Advertisement

ವೈರಸ್‌ ಭಯ ಬಿಟ್ಟು ಜಾಗ್ರತೆ ಕ್ರಮ ಅನುಸರಿಸಿ

05:49 PM Mar 16, 2020 | Naveen |

ಹುಮನಾಬಾದ: ಕೊರೊನಾ ವೈರಸ್‌ ಕುರಿತು ಭಯ ಬೇಡ. ಆದರೆ, ಸೋಂಕು ಬರದಂತೆ ಸರ್ಕಾರ ಸೂಚಿಸಿದ ಸೂಕ್ತ ಜಾಗೃತಿ ಕ್ರಮಗಳನ್ನು ಅನುಸರಿಸಬೇಕು ಎಂದು ಡಾ| ಎಸ್‌. ಜನಾರ್ಧನ ರಾವ್‌ ಹೇಳಿದರು.

Advertisement

ಪಟ್ಟಣ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿನ ಸತ್ಯಾದೀಪ ಕೆಮಿಕಲ್ಸ್‌ ಕಂಪನಿಯಲ್ಲಿ ರವಿವಾರ ಕೊರೊನಾ ವೈರಸ್‌ ತಡೆಗಟ್ಟುವ ಕುರಿತು ಕಾರ್ಖಾನೆಯ ಕಾರ್ಮಿಕರು ಹಾಗೂ ಸಿಬ್ಬಂದಿಗಳಿಗಾಗಿ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ದೇಶದ ಜನರಿಗೆ ಹೆಚ್ಚಾಗಿ ಈ ವೈರಸ್‌ ಬಾಧಿಸಿಲ್ಲ. ಆದರೆ, ವಿದೇಶದಿಂದ ಬಂದ ಜನರಲ್ಲಿ ಇದು ಕಂಡು ಬಂದಿದೆ. ಕೆಮ್ಮು, ಜ್ವರ, ನೆಗಡಿ ಬಂದರೆ ಅದು ಕೊರೊನಾ ಎಂಬ ಭಯ ಬೇಡ. ಆದರೆ, ಇವುಗಳ ಜೊತೆಗೆ ಉಸಿರಾಟದ ತೊಂದರೆ ಹಾಗೂ ಭೇದಿಯ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದರನ್ಯ ಭೇಟಿ ಮಾಡಿ ಚಿಕಿತ್ಸೆ ಪಡೆಯಿರಿ. ಒಂದು ವಾರದಲ್ಲಿ ಆರೋಗ್ಯ ಸುಧಾರಿಸದಿದ್ದರೆ ಹೆಚ್ಚಿನ ಚಿಕಿತ್ಸೆಗೆ ಮುಂದಾಗಬೇಕು. ಕೊರಾನಾ ರೋಗಕ್ಕೆ ಸಧ್ಯ ಯಾವುದೇ ಔಷ ಧ ಲಭ್ಯವಿಲ್ಲ. ಇದು ಹೆಚ್ಚಾಗಿ 60ಕ್ಕೂ ಅಧಿಕ ವಯಸ್ಸಿನ ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಿಸುತ್ತದೆ. ಮಕ್ಕಳಿಗೆ ಈ ವೈರಸ್‌ ಹರಡಿದರೂ ಕೂಡ ಅವರ ಆರೋಗ್ಯದಲ್ಲಿ ಹೆಚ್ಚು ಸಮಸ್ಯೆ ಉಂಟಾಗುವುದಿಲ್ಲ. ಬದಲಿಗೆ ಆ ಮಕ್ಕಳಿಂದ ಇತರಿಗೆ ಸೋಂಕು ಹರಡುತ್ತದೆ ಎಂದು ವಿವರಿಸಿದರು.

