ಹುಮನಾಬಾದ: ಹಳ್ಳಿಖೇಡ(ಬಿ)ದ ಸೀಮಿನಾಗನಾಥ ಜಾತ್ರೆ ಅಂಗವಾಗಿ ಶನಿವಾರ ರಾತ್ರಿ ರಥೋತ್ಸವ ವೈಭವದಿಂದ ನೆರವೇರಿತು. ದೇವಸ್ಥಾನದಲ್ಲಿ ಪ್ರತೀ ದೇವರಿಗೆ ವಿಶೇಷ ಮಂಗಳಾರತಿ ಬಳಿಕ ವೈವಿಧ್ಯಮಯ ವಾದ್ಯವೃಂದಗಳ ಸಮೇತ ದೇವಸ್ಥಾನದಲ್ಲಿ ಐದು ಪ್ರದಕ್ಷಿಣೆ ಹಾಕಿರು.
ಪಲ್ಲಕ್ಕಿ ರಥದತ್ತ ಸಾಗುತ್ತಿದ್ದಂತೆ ಪಟ್ಟಣದ ಚಿಕ್ಕ ಮಠದ ಪಂಡಿತಾರಾಧ್ಯ ಸ್ವಾಮೀಜಿ ರಥದಲ್ಲಿ ಆಸೀನರಾದರು. ಈ ವೇಳೆ ಭಕ್ತರಿಂದ ಶ್ರೀ ನಾಗೇಶ್ವರ ಮಹಾರಾಜಕೀ ಎಂಬ ಜೈ ಘೋಷಗಳು ಮಿಳಗಿದವು. ನಂತರ ರಥೋತ್ಸವವು ಆರಂಭಗೊಂಡಿತ್ತು. ಭಕ್ತರು ಖಾರಿಕ್, ಬಾಳೆಹಣ್ಣು, ಕಲ್ಲು ಸಕ್ಕರೆ ಇತ್ಯಾದಿ ರಥಕ್ಕೆ ಸಮರ್ಪಿಸಿ ಭಕ್ತಿಸೇವೆ ಸಲ್ಲಿಸಿದರು.
ತಹಶೀಲ್ದಾರ್ ನಾಗಯ್ಯಸ್ವಾಮಿ ಹಿರೇಮಠ, ಓಂಪ್ರಕಾಶ ಪ್ರಭಾ, ಪ್ರಧಾನ ಅರ್ಚಕ ಡಾ|ಅಶೋಕಸ್ವಾಮಿ ಹಾಲಾ, ಜಿಪಂ ಮಾಜಿ ಸದಸ್ಯ ಮಹಾಂತಯ್ಯ ತೀರ್ಥ, ಭೋಜಪ್ಪ ಭರಶಟ್ಟಿ, ರವೀಂದ್ರ ಪೊಲೀಸ್ ಪಾಟೀಲ, ಚಂದ್ರಜಾಂತ ಮಾಲಿ ಪಾಟೀಲ, ವೀರಶಟ್ಟೆಪ್ಪ ಭರಶೆಟ್ಟಿ, ಸಂದೀಪ ಪ್ರಭಾ, ನಾಗೇಶ ಪ್ರಭಾ, ಲಿಂಗರಾಜ ತಿಬಶೆಟ್ಟಿ, ಗುರುಲಿಂಗಯ್ಯ ಹಾಲಾ, ಗುರುನಾಥ ಗೌಡನಗುರು, ಸುಭಾಶ ತೇಲ್ಕರ್, ಶರಣಪ್ಪ ಭರಶೆಟ್ಟಿ, ಸೋಮನಾಥ ಓಲೊªಡ್ಡಿ, ನಾಗಪ್ಪ ಕಟಗಿ, ಸಂತೋಷ ಮಠಪತಿ, ವಿಷ್ಣುಕಾಂತ ಹೂಗಾರ, ಪವನ ಬಾವಗಿ, ಶರಣು ಹಜ್ಜರಗಿ, ಶಿವಕುಮಾರ ತಿಬಶಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.
ರಥೋತ್ಸವಕ್ಕೆ ಮುನ್ನ ಸುಡುಮದ್ದು ರಥೋತ್ಸವದ ಮೆರಗು ಹೆಚ್ಚಿಸಿತು. ಬೊಂಬೆ ಕುಣಿತ, ತಮಟೆ ವಾದ್ಯ, ಕಮಲಾಪುರ ಮೊದಲಾದ ಕಡೆಯ ವಾದ್ಯವೃಂದ ಉತ್ಸವಕ್ಕೆ ವಿಶೇಷ ಕಳೆ ತಂದುಕೊಟ್ಟವು. ಮಧ್ಯಾಹ್ನ ಆಯೋಜಿಸಿದ್ದ ಕುಸ್ತಿ ಪಂದ್ಯದಲ್ಲಿ ಅಂತಾರಾಜ್ಯ ಖ್ಯಾತಿಯ ವಿಜಯಪುರ, ಬೆಳಗಾವಿ, ಕಲಬುರಗಿ, ತೆಲಂಗಾಣದ ಹೈದ್ರಾಬಾದ್, ಮಹಾರಾಷ್ಟ್ರ ಪುಣೆ, ಸೊಲ್ಲಾಪುರ, ಮುಂಬೈ ಮೊದಲಾದ ಕಡೆಗಳಿಂದ ಆಗಮಿಸಿದ್ದ ಕುಸ್ತಿಪಟುಗಳು ಭಾಗವಹಿಸಿ, ಸಾಹಸ ಪ್ರದರ್ಶಿಸಿದರು.