Advertisement

ರಾಯಣ್ಣ ಚರಿತ್ರೆ ಪಠ್ಯಕ್ಕೆ ಅಳವಡಿಸಿ: ಚಳಕಾಪೂರೆ

03:03 PM Aug 19, 2019 | Naveen |

ಹುಮನಾಬಾದ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ತತ್ವಗಳು ಕೇವಲ ವೇದಿಕೆ ಭಾಷಣಕ್ಕೆ ಸೀಮಿತವಾಗಿರುವ ಈ ಸಂದರ್ಭದಲ್ಲಿ ಅವರ ಬದುಕು, ಹೋರಾಟ ಮತ್ತು ದೇಶಕ್ಕಾಗಿ ಸಲ್ಲಿಸಿದ ಸೇವೆ ವಿಷಯವನ್ನು ಪಠ್ಯಕ್ಕೆ ಅಳವಡಿಸುವ ಮೂಲಕ ಹೊಸ ಪೀಳಿಗೆಗೆ ಅವರನ್ನು ಪರಿಚಯಿಸುವ ಕೆಲಸವಾಗಬೇಕು ಎಂದು ಗೊಂಡ ಸಮಾಜದ ಮುಖಂಡ ಅಶೋಕ ಚಳಕಾಪುರೆ ಸರ್ಕಾರಕ್ಕೆ ಒತ್ತಾಯಿಸಿದರು.

Advertisement

ದುಬಲಗುಂಡಿ ಗ್ರಾಮದಲ್ಲಿ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಸ್ತುತ ಶಿಕ್ಷಣ ಪಡೆಯದೇ ವ್ಯರ್ಥ ಕಾಲಹರಣ ಮಾಡುತ್ತಿರುವ ನಮ್ಮ ಸಮುದಾಯದ ಯುವಕರು ಮೊದಲು ಸಾಕ್ಷರರಾಗಿ ಆರ್ಥಿಕ ಸ್ವಾವಲಂಬನೆ ಸಾಧಿಸುವ ಮೂಲಕ ಹೆತ್ತ ಪಾಲಕರು ಹಾಗೂ ನೆಲೆ ನೀಡಿದ ಊರವರಿಗೂ ಬೇಕಾದವರಾಗಿ ಬದುಕಿ ಜೀವನ ಸಾರ್ಥಕಪಡಿಸಿಕೊಳ್ಳಬೇಕು. ನಮ್ಮ ಇಡೀ ಜೀವನವನ್ನು ಕೇವಲ ವೈಯಕ್ತಿಕ ಬದುಕಿಗೆ ಸೀಮಿತವಾಗಿಸಿಕೊಳ್ಳದೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಆದರ್ಶ ಬೆಳೆಸಿಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳಿಗೆ ಸೇನೆಯಲ್ಲಿ ಸೇರಿ ಸೇವೆ ಸಲ್ಲಿಸಲು ಪ್ರೋತ್ಸಾಹಿಸಬೇಕು ಎಂದರು.

ಗ್ರಾಮ ಪಂಚಾಯತ ಸದಸ್ಯ ನಾಗರಾಜ ಭೋಜಗುಂಡಿ, ಸೂರ್ಯಕಾಂತ ಚಳಕಾಪೂರೆ, ಮಾಣಿಕರಾವ್‌ ಭೋಲಾ, ಪ್ರಮುಖರಾದ ಅಶೋಕ ಚಳಕಾಪೂರೆ, ಬಾಬುರಾವ್‌ ಹಳೆಂಬರ, ಶರಣಪ್ಪ ಭೋಜಗುಂಡಿ, ಬಸಪ್ಪ ಭೋಜಗುಂಡಿ, ವಿಠಲ್ ಭೋಜಗುಂಡಿ ಮಾತನಾಡಿದರು.

ವೈಜಿನಾಥ ಭೋಜಗುಂಡಿ, ಶಿವಾನಂದ ಭೋಜಗುಂಡಿ, ಸಿದ್ದಪ್ಪ ಚಳಕಾಪೂರೆ, ರವಿಕಾಂತ ಭೋಜಗುಂಡಿ, ರಾಹುಲ ಹಳೆಂಬರ, ಪ್ರಶಾಂತ ಭೋಜಗುಂಡಿ, ವೈಜಿನಾಥ ಬೆಳಕೇರಿ, ದತ್ತು ಹಳೆಂಬರ, ಸಿದ್ದಲಿಂಗ ಸೋನಕೇರಿ, ಅಂಬ್ರೇಶ್‌ ಕಲ್ಲೂರ, ಮಲ್ಲಪ್ಪ ಭೋಜಗುಂಡಿ, ಮಾರುತಿ ಕೋಟಗಿರಿ, ಗುಂಡಪ್ಪ ಭೋಜಗುಂಡಿ, ಲಕ್ಷ್ಮೀಕಾಂತ ಭೋಜಗುಂಡಿ, ಯಲ್ಲಾಲಿಂಗ ಸೋನಕೇರಿ, ಕಂಟೆಪ್ಪ ಆಣದೂರೆ, ಶರಣು ಆಣದೂರೆ, ಅನೀಲ ಬೆಳಕೇರಿ, ಮಂಜು ಭೋಜಗುಂಡಿ, ವೈಜಿನಾಥ ಸೋನಕೇರಿ, ಲೋಕೇಶ ಮುತ್ಯಾ ಇದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಧರಿಸಿದ ಹಳದಿ ಶಾಲು, ಡೊಳ್ಳು ಕುಣಿತ ಹಾಗೂ ಹಾಡಿಗೆ ಹೆಜ್ಜೆ ಹಾಕಿದ್ದು ಮೆರವಣಿಗೆಯ ಮೆರಗು ಹೆಚ್ಚಿಸಿದವು.

Advertisement

Udayavani is now on Telegram. Click here to join our channel and stay updated with the latest news.

Next