ವಿದೇಶದಿಂದ ಬಂದ ಜನರಿಗೆ ಹತ್ತಿರದಿಂದ ಮಾತನಾಡುವುದು ಬೇಡ. ಕನಿಷ್ಟ 3 ಅಡಿ ದೂರದಿಂದ ಮಾತನಾಡುವುದು ಸೂಕ್ತ. ಕೈ ಕುಲುಕುವುದು ಬೇಡ, ಇದರಿಂದ ಸೋಂಕು ಹರಡುತ್ತದೆ. ಅಲ್ಲದೆ ದೇಹದ ಇತರೆ ಭಾಗಕ್ಕೂ ಸ್ಪರ್ಶವಾಗುತ್ತದೆ. ಪದೆಪದೆ ಕೈಗಳನ್ನು ಸ್ವತ್ಛ ಮಾಡುತ್ತಿರಬೇಕು. ಸಾರ್ವಜನಿಕ ಸ್ಥಳಗಳಲ್ಲಿ ತೆರಳುವ ಸಂದರ್ಭದಲ್ಲಿ ಮಾತ್ರ ಕಡ್ಡಾಯವಾಗಿ ಮಾಸ್ಕ್ಗಳನ್ನು ಬಳಸಿ. ಮಾಸ್ಕ್ಗಳನ್ನು ಪ್ರತಿದಿನ ಬದಲಿಸಬೇಕು. ಒಂದೇ ಮಾಸ್ಕ್ ಅನ್ನು ಎಲ್ಲ ದಿನಗಳು ಹಾಕಿಕೊಂಡರೆ ಇತರೆ ಸೋಂಕುಗಳು ಬರಬಹುದು ಎಂದು ತಿಳಿಸಿದರು.

ಕಾರ್ಖಾನೆಯ ಸಿಬ್ಬಂದಿ ಹಾಗೂ ಕಾರ್ಮಿಕರು ಕೆಲಸದ ಸಮಯ ಹಾಗೂ ಮನೆಯಲ್ಲಿ ಸರ್ಕಾರದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಯಾರಿಗಾದರೂ ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆ ಕಂಡುಬಂದಲ್ಲಿ ಕೂಡಲೇ ಚಿಕಿತ್ಸೆಗೆ ಮುಂದಾಬೇಕು. ಅಲ್ಲದೆ, ಕುಟುಂಬದವರ ಹಿತ ರಕ್ಷಣೆ ಹಿನ್ನೆಲೆಯಲ್ಲಿ ಒಬ್ಬರೇ ಒಂದು ಕಡೆ ಉಳಿದುಕೊಂಡು ಆರೋಗ್ಯ ಸುಧಾರಿಸಿದ ನಂತರ ಕುಟುಂಬದ ಜೊತೆಗೆ ಬೇರೆಯಬೇಕು. ಈ ಸಂದರ್ಭದಲ್ಲಿ ಕೆಲಸಕ್ಕೆ ರಜೆ ಕೂಡ ನೀಡಲಾಗುವುದು ಎಂದು ತಿಳಿಸಿದರು.

Advertisement

ಈ ಸಂದರ್ಭದಲ್ಲಿ ಸಿಬ್ಬಂದಿಯೊಬ್ಬರು ಮಾತನಾಡಿ, ಮದ್ಯ ಸೇವಿಸಿದರೆ ಕೊರೊನಾ ಬರುವುದಿಲ್ಲ ಎಂದು ಹೇಳಲಾಗುತ್ತಿದೆ. ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಡಾ| ಜನಾರ್ಧನರಾವ್‌, ಸಾಮಾಜಿಕ ಜಾಲಾ ತಾಣಗಳಲ್ಲಿ ಇರುವ ಸುದ್ದಿಗಳು ಸತ್ಯ ಎಂದು ತಿಳಿಯಬಾರದು. ಆಲ್ಕೋಹಾಲ್‌ ಹೆಚ್ಚಿರುವ ಸ್ಯಾನಿಟೈಸರ್‌ ಬಳಸಲು ವೈದ್ಯರು ಸಲಹೆ ನೀಡುತ್ತಾರೆ.

ಆದರೆ, ಕೊರೊನಾ ವೈರಸ್‌ಗೆ ಮದ್ಯವೇ ಮದ್ದು ಎಂಬುದು ತಪ್ಪು ಎಂದು ತಿಳಿಸಿದರು. ಅಲ್ಲದೆ, ಬೇರೆ ದೇಶಗಳಲ್ಲಿ ಅತೀ ಹೆಚ್ಚಾಗಿ ಹರಡುತ್ತಿರುವ ಸೋಂಕು ನಮ್ಮ ದೇಶದಲ್ಲಿ ಇಲ್ಲ. ಕಾರಣ ಸೂರ್ಯನ ಬಿಸಿಲು. ಸರಾಸರಿ 35 ರಿಂದ 40 ಡಿಗ್ರಿ ಬಿಸಿಲಿನ ತಾಪಮಾನ ಸೋಂಕು ಹರಡಲು ಬಿಡುವುದಿಲ್ಲ ಎಂದರು. ಇತರೆ ಸಬ್ಬಂದಿ ಪ್ರಶ್ನೆಕೇಳಿ ಉತ್ತರ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next