Advertisement

ಹುಮನಾಬಾದ: 248 ಬೂತ್‌ಗಳಲ್ಲಿ ನೋಂದಣಿ

12:22 PM Apr 09, 2018 | Team Udayavani |

ಹುಮನಾಬಾದ: ವಿಧಾನ ಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಏಕ ಕಾಲಕ್ಕೆ ಆರಂಭಿಸಿದ ಮತದಾರರ ಮಿಂಚಿನ ನೋಂದಣಿ ಅಭಿಯಾನ ಕ್ಷೇತ್ರದ 248 ಬೂತ್‌ಗಳಲ್ಲಿ ರವಿವಾರ ನಡೆಯಿತು.

Advertisement

ಹುಮನಾಬಾದ್‌ ವಿಧಾನ ಸಭಾ ಕ್ಷೇತ್ರದ 248 ಬೂತ್‌ ಗಳಲ್ಲಿ ಆಯಾ ವ್ಯಾಪ್ತಿಯ ಬಿಎಲ್‌ಒ ಹಾಗೂ ಚುನಾವಣೆಗೆ ನಿಯೋಜನೆಗೊಂಡ ಸಿಬ್ಬಂದಿ ಬೂತ್‌ಗಳಲ್ಲಿ ಜನರಿಂದ ಅರ್ಜಿಗಳನ್ನು ಪಡೆದರು. ಕೆಲ ಬೂತ್‌ಗಳಲ್ಲಿ ಜನರಿಗಾಗಿ ಕಾಯುತ್ತಿದ್ದ ದೃಶ್ಯ ಕೂಡ ಕಂಡುಬಂತು.

ಬಸವಕಲ್ಯಾಣ ಸಹಾಯಕ ಆಯುಕ್ತ ಪ್ರೀತಮ್‌ ಬಸ್ಲಾಪುರೆ ಖುದ್ದು ವಿವಿಧ ಬೂತ್‌ಗಳಿಗೆ ಭೇಟಿನೀಡಿ ಅಭಿಯಾನದ ಪ್ರಕ್ರಿಯೆಗಳನ್ನು ಪರಿಶೀಲಿಸಿದರು. ಅಲ್ಲದೇ ಮತದಾರರ ಪಟ್ಟಿಯಲ್ಲಿ ಸೆರ್ಪಡೆ, ತಿದ್ದುಪಡಿಗೆ ಬಂದ ಅರ್ಜಿಗಳನ್ನು ವೀಕ್ಷಿಸಿದರು. 

ಮತದಾರರ ಪಟ್ಟಿಗೆ ಹೆಸರು ಸೇರಿಸಲು ಏ.14 ಕೊನೆಯ ದಿನವಾಗಿರುವ ಹಿನ್ನೆಲೆಯಲ್ಲಿ ಬೂತ್‌ ಮಟ್ಟದಲ್ಲಿ ಮತದಾರರ ಅನುಕೂಲಕ್ಕಾಗಿ ಅಭಿಯಾನ ಪ್ರಾರಂಭಿಸಿದ್ದು, 18 ವರ್ಷ ಪೂರೈಸಿದ ಪ್ರಜೆಗಳು ಹೊಸ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ವಾಸಸ್ಥಳ ಬಡಲಾವಣೆ, ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು, ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next