Advertisement

ಪದವಿ ಜತೆ ಸ್ನಾತಕೋತ್ತರಕ್ಕೂ ಅವಕಾಶ

11:29 AM Jul 24, 2019 | Naveen |

ಹುಮನಾಬಾದ: ಬದಲಾದ ಕಾಲಮಾನಕ್ಕೆ ತಕ್ಕಂತೆ ಸರ್ಕಾರ ಕನಿಷ್ಟ ಶುಲ್ಕದಲ್ಲಿ ಬಡ ವಿದ್ಯಾರ್ಥಿಗಳಿಗೆ ಪದವಿ ಹಾಗೂ ಸ್ನಾತಕೋತ್ತರ ಅಧ್ಯಯನಕ್ಕೂ ಅವಕಾಶ ಕಲ್ಪಿಸಿದ್ದು, ವಿದ್ಯಾರ್ಥಿಗಳು ಈ ಸೌಲಭ್ಯದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ| ವೀರಣ್ಣ ತುಪ್ಪದ ಹೇಳಿದರು.

Advertisement

ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಂಗಳವಾರ ನಡೆದ ಪುನರ್‌ಮನನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮೂರು ದಶಕಗಳ ಹಿಂದೆ ಸರ್ಕಾರ ಇಂಥ ಯಾವುದೇ ಸೌಲಭ್ಯ ಕಲ್ಪಿಸಿರಲಿಲ್ಲ. ಪದವಿಪೂರ್ವ ಮತ್ತು ಪದವಿ ಶಿಕ್ಷಣಕ್ಕಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಮೊರೆ ಹೋಗಬೇಕಾದ ಪರಿಸ್ಥಿತಿ ಇತ್ತು ಎಂದರು.

ಪಾಲಕರು ನಿಮ್ಮ ಮೇಲೆ ಏನೆಲ್ಲ ನಿರೀಕ್ಷೆ ಇಟ್ಟುಕೊಂಡು ಹಳ್ಳಿಯಿಂದ ತಾಲೂಕು ಕೇಂದ್ರದ ಕಾಲೇಜಿಗೆ ಕಳಿಸಿದ್ದಾರೆ. ಮೂರು ವರ್ಷ ಕಾಲ ವ್ಯರ್ಥ ಕಾಲಹರಣ ಮಾಡದೇ ಕಠಿಣ ಪರಿಶ್ರಮದೊಂದಿಗೆ ಗುರಿ ಸಾಧಿಸುವ ಮೂಲಕ ಪಾಲಕರ ಕನಸು ನನಸಾಗಿಸಬೇಕು ಎಂದು ಹೇಳಿದರು.

ಡಾ| ಗವಿಸಿದ್ಧಪ್ಪ ಪಾಟೀಲ, ಡಾ|ಪ್ರಹ್ಲಾದ್‌ ಚೆಂಗಟೆ ವಾಣಿಜ್ಯಶಾಸ್ತ್ರ, ಡಾ| ಶಾಂತಕುಮಾರ ಬನಗುಂಡಿ, ಡಾ| ಸಂಜೀವಕುಮಾರ, ಮಲ್ಲಿಕಾರ್ಜುನ ಬಾಳಿ, ಡಾ|ಜಯಶ್ರೀ ಶೆಟ್ಟಿ, ಪ್ರೊ|ಸಂಪತ್‌ಕುಮಾರಿ, ವೀರೇಶ ಹಳೇಮನಿ ಅವರ ನೇತೃತ್ವದಲ್ಲಿ ವಿಭಾಗವಾರು ಗ್ರಂಥಾಲಯ ಸೌಲಭ್ಯ, ಕೀಡ್ರಾ ಮಹತ್ವ, ವ್ಯಕ್ತಿತ್ವ ವಿಕಸನ, ಸಾಮಾನ್ಯ ಜ್ಞಾನ, ಸ್ಪರ್ಧಾತ್ಮಕ ಪರೀಕ್ಷೆ, ಪದವಿ ಪರೀಕ್ಷೆ ಕುರಿತು ಮಾಹಿತಿ ನೀಡಲಾಯಿತು.

ದೈಹಿಕ ಶಿಕ್ಷಣ ವಿಭಾಗದ ಡಾ|ರವಿ ನಾಯಕ, ಗ್ರಂಥಪಾಲಕ ರಾಜಕುಮಾರ ಟಿ., ಹಿಂದಿ ವಿಭಾಗದ ಡಾ|ರಾಜಾಬಾಯಿ, ಭೌತಶಾಸ್ತ್ರ ವಿಭಾಗದ ಬಸವರಾಜ ನಿಂಬೂರೆ, ಕನ್ನಡ ವಿಭಾಗದ ಡಾ|ಮಹಾದೇವಿ ಹೆಬ್ಟಾಳೆ, ಡಾ| ರೂತಾ ಪ್ರಭುರಾವ್‌, ರಂಗನಾಥ, ದಿಲೀಪ ಪತಂಗೆ, ಕುಮಾರಿ ಅಶ್ವಿ‌ನಿ, ಅಂಬರೀಶ ಕನೇರಿ, ಮಾದವರಾವ್‌ ಉಪಸ್ಥಿತರಿದ್ದರು.

Advertisement

ಕಾಲೇಜು ಸಿಬ್ಬಂದಿ ಕಾರ್ಯದರ್ಶಿ ಪ್ರೊ|ಅಲಕಾ ಡಿ. ಸೋಲಂಕರ ಸ್ವಾಗತಿಸಿದರು. ಡಾ| ಜಯಕುಮಾರ ಶಿಂಧೆ ನಿರೂಪಿಸಿದರು. ಐ.ಕ್ಯು.ಎ.ಸಿ. ಸಂಯೋಜಕಿ ಪ್ರೊ| ಪ್ರೇಮಲತಾ ಮುನ್ನೊಳ್ಳಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next