ಹುಮನಾಬಾದ್: ಐದು ವರ್ಷಗಳ ಅಧಿಕಾರ ಅವಧಿಯನ್ನು ಮತದಾರ ಪ್ರಭುಗಳ ಸೇವೆಗೆ ಮೀಸಲಿಡುವುದಾಗಿ ಪುರಸಭೆ ಸದಸ್ಯ ಕಾಳಪ್ಪ ಗೌಡ್ರು ಹೇಳಿದರು.
ಪಟ್ಟಣದಲ್ಲಿ ಶನಿವಾರ ಗಂಗಾಮತ ಕೋಲಿ ಕಬ್ಬಲಿಗ ಸಮಾಜದಿಂದ ವಿವಿಧ ಹಂತದ ಚುನಾಯಿತ ಪ್ರತಿನಿಧಿಗಳು ಮತ್ತು ವಿಶೇಷ ಸಾಧಕರಿಗಾಗಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ವಿಶ್ವಾಸವಿಟ್ಟು ಆಯ್ಕೆ ಮಾಡಿದ ಜನತೆಗೆ ದ್ರೋಹ ಬಗೆಯದೇ ಅವರಿಗೆ ಮೂಲಸೌಲಭ್ಯ ಕಲ್ಪಿಸಲು ಶಕ್ತಿಮೀರಿ ಶ್ರಮಿಸುವುದು, ಮತ ಪಡೆದು ಗೆಲುವು ಸಾಧಿಸಿರುವ ನಮ್ಮ ಕರ್ತವ್ಯ ಎಂದು ಹೇಳಿದರು.
ಸಮಾಜದ ಮುಖಂಡ ನಾರಾಯಣರಾವ್ ಭಂಗಿ ಮಾತನಾಡಿ, ಆಯ್ಕೆಗೊಂಡಿರುವ ಎಲ್ಲರೂ ಯುವಕರಾಗಿದ್ದಿರಿ. ಎಲ್ಲರಿಗೂ ಉಜ್ವಲ ಭವಿಷ್ಯವಿದೆ. ಸಿಕ್ಕ ಅವಕಾಶದ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಜನಮಾನಸದಲ್ಲಿ ಶಾಶ್ವತ ನೆಲೆ ನಿಲ್ಲುವಂತೆ ಸೇವೆ ಸಲ್ಲಿಸಬೇಕು ಎಂದರು.
ಕೋಲಿ ಸಮಾಜದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೈಜಿನಾಥರಾವ್ ಕಣಜಿ ಮಾತನಾಡಿ, ಅಧಿಕಾರ ಸಿಕ್ಕದೆ ಎಂದು ಅಹಂಕಾರ ಪಡದೇ ಅತ್ಯಂತ ಸರಳ ಸಜ್ಜನಿಕೆ ಪ್ರದರ್ಶಿಸಿ ಜನಸೇವೆಯಲ್ಲಿ ತೊಡಗಿಸಿಕೊಳ್ಳುವ ಜನಾನುರಾಗಿ ಪ್ರತಿನಿಧಿಗಳಾಗಬೇಕು. ಸಚಿವ ಪಾಟೀಲ ಅವರು ಹೇಳುವಂತೆ ಅಧಿಕಾರ ಮತ್ತು ಹಣ ಯಾರಿಗೂ ಶಾಶ್ವತವಲ್ಲ. ಇದ್ದ ಅವಧಿಯಲ್ಲಿ ಜನ ಮೆಚ್ಚುವಂತೆ ಕೆಲಸ ಮಾಡಬೇಕು ಎಂದರು.
ಪುರಸಭೆ ನೂತನ ನೂತನ ಸದಸ್ಯ ಅನೀಲ ಪಲ್ಲೆರಿ, ರಮೇಶ ಕಲ್ಲೂರ, ಕಾಂಗ್ರೆಸ್ ಮುಖಂಡ ಧರ್ಮರೆಡ್ಡಿ ಕನಕಟಕರ್, ಚಿಟಗುಪ್ಪ ಪುರಸಭೆ ಸದಸ್ಯ ರೇವಣಸಿದ್ದ ಭೋತಾಲೆ, ಬಸವಕಲ್ಯಾಣ ನಗರಸಭೆ ಸದಸ್ಯ ಮಲ್ಲಿಕಾರ್ಜುನ ಬೊಕ್ಕೆ, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಗೋರಖನಾಥ ಸಿರ್ಸೆ, ವಿಜ್ಞಾನ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದ ಅರವಿಂದ ಗೌಳಿ ಮಾತನಾಡಿದರು. ನಾಗಭೂಷಣ ಸಂಗಮ ಅಧ್ಯಕ್ಷತೆ ವಹಿಸಿದ್ದರು.
ವಿಠuಲ್ ಚಿಟಗುಪ್ಪ, ಪುಂಡಲಿಕರಾವ್ ತಾಳಮಡಗಿ, ರಾಜಣ್ಣ ಪೋಲ್ದಾಸ್, ಹಳ್ಳಿಖೇಡವಾಡಿ ಆಶ್ರಮದ ವೀರಣ್ಣ ಉಪ್ಪಾರ, ಈಶ್ವರ, ಜಗನ್ನಾಥ, ವಿನೋದ, ರಾಜಣ್ಣ, ಈರಪ್ಪ ಮಚಕೂರಿ, ದಯಾನಂದ ಮೇತ್ರಿ, ಶಂಕರ ಡಾಕುಳಗಿ, ಪ್ರಭು ಹಿಟಾಚಿ, ರಾಜು ತಾಳಮಡಗಿ, ಸಂತೋಷ ಸಂಗಮ, ಬಲರಾಮ, ಕೃಷ್ಣ ಶ್ರೀಗನ್, ಶಂಕರರಾವ್ ಚಿತ್ತಕೋಟಾ, ಜಗದೀಶ, ಬಸವರಾಜ ವಾಡಿ, ರಘು ಹಳ್ಳಿಖೇಡ ಇದ್ದರು. ಅಮೀತ್ ಚಿಂಚೋಳಿ ಸ್ವಾಗತಿಸಿದರು. ಶಿವಕುಮಾರ ಸಂಗಮ ನಿರೂಪಿಸಿದರು. ಆನಂದರಾವ್ ವಂದಿಸಿದರು.