Advertisement

ಬಹುಪಯೋಗಿ ಸಭಾಂಗಣ ಸದ್ಬಳಕೆಯಾಗಲಿ

04:25 PM Sep 30, 2019 | Naveen |

ಹುಮನಾಬಾದ: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತೆಲಂಗಾಣ ಜಹೀರಾಬಾದನ ಶ್ರೀ ಪ್ರಭು ಮಹಾರಾಜರ ಪರಮ ಭಕ್ತರಾದ ಮೋಹನ ಕಾಮತ, ಅನೀಲ ಕಾಮತ ಸಹೋದರರು ನೀಡಿದ ವಿಶೇಷ ಅನುದಾನದಲ್ಲಿ ನಿರ್ಮಿಸಲಾಗಿರುವ ಬಹು ಉಪಯೋಗಿ ಸಭಾಂಗಣ ಸದ್ಬಳಕೆಯಾಗಲಿ ಎಂದು ಮಾಣಿಕಪ್ರಭು ಸಂಸ್ಥಾನ ಪೀಠಾಧಪತಿ ಡಾ| ಜ್ಞಾನರಾಜ ಮಾಣಿಕಪ್ರಭು ಹೇಳಿದರು.

Advertisement

ಪಟ್ಟಣದ ಮಾಣಿಕ ಪಬ್ಲಿಕ್‌ ಶಾಲೆಯಲ್ಲಿ ನಡೆದ ಎಂ.ಜಿ. ಬಹು ಉಪಯೋಗಿ ಸಭಾಂಗಣ ಉದ್ಘಾಟನಾ ಸಮಾರಂಭದಲ್ಲಿ ಸಾನ್ನಿಧ್ಯ  ಹಿಸಿ ಅವರು ಮಾತನಾಡಿದರು. ಉನ್ನತ ಗುರಿ, ಉತ್ತಮ ಗುರುವಿನ ಜತೆ ನಿರಂತರ ಪರಿಶ್ರಮಪಡುವ ವಿದ್ಯಾರ್ಥಿ ಜೀವನದಲ್ಲಿ ಅಸಾಮಾನ್ಯ ಸಾಧನೆ ಮಾಡಬಹುದು. ಶ್ರದ್ಧೆ ಇಲ್ಲದೇ ಮಾಡುವ ಯಾವುದೇ ವ್ಯಕ್ತಿ ಯಾವ ಕೆಲಸದಲ್ಲೂ ಸಫಲತೆ ಸಾಧಿಸಲಾರ.

ವಿದ್ಯಾರ್ಥಿ ತನ್ನ ಬುದ್ದಿ ಮನಸ್ಸಿನ ಕೈಗೊಪ್ಪಿಸದೇ ಅದನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಾಗ ಮಾತ್ರ ಏನಾದರೂ ಸಾಧಿಸಲು ಸಾಧ್ಯ ಎಂದು ಹೇಳಿದರು.

ಸಭಾಂಗಣ ಉದ್ಘಾಟಿಸಿ ಮಾತನಾಡಿದ ತೆಲಂಗಾಣ ಜಹೀರಾಬಾದ್‌ನ ಎಂ.ಜಿ. ಮಲ್ಟಿ ಪರಪಸ್‌ ಕಂಪೆನಿ ಎಕ್ಸಿಕಿಟಿವ್‌ ಡೈರೆಕ್ಟರ್‌ ಪ್ರಕಾಶ ಕಾಲಾºಗ್‌, ಪ್ರಪಂಚದಲ್ಲಿ ಕೊರತೆ ಇರುವುದು ದೇಣಿಗೆ ನೀಡುವ ಕೈಗಳದಲ್ಲ. ಕೊಟ್ಟದ್ದನ್ನು ಸದ್ಬಳಕೆ ಮಾಡಿಕೊಳ್ಳುವವರದ್ದು. ಆದರೆ ಪ್ರಭು ಸಂಸ್ಥಾನ ಅಡಿ ನಡೆಯುತ್ತಿರುವ ಶ್ರೀ ಮಾಣಿಕ ಪಬ್ಲಿಕ್‌ ಶಾಲೆಗೆ ದೇಣಿಗೆ ನೀಡಿರುವ ಕೈ ಮತ್ತು ಮನಸ್ಸಿಗೆ ನಿಜಕ್ಕೂ ಸಾರ್ಥಕತೆ ಅನುಭವವಾಗುತ್ತಿದೆ. ಈ ಸಂಸ್ಥೆಗೆ ದೇಣಿಗೆ ನೀಡಲು ಅವಕಾಶ ಲಭಿಸಿದ್ದು ಆ ಜನ್ಮದ ಪುಣ್ಯ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಾಣಿಕ ಪ್ರಭು ಶಿಕ್ಷಣ ಸಮಿತಿ ಅಧ್ಯಕ್ಷ ಆನಂದರಾಜ ಪ್ರಭು, ಪ್ರಭು ಮಹಾರಾಜರ ಶಕ್ತಿ ಅರಿತ ಬಹುತೇಕರು ತಮ್ಮಿಂದ ಸಾಧ್ಯವಾದ ರೂಪದಲ್ಲಿ ದೇಣಿಗೆ ನೀಡಿ ಧಾರ್ಮಿಕ, ಶೈಕ್ಷಣಿಕ ಪ್ರಗತಿಗೆ ಕಾರಣರಾಗಿದ್ದಾರೆ. ಅಂಥವರ ಪೈಕಿ ಕಾಮತ ಪರಿವಾರ ಸಹ ಒಂದು. ಅವರ ಈ ಸೇವೆಗೆ ಪ್ರಭು ಸಂಸ್ಥಾನ ಯಾವತ್ತೂ ಸ್ಮರಿಸುತ್ತದೆ. ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಕಟ್ಟಡ ಸದ್ಬಳಕೆ ಮೂಲಕ ಇಲ್ಲಿನ ವಿದ್ಯಾರ್ಥಿಗಳನ್ನು ಸರ್ವಾಂಗೀಣ ಪ್ರಗತಿಯತ್ತ ಕೊಂಡೊಯ್ಯಲಾಗುವುದು ಎಂದು ಹೇಳಿದರು.

Advertisement

ಚೇತನರಾಜ ಪ್ರಭು ಸ್ವಾಗತಿಸಿದರು. ಆಕಾಂಕ್ಷಾ ಭಾಗವತ್‌ ನಿರೂಪಿಸಿದರು. ಪ್ರಾಚಾರ್ಯೆ ಸುಮಂಗಲಾ ಜಹಾಗಿದಾರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next