ಹುಮನಾಬಾದ: ಎರಡು ಶತಮಾನಕ್ಕೂ ಹಳೆಯದಾದ ದುಬಲಗುಂಡಿ ಗ್ರಾಮ ಸೃಷ್ಟಿಯಾದಾಗಿನಿಂದಲೂ ಗ್ರಾಮದ ಚಂದಾ ಹುಸೇನಿ ದರ್ಗಾ-ಭಡಕಲ್ ಅಗಸಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿ ಮಾಡದಿರುವುದರಿಂದ ಆ ಮಾರ್ಗವನ್ನೇ ಅವಲಂಬಿಸಿರುವ ನಿವಾಸಿಗಳು ಸಂಚಾರಕ್ಕೆ ನಿತ್ಯ ಯಾತನೆ ಅನುಭವಿಸುತ್ತಿದ್ದಾರೆ.
Advertisement
ಸುಮಾರು 15 ಸಾವಿರಕ್ಕೂ ಅ ಧಿಕ ಜನಸಂಖ್ಯೆ, ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನ, ಒಂದು ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯ ಸ್ಥಾನ ಹೊಂದಿರುವ ಈ ಗ್ರಾಮ ವಿವಿಧ ಪಕ್ಷಗಳ ಗಣ್ಯಾತಿಗಣ್ಯ ವ್ಯಕ್ತಿಗಳನ್ನು ಹೊಂದಿದೆ. ಈ ಗ್ರಾಮದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ 80ರ ದಶಕದಲ್ಲೇ ನಗರ ಯೋಜನಾ ಪ್ರಾ ಧಿಕಾರ ನೀಲನಕ್ಷೆ ಸಿದ್ಧಪಡಿಸಿತ್ತು. ಆದರೆ ಎಲ್ಲವೂ ಯೋಜನೆ ಪ್ರಕಾರ ಅಭಿವೃದ್ಧಿ ಹೊಂದಿದ್ದರೆ ಈ ಗ್ರಾಮವೀಗ ಇಡೀ ಮತ ಕ್ಷೇತ್ರದಲ್ಲೇ ಮಾದರಿ ಗ್ರಾಮವಾಗುತ್ತಿತ್ತು. ಹಾಗೆಂದ ಮಾತ್ರಕ್ಕೆ ಈ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳೇ ನಡೆದಿಲ್ಲ ಎಂದೇನಿಲ್ಲ.
ಕಲ್ಪಿಸುವ ರಸ್ತೆ ವರೆಗೆ ಕೋಟ್ಯಂತರ ರೂ. ವೆಚ್ಚದಲ್ಲಿ ಕ್ಷೇತ್ರದ ಶಾಸಕ ರಾಜಶೇಖರ ಬಿ.ಪಾಟೀಲ ಅವರು ಅಭಿವೃದ್ಧಿಪಡಿಸಿದ್ದಾರೆ. ಆದರೆ ಅದರಷ್ಟೇ ಅವಶ್ಯವಿರುವ ವಾರ್ಡ್ ಸಂಖ್ಯೆ 5ರ ವ್ಯಾಪ್ತಿಗೆ ಒಳಪಡುವ ಭಡಕಲ್ ಅಗಸಿ-ಹುಸೇನಿ ದರ್ಗಾಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗದ ರಸ್ತೆ ಅಭಿವೃದ್ಧಿ ನಡೆಯದ ಕಾರಣ ತಮ್ಮ ಪ್ರತಿಯೊಂದು ಚಟುವಟಿಕೆಗೆ ಆ ಮಾರ್ಗವನ್ನೇ ಅವಲಂಬಿಸಿರುವ ನಿವಾಸಿಗಳು ನಿತ್ಯ ತೊಂದರೆ ಅನುಭವಿಸುವುದು ತಪ್ಪಿಲ್ಲ.
Related Articles
Advertisement
ಈ ಮಧ್ಯ ಅದೆಷ್ಟೋ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗೆ ಮನವಿ ಮಾಡಿದರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಕಾರಣ ಹಿಂದೆ ಹೋದದ್ದು ಹೋಯಿತು. ಮುಂದೆ ಅನಗತ್ಯ ವಿಳಂಬಿಸದೇ ಸಾರ್ವಜನಿಕರ ಸಮಸ್ಯೆಯನ್ನು ಗಂಭೀರ ಪರಿಗಣಿಸಿ, ಅಭಿವೃದ್ಧಿಗೆ ಮುಂದಾಗಬೇಕು ಎಂಬುದು ಓಣಿ ನಿವಾಸಿಗಳ ಒತ್ತಾಸೆ.