Advertisement

ವಿವೇಕಾನಂದರ ಸಾಧನೆ ಪ್ರೇರಣೆಯಾಗಲಿ

12:01 PM Jan 13, 2020 | Naveen |

ಹುಮನಾಬಾದ: ಸ್ವಾಮಿ ವಿವೇಕಾನಂದರನ್ನು ಭಾರತ ದೇಶ ಮಾತ್ರವಲ್ಲ ಇಡೀ ಜಗತ್ತು ಬಹಳ ಗೌರವಾದರಗಳಿಂದ ನೆನಪಿಸಿಕೊಳ್ಳುತ್ತದೆ. ಸ್ವಾಮಿ ವಿವೇಕಾನಂದರ ಜೀವನ ಸಾಧನೆ ಯುವಕರಿಗೆ ಪ್ರೇರಣೆಯಾಗಬೇಕು ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.

Advertisement

ಪಟ್ಟಣದ ಶ್ರೀ ವಿವೇಕಾನಂದ ಶಿಕ್ಷಣ ಸಂಸ್ಥೆ ವತಿಯಿಂದ ಏರ್ಪಡಿಸಲಾಗಿದ್ದ ವಿವೇಕಾನಂದರ 157ನೇ ಜನ್ಮದಿನ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದ ಪ್ರಗತಿ ಯುವ ಜನರಿಂದ ಮಾತ್ರ ಸಾಧ್ಯ ಎಂಬುದು ವಿವೇಕಾನಂದರ ಅಂದೇ ಹೇಳಿದ್ದಾರೆ. ಚಿಕ್ಯಾಗೋದಲ್ಲಿನ ಅವರ ಭಾಷಣ ಭಾರತೀಯರೆಲ್ಲರೂ ಹೆಮ್ಮೆ ಪಡುವಂತಹ ಸಂಗತಿ ಎಂದು ಹೇಳಿದರು.

ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಬೇಕು. ಪ್ರತಿಯೊಬ್ಬ ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಪಾಠದ ಜತೆಗೆ ಮಕ್ಕಳನ್ನು ಆಟದಲ್ಲಿ ಕೂಡ ತೊಡಗಿಸಬೇಕು. ಮಕ್ಕಳು ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಕಾರಣವಾಗುತ್ತದೆ. ಬೀದರ ಜಿಲ್ಲೆ ರಾಜ್ಯದ ನಕಾಶೆಯಲ್ಲಿ ಮೇಲಿದೆ. ಆದರೆ, ಫಲಿತಾಂಶದಲ್ಲಿ ಮಾತ್ರ ಕೆಳಗಿದೆ. ಇದು ಎಷ್ಟು ಸರಿ? ಈ ಭಾಗದ ಶೈಕ್ಷಣಿಕ ಪ್ರಗತಿಗೆ ವಿವಿಧ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಫಲಿತಾಂಶ ಸುಧಾರಣೆಗೆ ಮುಂದಾಗಬೇಕು. ವಿದ್ಯಾರ್ಥಿಗಳು ಕೂಡ ಕಷ್ಟಪಟ್ಟು ಓದಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಪಂ ಉಪಾಧ್ಯಕ್ಷ ಲಕ್ಷ್ಮಿಣರಾವ ಬುಳ್ಳಾ ಮಾತನಾಡಿ, ನಮ್ಮ ದೇಶದ ಸಾಂಸ್ಕೃತಿಕ ಸಿರಿವಂತಿಕೆಯನ್ನು ಆಧ್ಯಾತ್ಮಿಕ ಸಂದೇಶಗಳ ಮೂಲಕ ಪ್ರಪಂಚಕ್ಕೆ ತೋರಿಸಿ ಭಾರತದ ಘನತೆ ಹೆಚ್ಚಿಸಿದ ಸ್ವಾಮಿ ವಿವೇಕಾನಂದರು ನಮಗೆಲ್ಲ ಸ್ಫೂರ್ತಿ ಮತ್ತು ಆದರ್ಶಪ್ರಾಯರು.

Advertisement

ಎಲ್ಲ ವಿದ್ಯಾರ್ಥಿಗಳು ವಿವೇಕಾನಂದರ ಆದರ್ಶ ಅಳವಡಿಸಿಕೊಳ್ಳಬೇಕು. ಯುವ ಸಮೂಹ ದೀನದಲಿತರ ನೊಂದವರ ಧ್ವನಿಯಾಗುವುದರ ಜತೆಗೆ ಸಹಾಯ ಮನೋಭಾವ ಬೆಳೆಸಿಕೊಳ್ಳಬೇಕು ಎಂಬುದು ವಿವೇಕಾನಂದರು ಜಗತ್ತಿಗೆ ಸಂದೇಶ ನೀಡಿದ್ದಾರೆ. ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದ ಚರಿತ್ರೆ ತಿಳಿದುಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಉನ್ನತ ಹುದ್ದೆ ಪಡೆದ ಪ್ರಭುರೆಡ್ಡಿ ಹಾಗೂ ಲಕ್ಷ್ಮೀಕಾಂತ ಅವಳಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಉತ್ತಮ ಫಲಿತಾಂಶ ನೀಡಿದ ಸಂಸ್ಥೆ ಸಿಬ್ಬಂದಿಗಳಿಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.

ಸಂಸ್ಥೆ ದತ್ತಿ ರಮೇಶ ಗಾದಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಮಾಣಿಕಪ್ಪ ಗಾದಾ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಚಪ್ಪ ವಾಲಿ, ನಿಶಾ ತಾಳಂಪಳ್ಳಿ, ಯುವ ಮುಖಂಡ ಅಭಿಷೇಕ ಪಾಟೀಲ, ಶಿವಾನಂದ ಸ್ವಾಮಿ, ಮಹೇಶ ಅಗಡಿ, ಅನಿಲ ಪಲ್ಲರಿ, ಪ್ರಾಚಾರ್ಯ ಎಸ್‌.ಎಸ್‌. ಹೆಬ್ಟಾಳೆ, ಭೀಮಶಾ ಆರ್ಯ, ಎಂ.ಎ. ಫಯಾಜಖಾನ್‌, ವೆಂಕಟೇಶ ಜಾಜಿ, ಮಾಣಿಕಪ್ಪ ಜಾಜಿ,
ನಾಗಶೆಟ್ಟಿ ಶೇರಿಕಾರ, ಅಣ್ಣಾರಾವ ಪಾಟೀಲ, ಪ್ರಕಾಶ ಕಾಡಗೊಂಡ, ಜನಾರ್ಧನರೆಡ್ಡಿ, ಪದ್ಮಾಕರ ಕುಲಕರ್ಣಿ, ನಾಗರಾಜ ಚಿದ್ರಿ, ಗಿರೀಶ ಕಠೊಳ್ಳಿ, ಭೀಮರಾವ ಕುಲಕರ್ಣಿ, ಪ್ರಾಚಾರ್ಯ ಚಿಂಚೋಳ್ಳಿಕರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next