ಹುಮನಾಬಾದ: ಪ್ಯಾರಾ ಮೆಡಿಕಲ್ ಅಧ್ಯಯನ ಮಾಡಿದವರಿಗೆ ಸಾಕಷ್ಟು ಉದ್ಯೋಗ ಅವಕಾಶಗಳಿವೆ. ಉದ್ಯೋಗ ಕೊರತೆ ಎದುರಿಸುತ್ತಿರುವ ಈ ಭಾಗದ ಯುವಕರು ಈ ಅಧ್ಯಯನ ಪೂರ್ಣಗೊಳಿಸಿದಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಮೇವರ್ ವಿಶ್ವವಿದ್ಯಾಲಯದ ನಿದೇರ್ಶಕ ಕುಮಾರ ರಾಜೇಶ ಸಲಹೆ ನೀಡಿದರು.
ಚಿಟಗುಪ್ಪ ತಾಲೂಕು ಮನ್ನಾಎಖೆVಳ್ಳಿ ಹತ್ತಿರದ ಬೋರಾಳ ಕಂದಾಯ ವ್ಯಾಪ್ತಿ ಗ್ರಾಮದ ಆರ್‌ಆರ್‌ಆರ್ ಶಿಕ್ಷಣ ಸಂಸ್ಥೆಯಡಿ ಆಯೋಜಿಸಿದ್ದ ಪ್ಯಾರಾ ಮೆಡಿಕಲ್ ಮತ್ತು ಆರೋಗ್ಯ ವಿಜ್ಞಾನ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಉದ್ಯೋಗವಿಲ್ಲ ಎಂದು ಕೈಕಟ್ಟಿ ಕುಳಿತರೆ ಉದ್ಯೋಗ ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ. ಬದಲಿಗೆ ಸ್ಪಧಾತ್ಮಕ ಯುಗವಾದ ಇಂದು ಸಾಕಷ್ಟು ಆಧುನಿಕ ಕೋರ್ಗಳು ಬಂದಿವೆ. ಅವುಗಳಲ್ಲಿ ಪ್ಯಾರಾ ಮೇಡಿಕಲ್ ಕೂಟ ಒಂದು. ಇದರಡಿಯಲ್ಲಿ 20ಕ್ಕೂ ಅಧಿಕ ವಿಭಾಗಗಳಿವೆ ಎಂದರು. ವಿದ್ಯಾವಂತ ನಿರುದ್ಯೋಗಿಗಳ ಪಟ್ಟಿಗೆ ನಿಮ್ಮ ಹೆಸರು ಸೇರ್ಪಡೆಗೆ ಅವಕಾಶ ನೀಡದೇ ಇಚ್ಛೆಗನುಸಾರ ಕೋರ್ ಆಯ್ಕೆ ಮಾಡಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಪಾಂಡುರಂಗ ಕಿರಣ ಮಾತನಾಡಿ, ನಿಸರ್ಗದ ಮಡಿಲಲ್ಲಿ ಅತ್ಯಾಕರ್ಷಕ ಕಟ್ಟಡದಲ್ಲಿ ಇಂಥದ್ದೊಂದು ಕಾಲೇಜು ಆರಂಭಿಸಿರುವುದು ಈ ಭಾಗದ ಯುವಕರ ಸುದೈವ. ಅವಕಾಶದ ಸದ್ಬಳಕೆ ಮೂಲಕ ವಿಶೇಷ ಸಾಧನೆ ಮಾಡಬೇಕೆಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಅಗಮಿಸಿದ್ದ ದೆಹಲಿಯ ಗಾಜಿಯಾಬಾದ ವಿಶ್ವವಿದ್ಯಾಲಯದ ನಿರ್ದೇಶಕ ಡಾ|ಸುರೇಂದ್ರ ಶರ್ಮಾ ಮಾತನಾಡಿ, ಅದೆಷ್ಟೋ ಮಹಾನಗರ ಹಾಗೂ ಪಟ್ಟಣ ಪ್ರದೆಶಗಳಲ್ಲೂ ಇಲ್ಲದಿರುವ ಸೌಲಭ್ಯವನ್ನು ಪಾಂಡುರಂಗ ಅವರು ಗ್ರಾಮೀಣ ಪ್ರದೇಶದಲ್ಲಿ ಆರಂಭಿಸಿದ್ದು ಅಸಾಮಾನ್ಯ ಸಾಧನೆ ಎಂದು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾರ್ಯದರ್ಶಿ ಪಾಂಡುರಂಗ ಕಿರಣ ಮಾತನಾಡಿ, ನನಗೆ ದೇವರು ಹಣ, ಆರೋಗ್ಯ ಎಲ್ಲವನ್ನೂ ಕೊಟ್ಟಿದ್ದಾನೆ. ಜನ್ಮ ನೀಡಿದ ಪುಣ್ಯ ಭೂಮಿಯಲ್ಲಿ ಮಾತೋಶ್ರೀ ಅವರ ಆಶಯದಂತೆ ಶಿಕ್ಷಣ ಸಂಸ್ಥೆ ಆರಂಭಿಸಿದ್ದೇನೆ.
ಈ ಭಾಗದ ವಿದ್ಯಾವಂತ ನಿರುದ್ಯೋಗಿಗಳ ಸಂಕಷ್ಟ ನೋಡಲಾಗದೇ ಈಗ ಪ್ಯಾರಾ ಮೆಡಿಕಲ್ ಕೋರ್ ತಂದಿದ್ದೇನೆ. ಯುವಕರು ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಮೇವರ ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಮಹೇಂದ್ರಕುಮಾರ, ಅಧ್ಯಕ್ಷೆ ನಮ್ರತಾ ಕಿರಣ, ಹರ್‌ಜೇಂದ್ರ ಸಿಂಗ್, ನಾಗಮಣಿ, ಸಂಸ್ಥೆ ನಿರ್ದೇಶಕ ರಾಘವೇಂದ್ರ ಕಿರಣ ಇದ್ದರು.