವಾಗ 14ನೇ ಬ್ಲಾಕ್ ಪ್ರದೇಶದಲ್ಲಿ ಬಿಡಾಡಿ ಆಕಳೊಂದು ಮುದ್ದಾದ ಕರುವಿಗೆ ರಸ್ತೆ ಬದಿಯಲ್ಲೆ ಜನ್ಮ ನೀಡಿದೆ. ಆಗ ತಾನೆ ಜನ್ಮ ಪಡೆದಿದ್ದ ಕರುವನ್ನು ತಿಂದು ಮುಗಿಸಲೆಂದು ಬಿಡಾಡಿ ನಾಯಿಗಳು ಹೊಂಚು ಹಾಕುತ್ತಿದ್ದವು. ಇನ್ನೂ ಕರು ಜನಿಸುತ್ತಿದ್ದಂತೆಯೆ ಆಕಳಿನಿಂದ ಹೊರಬರುವ ಮಾಂಸ ಇತ್ಯಾದಿಗಳನ್ನು ತಿನ್ನಲೆಂದು ಕಾಗೆಗಳು ಮಿಕ್ಕುಳಿದ ಕಾಗೆಗಳಿಗೆ ತನ್ನ ಭಾಷೆಯಲ್ಲೆ ಅಹ್ವಾನ ನೀಡುತ್ತಿತ್ತು.

ಇದನ್ನೂ ಓದಿ:ಪಕ್ಕದಲ್ಲಿ ಅಸಹ್ಯ ಬಿದ್ದಿದೆ ಎನ್ನುತ್ತಾರೆ ರಾಮ್‌ಜಿ!

ಇದನ್ನು ಗಮನಿಸಿದ ಮಲ್ಲಿಕಾರ್ಜುನ ಸವದತ್ತಿಯವರು ಮೊದಲೆ ಹೈನುಗಾರಿಕೆ ಮತ್ತು ಕೃಷಿಯ ಬಗ್ಗೆ ಅನುಭವವಿರುವ ಹಿನ್ನಲೆಯಲ್ಲಿ ನಿತ್ರಾಣವಾಗಿ ಬಿದ್ದಿದ್ದ ಕರುವನ್ನು ತನ್ನ ಕೈಯ್ಯಾರೆ ಆಕಳಿನ ಬಳಿ ತೆಗೆದುಕೊಂಡು ಹಾಲು ಕುಡಿಸಿದರು. ಸ್ವಲ್ಪ ಹೊತ್ತಿನಲ್ಲಿ ಕರು ಚೇತರಿಸಿಕೊಳ್ಳಲಾರಂಭಿಸಿತು. ಎದ್ದು ನಿಲ್ಲಲು ಆಗದೆ ಬಸವಳಿದಿದ್ದ ಕರುವಿಗೆ ಹಾಲು ಕುಡಿಸಿ, ಚೇತರಿಸುತ್ತಿದ್ದಂತೆಯೆ ಮಲ್ಲಿಕಾರ್ಜುನ ಅವರು ಪಶುವೈದ್ಯ ಆಸ್ಪತ್ರೆಯ ಸಂದೀಪ ಪಾಟೀಲ ಅವರಿಗೆ ಕರೆ ಮಾಡಿ ಬರಲು ವಿನಂತಿ ಮಾಡಿದರು. ಇಂತಹ ಅವಘಡಗಳ ಸಂದರ್ಭದಲ್ಲಿ ತಕ್ಷಣವೆ ಹಾಜರಾಗುವ ಸಂದೀಪ ಪಾಟೀಲ ಅವರು ಕೂಡಲೆ ಸ್ಥಳಕ್ಕಾಗಮಿಸಿ ಕರು ಮತ್ತು ಆಕಳಿಗೆ ಸೂಕ್ತ ರೀತಿಯ ಚಿಕಿತ್ಸೆಯನ್ನು ನೀಡಿ ಆರೈಕೆ ಮಾಡಿದರು.

ಈ ಸಂದರ್ಭದಲ್ಲಿ ಸ್ಥಳೀಯರುಗಳಾದ ವಿಷ್ಣುಪ್ರಸಾದ ಪುರೋಳಕರ, ಮಹೇಶ ಸಾವಂತ ಹಾಗೂ ಸ್ದಳೀಯರು ಸಹಕರಿಸಿದ್ದರಲ್ಲದೇ, ಆಕಳಿಗೆ ತರಕಾರಿ ಇನ್ನಿತರ ಆಹಾರ ಪದಾರ್ಥಗಳನ್ನು ತಂದು ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ. ಸುಮಾರು ಒಂದುವರೆ ಗಂಟೆಗಳವರೆಗೆ ಮಲ್ಲಿಕಾರ್ಜುನ ಸವದತ್ತಿಯವರು ಅಲ್ಲೆ ಇದ್ದು ಸ್ಥಳೀಯರ ಸಹಕಾರದಲ್ಲಿ ಕರುವನ್ನು ರಕ್ಷಿಸುವುದರ ಜೊತೆಗೆ ಆಕಳಿಗೂ ರಕ್ಷಣೆಯನ್ನು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರಲ್ಲದೇ ಮಾನವೀಯ ಕೈಂಕರ್ಯಕ್ಕೆ ಸಾಕ್ಷಿಯಾದರು.

Advertisement

ಆಕಳು ಸ್ಥಳೀಯ ಗಾಂಧಿನಗರ ನಿವಾಸಿಯೊಬ್ಬರಿಗೆ ಸೇರಿದ್ದೆನ್ನಲ್ಲಾಗಿದ್ದು, ಕೊನೆಪಕ್ಷ ಗಬ್ಬದಲ್ಲಿರುವ ಆಕಳುಗಳನ್ನು ಈ ಸಮಯದಲ್ಲಿ ಹೊರಗಡೆ ಬಿಡದೆ ಮನೆಯಲ್ಲೆ ಕಟ್ಟಿ ಸಾಕಬೇಕೆಂಬ ಮನವಿ ಗೋಪ್ರೇಮಿಗಳಾದ್ದಾಗಿದೆ.

ಸಂದೇಶ್.ಎಸ್.ಜೈನ್

 

Advertisement

Udayavani is now on Telegram. Click here to join our channel and stay updated with the latest news.

Next