Advertisement

ವಿಜಯರೆಡ್ಡಿ ಮನೆ ಮೇಲೆ ಎಸಿಬಿ ದಾಳಿ

01:14 PM Oct 04, 2019 | Naveen |

ಹುಮನಾಬಾದ: ಇಲ್ಲಿನ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಉಪವಿಭಾಗ ಕಚೇರಿಯ ಕಿರಿಯ ಎಂಜಿನಿಯರ್‌ ವಿಜಯರೆಡ್ಡಿ ಲಚ್ಚಣಗಾರ್‌ ಅವರ ಮನೆ ಸೇರಿದಂತೆ ಅವರಿಗೆ ವಿವಿಧೆಡೆ ಎಸಿಬಿ ಅಧಿಕಾರಿಗಳು ಗುರುವಾರ ದಾಳಿ ನಡೆಸಿ ದಾಖಲೆ ಪರಿಶೀಲಿಸಿದರು.

Advertisement

ವಿಜಯರೆಡ್ಡಿ ಲಚ್ಚಣಗಾರ್‌ ಅವರ ನಿರ್ಣಾದ ಮನೆಯಲ್ಲಿ 400 ಗ್ರಾಂ ಬಂಗಾರ, 120 ಗ್ರಾಮ ಬೆಳ್ಳಿ, 27 ಸಾವಿರ ನಗದು ಪತ್ತೆಯಾಗಿದ್ದು, ಎಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಿರ್ಣಾದಲ್ಲಿ 30ಕ್ಕೂ ಅಧಿಕ ಎಕರೆ ಜಮೀನು, ಹುಮನಾಬಾದ ಮತ್ತು ಬೀದರ್‌ನಲ್ಲಿ ನಿವೇಶನ ಇರುವುದು ದಾಖಲೆ ಪರಿಶೀಲನೆ ವೇಳೆ ಪತ್ತೆಯಾಗಿದೆ.

30 ವರ್ಷಗಳ ಹಿಂದೆ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ಕೆಲಸಕ್ಕೆ ಸೇರಿಕೊಂಡ ವಿಜಯರೆಡ್ಡಿ ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದಿಸಿದ್ದಾರೆ ಎಂಬ ಸಂಶಯದ ಮೇಲೆ ಈ ದಾಳಿ ನಡೆಸಲಾಗಿದೆ.

ಲಚ್ಚಣಗಾರ್‌ ಅವರಿಗೆ ಸೇರಿದ ವಿವಿಧ ಆಸ್ತಿಗಳ ದಾಖಲೆ ಪರಿಶೀಲನೆಗಾಗಿ ವಿಭಾಗೀಯ ಎಸ್‌ಪಿ ವಿ.ಎಂ. ಜ್ಯೋತಿ ಅವರ ಮಾರ್ಗದರ್ಶನದಲ್ಲಿ ಬೀದರ್‌ ಡಿವೈಎಸ್‌ಸಿ ಬಿ.ಬಿ.ಪಟೇಲ ನೇತೃತ್ವದಲ್ಲಿ ನಾಲ್ಕು ತಂಡ ರಚಿಸಲಾಗಿತ್ತು.

Advertisement

ನಿರ್ಣಾದ ಫಾರ್ಮ್ಹೌಸ್‌ ಮೇಲೆ ಕಲಬುರಗಿ ಡಿವೈಎಸ್‌ಸಿ ಇಸ್ಮಾಯಿಲ್‌ ಷರೀಫ್‌ ಹಾಗೂ ಸಿಬ್ಬಂದಿ, ನಿರ್ಣಾದ ಮನೆ ಮೇಲೆ ಕಲಬುರಗಿ ಡಿವೈಎಸ್‌ಸಿ ಸುಧಾ ಆದಿ, ಹುಮನಾಬಾದ ಪಟ್ಟಣದ ಪಂಚಾಯತರಾಜ್‌ ಎಂಜಿನಿಯರಿಂಗ್‌ ಉಪವಿಭಾಗ ಕಚೇರಿಯಲ್ಲಿ ಯಾದಗಿರಿ ಜಿಲ್ಲಾ ಡಿವೈಎಸ್‌ಸಿ ಗುರುಪಾದ ಬಿರಾದಾರ ಮತ್ತು ಹುಮನಾಬಾದ ಬಸವನಗರ ಬಡಾವಣೆಯಲ್ಲಿ ವಿಜಯರೆಡ್ಡಿ ಅವರು ವಾಸಿಸುವ ಮನೆಯಲ್ಲಿ ಬೀದರ್‌ ಎಸಿಬಿ ಡಿವೈಎಸ್‌ಸಿ ಬಿ.ಬಿ.ಪಟೇಲ ಹಾಗೂ ಎಸಿಬಿ ಇನ್ಸ್‌ಪೆಕ್ಟರ್‌ ಶರಣಬಸಪ್ಪ ಕೋಡ್ಲಾ ಅವರನ್ನು ಒಳಗೊಂಡ ಒಟ್ಟು ನಾಲ್ಕು ತಂಡಗಳು ದಾಖಲೆಗಳ ಸಮಗ್ರ ಪರಿಶೀಲನೆ ನಡೆಸಿದವು. ಕೆಲ ಅಧಿಕಾರಿಗಳನ್ನು ಒಳಗೊಂಡ ತಂಡ ವಿವಿಧ ಬ್ಯಾಂಕ್‌ಗಳಲ್ಲಿನ ರೆಡ್ಡಿ ಅವರ ಖಾತೆಗಳ ಪರಿಶೀಲನೆ ನಡೆಸಿತು.

ಇನ್ಸ್‌ಪೆಕ್ಟರ್‌ ಶರಣಬಸಪ್ಪ ಕೋಡ್ಲಾ, ಸಿಬ್ಬಂದಿಗಳಾದ ಶ್ರೀಕಾಂತ, ರಮೇಶ, ಅನೀಲಕುಮಾರ, ಸರಸ್ವತಿ, ಮಲ್ಲಮ್ಮ, ವಸಂತ, ರಾಘವೇಂದ್ರ, ವಿಠ್ಠಲರಾವ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next