Advertisement
ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಸಂಪರ್ಕ ಸೇತುವೆಯಾಗಿರುವ ರಾಷ್ಟ್ರೀಯ ಹೆದ್ದಾರಿ 65ಕ್ಕೆ ಹೊಂದಿಕೊಂಡ, ಪಟ್ಟಣದಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಸುಸಜ್ಜಿತ ಬಸ್ ನಿಲ್ದಾಣದಲ್ಲಿ ಎಲ್ಲವೂ ಅಂದುಕೊಂಡಂತೆ ಮೂಲಸೌಲಭ್ಯಗಳು ಸುಸಜ್ಜಿತ ಆಗಿದ್ದರೆ ಇಲ್ಲಿ ಯಾವುದೇ ಸಮಸ್ಯೆಗಳೇ ಇರುತ್ತಿರಲಿಲ್ಲ. ಆದರೆ ಸುಸಜ್ಜಿತ ಇರುವುದು ಕೇವಲ ಕಟ್ಟಡ ಮಾತ್ರ. ಸೌಲಭ್ಯಗಳೆಲ್ಲ ಕಳಪೆ ಆಗಿರುವುದರಿಂದ ಪ್ರಯಾಣಿಕರು ಪ್ರತಿನಿತ್ಯ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
Related Articles
Advertisement
ಶೌಚಾಲಯದಲ್ಲಿ ಹೆಚ್ಚು ಹಣ ವಸೂಲಿ: ಬಸ್‌ನಿಂದ ಇಳಿದು ತುರ್ತಾಗಿ ಮೂತ್ರ ವಿಸರ್ಜನೆಗೆ ಹೋಗುವ ಪ್ರಯಾಣಿಕರಿಂದ 2ರಿಂದ 5 ರೂ. ಮತ್ತು ಶೌಚಕ್ಕೆ 8ರಿಂದ 10 ರೂ. ಶೌಚಾಲಯದಲ್ಲಿ ಪಡೆಯುತ್ತಿದ್ದಾರೆ. ಚೌಕಾಸಿ ಮಾಡಿದರೆ ಪ್ರಯಾಣಿಕರ ಜೊತೆಗೆ ಕಿರಿಕಿರಿ ಮಾಡುತ್ತಿದ್ದಾರೆ ಎಂಬ ಆರೋಪವಿದೆ. ಮೂತ್ರ ವಿಸರ್ಜನೆಗೆ ಹಣ ಪಡೆಯಲು ಅವಕಾಶವಿಲ್ಲ. ಶೌಚಕ್ಕೆ ರೂ.2ಮಾತ್ರ ತೆಗೆದುಕೊಳ್ಳಬೇಕೆಂಬ ನಿಯಮವಿದೆ. ಅದಕ್ಕೆ ನಮ್ಮಿಂದ ಯಾವುದೇ ತಕರಾರಿಲ್ಲ. ಆದರೆ ತುರ್ತು ಸಂದರ್ಭದಲ್ಲಿ ಹೀಗೆ ಹಿಂಸೆ ನೀಡುವುದು ಯಾವ ನ್ಯಾಯ ಎಂಬುದು ಸಾರ್ವನಿಕರ ಪ್ರಶ್ನೆ.
ಎಟಿಎಂ ಸೌಲಭ್ಯಕ್ಕೆ ಕಲ್ಪಿಸಿ: ಎರಡು ರಾಜ್ಯಗಳಿಗೆ ಸಂರ್ಪಕ ಸೇತುವೆಯಂತೆ ಇರುವ ಹುಮನಾಬಾದ ಬಸ್ ನಿಲ್ದಾಣದಲ್ಲಿ ತುರ್ತು ಸಂದರ್ಭದಲ್ಲಿ ಹಣವಿಲ್ಲದೇ ಇದ್ದಾಗ ಅದೆಷ್ಟೋ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ನಿಲ್ದಾಣದಲ್ಲಿ ಎಟಿಎಂ ಸೌಲಭ್ಯ ಅತ್ಯಂತ ಅವಶ್ಯವಿದೆ. ಬಹು ದಿನಗಳ ಬೇಡಿಕೆಯಾದ ಇದನ್ನು ಈಶಾನ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳು ಗಂಭೀರ ಪರಿಗಣಿಸದ ಕಾರಣ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದು, ಈಗಲಾದರೂ ಸಾಧ್ಯವಾದಷ್ಟು ಶೀಘ್ರ ಸೌಲಭ್ಯ ಕಲ್ಪಿಸಲು ಮುಂದಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯ.
ಜಾಹಿರಾತು ಶಬ್ದ ನಿಯಂತ್ರಿಸಿ: ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ ನಿಲ್ದಾಣದಲ್ಲಿ ಡಿಜಿಟಲ್ ಮಾಧ್ಯಮದ ಮೂಲಕ ಪ್ರಕಟಿಸುವ ಜಾಹಿರಾತು ಶಬ್ದ ಮಿತಿ ಮೀರುತ್ತಿರುವ ಕಾರಣ ಪ್ರಯಾಣಿಕರಿಗೆ ತೀವ್ರವಾದ ತೊಂದರೆ ಉಂಟಾಗುತ್ತಿದೆ ಎಂಬ ದೂರು ಕೇಳಿಬರುತ್ತಿದೆ. ನಿಷೇಧಿತ ಸ್ಥಳದಲ್ಲಿ ಮೂತ್ರ ವಿಸರ್ಜನೆ, ಬೈಕ್ ನಿಲ್ಲುಸುವವರ ವಿರುದ್ಧ ಮುಲಾಜಿಲ್ಲದೇ ದಂಡ ವಿಧಿಸಬೇಕು. ಶೌಚಕ್ಕೆ ಹಣ ಪಡೆಯುವ ಗುತ್ತಿಗೆದಾರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಶಬ್ದ ಮಾಲಿನ್ಯ ಉಂಟಾಗುವ ರೀತಿ ಜಾಹಿರಾತು ಪ್ರಕಟಿಸದಂತೆ ನಿಯಂತ್ರಿಸುವ ಮೂಲಕ ಪ್ರಯಾಣಿಕರ ನೆಮ್ಮದಿ ಕಾಪಾಡಬೇಕು ಎಂಬುದು ಸಾರ್ವಜನಿಕರ ಒತ್ತಾಸೆ.