ಬ್ರಹ್ಮಾವರ: ವಿಶ್ವವೇ ಒಪ್ಪಿಕೊಂಡ ಸಂತ ಸ್ವಾಮಿ ವಿವೇಕಾನಂದರು ತೋರಿಸಿ ಕೊಟ್ಟ ಮಾರ್ಗದಲ್ಲಿ ನಡೆದರೆ ಜೀವನದಲ್ಲಿ ಯಶಸ್ಸು ಖಂಡಿತ ಹಾಗೂ ಜೀವನ ಸಾರ್ಥಕ ಎಂದು ಬೆಂಗಳೂರು ಹಾರೋಹಳ್ಳಿ ಶ್ರೀ ರಾಮಕೃಷ್ಣ ಯೋಗಾಶ್ರಮದ ಅಧ್ಯಕ್ಷ ಪೂಜ್ಯ ಸ್ವಾಮಿ ಯೋಗೇಶ್ವರಾನಂದಜಿ ಮಹಾರಾಜ್ ಹೇಳಿದರು.
ಬಾರಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾಮಿ ಪುರುಷೋತ್ತಮಾನಂದಜಿ ಹುಟ್ಟೂರು ಸಾಂಸ್ಕೃತಿಕ ಪರಿಷತ್ ಬಾರಕೂರು, ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿವನ ಟ್ರಸ್ಟ್, ಆಶ್ರಯದಲ್ಲಿ ನಡೆದ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣದ 125ನೇ ವರ್ಷಾಚರಣೆ ಪ್ರಯುಕ್ತ ಭವ್ಯ ಭಾರತದ ನಿರ್ಮಾಣದಲ್ಲಿ ಸ್ವಾಮಿ ವಿವೇಕಾನಂದರ ಸಂದೇಶದ ಪಾತ್ರ ಎಂಬ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ವಿದ್ಯೆ ಜತೆಯಲ್ಲಿ ಮಾನವೀಯ ಮೌಲ್ಯ ಅಳವಡಿಕೆಯ ಮಹತ್ವ ತಿಳಿಸಿದರು. ಅತಿಥಿಯಾಗಿ ನಿವೃತ್ತ ಪ್ರಾಂಶುಪಾಲ ಬಿ. ಸೀತಾರಾಮ ಶೆಟ್ಟಿ ಅವರು ರಾಮಕೃಷ್ಣ ಮಠಕ್ಕೆ ಮರೆಯಲಾರದ ಸೇವೆ ನೀಡಿದ ಮೂಲತಃ ಬಾಕೂìರಿನವರಾದ ಸ್ವಾಮಿ ಪುರುಷೋತ್ತಮಾನಂದಜಿ ಅವರ ಜೀವನ ವೃತ್ತಾಂತ ತಿಳಿಸಿದರು.
ಪ್ರಾಂಶುಪಾಲ ಪ್ರೊ| ವಸಂತರಾಜ್ ಶೆಟ್ಟಿ ಕೆ. ಅಧ್ಯಕ್ಷತೆ ವಹಿಸಿ ಕಾಲೇಜು ನಡೆಸುವ ಇಂತಹ ಹಲವು ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ಸರ್ವಾಂಗೀಣ ಬೆಳವಣಿಗೆಯನ್ನು ಹೊಂದುವಂತೆ ಕರೆ ನೀಡಿದರು. ಪರಿಷತ್‌ನ ಅಧ್ಯಕ್ಷ ರಾಮಭಟ್ಟ ಸಜಂಗದ್ದೆ ಸ್ವಾಗತಿಸಿದರು. ಜಿಲ್ಲಾ ಯೋಗ ಸಂಘಟಕ ಅಶೋಕ ಸಿ. ಪೂಜಾರಿ ವಂದಿಸಿದರು.
ಕಾಲೇಜಿನ ದೈ.ಶಿ. ನಿರ್ದೇಶಕಿ ಜಯಭಾರತಿ ಎ. ಕಾರ್ಯಕ್ರಮ ನಿರೂಪಿಸಿದರು.