Advertisement

ನಾಡಿದ್ದು ಅದ್ಧೂರಿ ಬಸವ ಜಯಂತಿ

02:36 PM May 05, 2019 | Naveen |

ಹುಮನಾಬಾದ: ಸಕಲ ಶಿವಶರಣರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಮೇ 7ರಂದು 886ನೇ ಬಸವ ಜಯಂತಿ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ಸಂಘದ ಅಧ್ಯಕ್ಷ ಡಾ| ಸಿದ್ದಲಿಂಗಪ್ಪ ಪಾಟೀಲ ಹೇಳಿದರು.

Advertisement

ಪಟ್ಟಣದ ಆರ್ಯ ಸಮಾಜ ಮಂದಿರದಲ್ಲಿ ಶುಕ್ರವಾರ ನಡೆದ ಬಸವಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಿಸಿಲಿನ ತಾಪ ಹೆಚ್ಚಿಗೆ ಇರುವ ಕಾರಣ ಅಂದು ಸಂಜೆ 6:00ಕ್ಕೆ ಥೇರ ಮೈದಾನದಿಂದ ಡಾ| ಅಂಬೇಡ್ಕರ್‌ ವೃತ್ತ, ಸರ್ದಾರ್‌ ವಲ್ಲಭಭಾಯಿ ಪಟೇಲ್, ಬಾಲಾಜಿ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಭವ್ಯ ಮೆರವಣಿಗೆ ನಡೆಸಲಾಗುವುದು. ಇಟಗಿ ಆಕರ್ಷಕ ಸಾರೋಟದಲ್ಲಿ ಬಸವೇಶ್ವರರ ಮೂರ್ತಿ ಮೆರವಣಿಗೆ ನಡೆಸುವುದು. ಕುದರೆ ಮೇಲೆ ಬಸವೇಶ್ವರ ಪಾತ್ರಧಾರಿ ಜತೆಗೆ ಅಕ್ಕಮಹಾದೇವಿ ಸೇರಿದಂತೆ ಇತರೆ ಶಿವಶರಣರ ಪಾತ್ರಧಾರಿಗಳನ್ನು ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ನಡೆಸುವುದು. ನೀಲಾಂಬಿಕಾ ಮಹಿಳಾ ಮಂಡಳ ಮತ್ತಿತರ ಕಲಾತಂಡಗಳನ್ನು ಆಹ್ವಾನಿಸಲಾಗುವುದು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಡಾ| ಎಸ್‌.ಆರ್‌. ಮಠಪತಿ ಶಹಾಪುರದ ವಿಶ್ವರಾಧ್ಯ ಸಂತ್ಯಂಪೇಟೆ ಅವರ ವಿಶೇಷ ಉಪನ್ಯಾಸ, ಬೀದರ ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ, ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ರಾಜಶೇಖರ ಪಾಟೀಲ, ವಿಧಾನ ಪರಿಷತ್‌ ಸದಸ್ಯ ಡಾ| ಚಂದ್ರಶೇಖರ ಪಾಟೀಲ, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಭೀಮರಾವ ಪಾಟೀಲ ಮತ್ತಿತರ ಗಣ್ಯರನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಲಾಗುವುದು ಎಂದು ಹೇಳಿದರು.

ಯುವ ಬ್ರಿಗೇಡ್‌ ತಾಲೂಕು ಸಂಚಾಲಕ ಲಕ್ಷ್ಮಿಕಾಂತ ಹಿಂದೊಡ್ಡಿ ಮಾತನಾಡಿ, ಬಸವಾದಿ ಶರಣರು ಎಲ್ಲ ಸಮುದಾಯಗಳನ್ನು ಒಪ್ಪಿ ಅಪ್ಪಿಕೊಂಡವರು. ಆದ್ದರಿಂದ ಹರಳಯ್ಯ, ಡೋಹರ, ಮಡಿವಾಳ, ಕಂಬಾರ, ಕುಂಬಾರ, ಹೂಗಾರ, ಮಾದಾರ, ಆರ್ಯವೈಶ್ಯ ಸಮಾಜ, ಬ್ರಾಹ್ಮಣ ಸಮಾಜ ಸೇರಿದಂತೆ ಸಕಲ ಕುಲಜರಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ವಿಶೇಷ ಆಹ್ವಾನ ನೀಡಬೇಕು ಎಂದು ಹೇಳಿದರು.

Advertisement

ಶಾಂತವೀರ ಯಲಾಲ ಮಾತನಾಡಿ, ಒಬ್ಬ ಪುರುಷ ಹಾಗೂ ಮಹಿಳಾ ಸಮಾಜ ಸೇವಕರನ್ನು ಗುರುತಿಸಿ ಕಾಯಕಶ್ರೀ ಪ್ರಶಸ್ತಿ ನೀಡಿ ಗೌರವಿಸುವಂತೆ ಸಲಹೆ ನೀಡಿದರು.

ಬಸವಸೇವಾ ಪ್ರತಿಷ್ಠಾನ ಅಧ್ಯಕ್ಷ ಚನ್ನಬಸಪ್ಪ ವಡ್ಡನಕೇರಿ, ಕಾರ್ಯದರ್ಶಿ ಮಲ್ಲಿಕಾರ್ಜುನ ಸಂಗಮ್ಮಕರ್‌, ರವಿಕುಮಾರ ಮಾಡಗಿ, ಮಹೇಶ ಅಗಡಿ, ಮಲ್ಲಿಕಾರ್ಜುನ ಮಾಶೆ‌ಟ್ಟಿ, ಶ್ರೀನಿವಾಸ ದೇವಣಿ, ಸುಭಾಷ ಭಗೋಜಿ, ಶಿವಶಂಕರ ತರನಳ್ಳಿ, ವೀರಣ್ಣ ಕಲಬುರಗಿ, ವೀರೇಶ ಪರಮಶೆಟ್ಟಿ, ವೀರೇಶಕುಮಾರ ಭಾವಿ, ಸಂತೋಷ ನಾವದಗಿ, ಶರದಕುಮಾರ ನಾರಾಯಣಪೇಟಕರ್‌, ರಾಜು ಲದ್ದಿ, ಮಾಣಿಕಪ್ಪ ಸಿದ್ದೇಶ್ವರ, ಬಸವರಾಜ ರುದ್ರವಾಡಿ, ಜಗನ್ನಾಥ ಭಾವಿ, ಶಂಕರ ಕೋರಿ, ಮಲ್ಲಪ್ಪ ತುಪ್ಪದ, ಉಮೆಶ ಜಂಬಗಿ, ಸುನೀಲ ಪತ್ರಿ, ಶ್ರೀಕಾಂತ ತಾಂಡೂರ, ಗುರುಲಿಂಗಪ್ಪ ಭಾವಿ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next