Advertisement
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಆರೋಗ್ಯ ಇಲಾಖೆಗಳು ಸಂಯುಕ್ತವಾಗಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ತಾಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕಂಟೆಪ್ಪ ದಾನಾ ಮಾತನಾಡಿ, ದೇಹಕ್ಕೆ ಒಂದೂ ಶ್ರಮ ಕೊಡದೇ ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಮೊರೆ ಹೋಗುತ್ತಿರುವ ಕಾರಣ ಸರಳ ಹೆರಿಗೆ ಅಪರೂಪವಾಗಿದೆ. ಜೊತೆಗೆ ಕೆಲವು ವೈದ್ಯರು ಸರಳ ಹೆರಿಗೆ ಆಗುವ ಪ್ರಕರಣವನ್ನೂ ಹಣದ ಆಸೆಗಾಗಿ ಸಿಜೇರಿಯನ್ ಹೆರಿಗೆ ಮಾಡುವುದನ್ನು ಇದೀಗ ವ್ಯವಹಾರ ಮಾಡಿಕೊಂಡಿದ್ದಾರೆ. ಕಾರಣ ಮಹಿಳೆಯರು ಜೀವನಪೂರ್ತಿ ಆನಾರೋಗ್ಯದಿಂದ ಬಳಲಬೇಕಾದ ಪರಿಸ್ಥಿತಿ ಇದೆ ಎಂದು ಹೇಳಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ|ಅಶೋಕ ಮೈಲಾರಿ ಮಾತನಾಡಿ, ಊಟ ಸ್ವಾದಭರಿತವಾಗಿದೆ ಎಂದು ಬೇಕಾಬಿಟ್ಟಿ ತಿನ್ನುವುದು, ಕೆಲಸದ ಒತ್ತಡದ ಕಾರಣ ಅಲ್ಪೋಪಹಾರ ಸೇವಿಸಿ ಇಡೀ ದಿನ ಬರಿ ಹೊಟ್ಟೆಯಲ್ಲಿದ್ದರೆ ಅನಾರೋಗ್ಯ ಉಂಟಾಗುತ್ತದೆ. ಅತ್ತ ಅಲ್ಪ, ಇತ್ತ ಅತಿ ಈ ಎರಡರಲ್ಲಿ ಯಾವುದಕ್ಕೂ ಹಚ್ಚಿಕೊಳ್ಳದೇ ಹಿತ ಮತ್ತು ಮಿತ ಆಹಾರ ಸೇವಿಸುವುದರ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಡಾ|ಗೋವಿಂದ ಮಾತನಾಡಿ, ಸ್ವಯಂ ಜಾಗೃತಿಯಾಗದ ಹೊರತು ಬದಲಾವಣೆ ಅಸಾಧ್ಯ. ಪೌಷ್ಠಿಕ ಆಹಾರ ಸಪ್ತಾಹ ಆಚರಣೆಗೆ ಸೀಮಿತಗೊಳ್ಳದೇ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಆರೋಗ್ಯ ಕಾಪಾಡಕೊಳ್ಳಲು ಸಾಧ್ಯ. ತಾಯಿ ಎದೆಹಾಲು ಮಗುವಿಗೆ ಅಮೃತಕ್ಕೆ ಸಮಾನ. ಆದರೆ ಇತ್ತೀಚಿನ ತಾಯಂದಿರು ಮಕ್ಕಳಿಗೆ ಎದೆ ಹಾಲು ಉಣಿಸುವುದರಿಂದ ಸೌಂದರ್ಯ ಕೆಡುತ್ತದೆಂಬ ನೆಪವೊಡ್ಡಿ ಬಾಟಲಿ ಹಾಲು ಕುಡಿಸಿ, ಪರೋಕ್ಷವಾಗಿ ಮಕ್ಕಳ ಅಪೌಷ್ಠಿಕತೆಗೆ ತಾಯಂದಿರೇ ಕಾರಣರಾಗುತ್ತಿದ್ದಾರೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಬಸಲಿಂಗಪ್ಪ ದೊಡ್ಮನಿ, ಪ್ರಧಾನ ಕಾರ್ಯದರ್ಶಿ ಸಿ.ಎಸ್.ಚನ್ನಪ್ಪ, ವಕೀಲ ವಿಜಯಕುಮಾರ ನಾತೆ ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಗರ್ಭಿಣಿಯರಿಗೆ ಸೀಮಂತ ಮಾಡಲಾಯಿತು. ಅಪೌಷ್ಠಿಕತೆಯಿಂದ ಬಳಲುವ ಮಕ್ಕಳಿಗೆ ಔಷ ಕಿಟ್ ವಿತರಿಸಲಾಯಿತು. ಇದೇ ವೇಳೆ ಪೌಷ್ಠಿಕ ಆಹಾರ ಪದಾರ್ಥಗಳ ಪ್ರದರ್ಶನವನ್ನೂ ಆಯೋಜಿಸಲಾಗಿತ್ತು. ಆಶಾದೇವಿ ಬಡದಾಳೆ ಪ್ರಾರ್ಥಿಸಿದರು. ಹಿರಿಯ ಆರೋಗ್ಯ ಸಹಾಯಕ ಶಿವಕುಮಾರ ಕಿವಡೆ ಸ್ವಾಗತಿಸಿದರು. ಹಿರಿಯ ಆರೋಗ್ಯ ಸಹಾಯಕ ತೀರ್ಥಪ್ಪ ಭೀಮಶೆಟ್ಟಿ ನಿರೂಪಿಸಿದರು. ಪಾರ್ವತಿ ವಂದಿಸಿದರು.