Advertisement
ವಾರ್ಡ್ ಸಂಖ್ಯೆ 6ರ ಕಾಂಗ್ರೆಸ್ ಅಭ್ಯರ್ಥಿ ಗುಂಡಪ್ಪ ಹೊನ್ನಿಕೇರಿ ಬೆಳಗ್ಗೆ 10ಗಂಟೆ ಸುಮಾರು ಧನಗರ ಗಡ್ಡಾದಿಂದ ವಿವಿಧ ವೃತ್ತಗಳ ಮಾರ್ಗವಾಗಿ ಬುರಬುರೆ ವಾದ್ಯ, ಡೊಳ್ಳು, ನೃತ್ಯ ಸಮೇತ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಅತ್ಯಂತ ಕುತೂಹಲಕ್ಕೆ ಕಾರಣವಾದ ವಾರ್ಡ್ 15ರ ಕಾಂಗ್ರೆಸ್ ಅಭ್ಯರ್ಥಿ ಸುನೀಲ(ಕಾಳಪ್ಪ) ಪಾಟೀಲ, ವಾರ್ಡ್ 2ರ ಕಾಂಗ್ರೆಸ್ ಅಭ್ಯರ್ಥಿ ಓಂಪ್ರಕಾಶ ಅಗಡಿ, ವಾರ್ಡ್ 18ರ ಅಭ್ಯರ್ಥಿ ವಿನಾಯಕ ಯಾದವ್, ವಾರ್ಡ್ 20ರ ಪಾರ್ವತಿಬಾಯಿ ಶೇರಿಕಾರ, ವಾರ್ಡ್ 5ರ ಅಶೋಕ ಹತ್ತಿ, ವಾರ್ಡ್ 12ರ ರಾಜಶೇಖರ, ವಾರ್ಡ್ 13ರ ಮಹೇಶ ಪಾಟೀಲ, ಅನೀಲ ಪಲ್ಲರಿ ಇನ್ನೂ ಅನೇಕರು ವಾದ್ಯ ಸಮೇತ ನೂರಾರು ಜನ ಬೆಂಬಲಿಗರೊಂದಿಗೆ ಹುಮ್ಮಸ್ಸಿನಿಂದ ಆಗಮಿಸಿ ನಾಮಪತ್ರ ಸಲ್ಲಿಸಿದರು.
Related Articles
Advertisement
ಹಳೆ ಹುಲಿಗಳು: ಈ ಬಾರಿ ಚುನಾವಣೆಯಲ್ಲಿ ಈ ಹಿಂದೆ ಎರಡು ಮೂರು ಬಾರಿ ಪುರಸಭೆಗೆ ಆಯ್ಕೆಯಾದ ಕೆಲವು ಹಳೆ ಅಭ್ಯರ್ಥಿಗಳಾದ ಅಹ್ಮದ್ ಮೈನೋದ್ದೀನ್, ವಿನಾಯಕ ಯಾದವ್, ಗುಜ್ಜಮ್ಮ ನಾಗರೆಡ್ಡಿ, ಪಾರ್ವತಿ ಶೇರಿಕಾರ, ಪಾರ್ವತಿಬಾಯಿ ಮಾಳಗೆ, ಅಬ್ದುಲ್ ರೆಹಮಾನ ಗೋರೆಮಿಯ್ನಾ, ಮುಕ್ರಂ ಈ ಬಾರಿ ಮತ್ತೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಟಿಕೆಟ್ ವಂಚಿತರು: ಕಳೆದ ಬಾರಿ ಪುರಸಭೆ ಸದಸ್ಯರಾಗಿ ಆಯ್ಕೆಗೊಂಡಿದ್ದ ಮಲ್ಲಿಕಾರ್ಜುನ ಸೀಗಿ, ಮಹೇಶ ಎಂ.ಅಗಡಿ, ತಿರುಮಲರೆಡ್ಡಿ ಮಂಡಾ, ರಾಧಾ ಮಾಳಪ್ಪ, ಸುರೇಶ ಗುರುದತ್ತ ಒಡೆಯರ್, ಸಿದ್ದು ಕೊಟ್ಟರಗಿ, ಕಲೀಂಸಾಬ್ ನೂರ, ನಯೂಮ್ ಬಾಗವಾನ್, ಎಂ.ಡಿ.ಇಸ್ಮಾಯಿಲ್, ರಾಮು ಚವಾಣ ಟಿಕೇಟ್ ವಂಚಿತರಾದ ಹಿನ್ನೆಲೆಯಲ್ಲಿ ಬೇಸರಗೊಂಡಿದ್ದಾರೆ.