Advertisement

ಸಮಾಜ ಸಂಘಟನೆಗೆ ಒತ್ತು ಕೊಡಿ

04:16 PM Feb 01, 2020 | Naveen |

ಹುಮನಾಬಾದ: ರೆಡ್ಡಿ ಸಮಾಜ ಬಾಂಧವರು ಸಮಾಜದ ಸಂಘಟನೆಗೆ ಒತ್ತು ಕೊಡಬೇಕು. ರೆಡ್ಡಿ ಸಮಾಜದ ಅಭಿವೃದ್ಧಿಗಾಗಿ ಎಲ್ಲರೂ ಒಂದಾಗಿ ಶ್ರಮಿಸಬೇಕು ಎಂದು ಮಾಜಿ ಸಚಿವ ರಾಮಲಿಂಗಾರಡ್ಡಿ ಹೇಳಿದರು.

Advertisement

ಚಿಟಗುಪ್ಪ ತಾಲೂಕಿನ ಬೇಮಳಖೇಡಾ ಗ್ರಾಮದಲ್ಲಿ ಶುಕ್ರವಾರ ನಡೆದ ಹೇಮರಡ್ಡಿ ಮಲ್ಲಮ್ಮದೇವಿ ಮಂದಿರದ ಕಳಸಾರೋಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಂದು ಸಮಾಜದವರು ಇಂದು ಸಂಘಟನೆಗೆ ಒತ್ತು ನೀಡುತ್ತಿದ್ದಾರೆ. ಅದೇ ರೀತಿ ರಡ್ಡಿ ಸಮಾಜದವರು ಒಂದುಕಡೆ ಸೇರಿ ಸಮಾಜ ಸಂಘಟನೆ ಮಾಡುವುದರಲ್ಲಿ ಯಾವುದೇ ತಪ್ಪೇನಿಲ್ಲ ಎಂದ ಅವರು, ರಡ್ಡಿ ಸಮಾಜಕ್ಕೆ ತನ್ನದೆಯಾದ ಇತಿಹಾಸವಿದೆ. ಯಾವುದೇ ಗೊಂದಲಗಳು ಹಾಗೂ ವೈಮನಸ್ಸು ಇದ್ದಲ್ಲಿ ಅವುಗಳನ್ನು ಬಿದಿಗಿಟ್ಟು ಸಮಾಜ ಸಂಘಟನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಶಾಸಕ ಬಂಡೆಪ್ಪ ಖಾಶೆಂಪೂರ ಮಾತನಾಡಿ, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ತಾಯಿ ಸೇರಿದಂತೆ ಅನೇಕ ಶಿವಶರಣರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಪಾಲಿಸಬೇಕು. ರಡ್ಡಿ ಸಮಾಜ ಬಲಿಷ್ಠ ಸಮಾಜವಾಗಿ ಬೆಳೆಯುತ್ತಿದೆ. ವಿವಿಧ ಕ್ಷೇತ್ರದಲ್ಲಿ ರಡ್ಡಿ ಸಮಾಜದವರು ಗುರುತಿಸಿಕೊಳ್ಳುತ್ತಿದ್ದಾರೆ ಎಂದರು.

ಇದಕ್ಕೂ ಮುನ್ನ ಹೇಮರಡ್ಡಿ ಮಲ್ಲಮ್ಮದೇವಿ ಮಂದಿರದಲ್ಲಿ ಹೋಮ ಕಾರ್ಯಕ್ರಮ ನಡೆಯಿತು. ಅಲ್ಲದೆ, ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಹೇಮವೇಮ ಗುರುಪೀಠ ಹರಿಹರದ ವೇಮನಾನಂದ ಮಹಾಸ್ವಾಮಿಗಳು ಆರ್ಶೀವಚನ ನೀಡಿದರು. ಹುಗ್ಗಿ ಪಾಟೀಲ, ರೆಡ್ಡಿ ಸಮಾಜದ ಅಧ್ಯಕ್ಷ ಅಶೋಕರಡ್ಡಿ ಔರಾದಿ, ಎನ್‌. ಶೇಖರರಡ್ಡಿ,
ಜಿಲ್ಲಾ ಪಂಚಾಯಿತಿ ಸದಸ್ಯ ಗುಂಡುರಡ್ಡಿ ಕಮಲಾಪೂರೆ, ಸಂತೋಷ ರಾಸೂರ್‌,
ರವೀಂದ್ರರಡ್ಡಿ ಕೊತ್ತೂರ, ನಿರ್ದೇಶಕ ಕೃಷ್ಣರಡ್ಡಿ, ಜಿಲ್ಲಾ ಅಧ್ಯಕ್ಷ ಶಂಕರರಡ್ಡಿ ಚಿಟ್ಟಾ, ಗ್ರಾಪಂ ಅಧ್ಯಕ್ಷೆ ತುಳಸಮ್ಮ ಭುರಿ, ಪ್ರಮುಖರಾದ ರಮೇಶರಡ್ಡಿ ಹುಮನಾಬಾದ, ನಸೀಮ ಪಟೇಲ, ಮಣಿಪಾಲರಡ್ಡಿ ಮುನ್ನೂರ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next