Advertisement

ಸಂವಿಧಾನ ಗೌರವಿಸುವುದು ಎಲ್ಲರ ಕರ್ತವ್ಯ

03:48 PM Dec 29, 2019 | Naveen |

ಹುಮನಾಬಾದ: ಸಂವಿಧಾನವನ್ನು ಆಳವಾಗಿ ಅಧ್ಯಯನ ಮಾಡಿ, ಅದನ್ನು ಗೌರವಿಸುವುದು ಈ ದೇಶದ ಪ್ರತಿಯೊಬ್ಬ ನಾಗರಿಕರ ಆದ್ಯ ಕರ್ತವ್ಯವಾಗಿದೆ ಪ್ರೊ| ಮಲ್ಲಿಕಾರ್ಜುನ ದೊಡ್ಮನಿ ಹೇಳಿದರು.

Advertisement

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಪ್ರಾ ಧಿಕಾರ, ವಕೀಲರ ಸಂಘ ಸಂಯುಕ್ತವಾಗಿ ಸಂವಿಧಾನ ದಿನಾಚರಣೆ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಸಂವಿಧಾನದ ಬದ್ಧವಾಗಿ ಲಭಿಸಿದ ಹಕ್ಕು ಚಲಾವಣೆ ವಿಷಯದಲ್ಲಿ ತೋರಿಸುವ ಉತ್ಸಾಹವನ್ನು ಕರ್ತವ್ಯ ಪಾಲನೆ ವಿಷಯದಲ್ಲೂ ಹೊಂದಿದಾಗ ಮಾತ್ರ ರಾಷ್ಟ್ರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

ದೇಶದಲ್ಲಿ ಶಾಂತಿ ಕಾಪಾಡುವುದರ ಜೊತೆಗೆ ಆಸ್ತಿಪಾಸ್ತಿಗಳನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಉತ್ತಮ ರಸ್ತೆ, ಶುದ್ಧ ನೀರು, ಸಮರ್ಪಕ ವಿದ್ಯುತ್‌ ದೀಪಗಳ ಸೌಲಭ್ಯ, ಸಕಾಲಕ್ಕೆ ಬಸ್‌ ಸೌಲಭ್ಯ ಕಲ್ಪಿಸುವಂತೆ ಪ್ರತಿಭಟನೆ ನಡೆಸಲು ಸಂವಿಧಾನ ನಮ್ಮೆಲ್ಲರಿಗೆ ಹಕ್ಕು ಕೊಟ್ಟಿದೆ. ಅದೇ ರೀತಿ ಪರಿಸರ ಸಂರಕ್ಷಣೆ, ಕುಡಿಯುವ ನೀರು ಮತ್ತು, ವಿದ್ಯುತ್‌ ಹಿತ-ಮಿತ ಬಳಸುವುದು ಈ ದೇಶದ ಪ್ರತೀ ನಾಗರಿಕರ ಕರ್ತವ್ಯ ಎನ್ನುವುದನ್ನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.

ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಗಗನ್‌ ಎಂ.ಆರ್‌. ಕಾರ್ಯಕ್ರಮ
ಉದ್ಘಾಟಿಸಿ ಮಾತನಾಡಿ, ಸಂಚಾರ ನಿಯಮ ಪಾಲನೆ, ವಾಹನ ಪರವಾನಗಿ, ಕಡ್ಡಾಯ ಹೆಲ್ಮೆಟ್‌ ಧಾರಣೆ, ತೆರಿಗೆ ಪಾವತಿ ಇತ್ಯಾದಿ ಸಾರ್ವಜನಿಕರ ಹಿತದೃಷ್ಟಿಯಿಂದ ಎಂಬುದನ್ನು ಮರೆತು ಅರಿತುಕೊಳ್ಳಬೇಕು. ಆಟೋಗಳಲ್ಲಿ ನಿಯಮ ಉಲ್ಲಂಘಿಸಿ ಹೆಚ್ಚು ಪ್ರಯಾಣಿಕರನ್ನು ತುಂಬಿಕೊಳ್ಳುವುದು, ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಹಾಗೂ ಓದುವ ಮಕ್ಕಳನ್ನು ಕೂಲಿಗೆ ಕಳಿಸುವುದು, ಬಾಲ್ಯವಿವಾಹ ಪದ್ಧತಿ ಮೊದಲಾದವುಗಳು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಎಚ್ಚರ
ವಹಿಸಬೇಕು ಎಂದು ಸಲಹೆ ನೀಡಿದರು.

Advertisement

ಮಹಾವಿದ್ಯಾಲಯ ಪ್ರಾಚಾರ್ಯ ಡಿ.ಅಜೇಂದ್ರಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದ ಮಾತನಾಡಿ, ಮಾಜಿ ರಾಷ್ಟ್ರಪತಿ ದಿ.ಅಬ್ದುಲ್‌ ಕಲಾಂ ಅವರು ಹೇಳಿರುವಂತೆ ವಿದ್ಯಾರ್ಥಿಗಳು ಯಾವತ್ತೂ ದೊಡ್ಡ ಕನಸು ಕಾಣಬೇಕು. ಚಿಕ್ಕ ಕನಸು ಕಾಣುವುದು ದೊಡ್ಡ ಅಪರಾಧ ಎಂಬುದನ್ನು ವಿದ್ಯಾರ್ಥಿಗಳು ಮರೆಯಬಾರದು. ಮನುಷ್ಯನಿಗೆ ಹೃದಯ ಎಷ್ಟು ಮುಖ್ಯವೋ ಒಂದು ದೇಶಕ್ಕೆ ಸಂವಿಧಾನವೂ ಅಷ್ಟೇ ಮುಖ್ಯ ಎಂದರು.

ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಗುರುಲಿಂಗಪ್ಪ ತೇಲಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಸ್‌.ಚನ್ನಪ್ಪ, ಪುಷ್ಪಲತಾ ಚಾಂಗ್ಲೇರಿ, ದತ್ತುರಾವ್‌, ಭರತಕುಮಾರ, ಡಾ|ಶ್ರವಣಕುಮಾರ ಟೋಂಪೆ, ಸೂರಾಚಂದ ಗಾಂಧಿ, ಅರುಣಕುಮಾರ
ದೊಡ್ಮನಿ, ಮುದುಕಮ್ಮ ಸಜ್ಜನ್‌, ಸಮೀನಾ ಅಂಜುಂ, ಬಾಬುರಾವ್‌ ಪಂಚಾಳ, ವಿದ್ಯಾವತಿ ಚಿದ್ರಿ, ತಿಪ್ಪಣ್ಣ ಕೆಂಪೆನೋರ್‌ ಯಾಸ್ಮಿನ್‌ ಸುಲ್ತಾನಾ, ಗೋರಖನಾಥ ವೇದಿಕೆಯಲ್ಲಿ¨ª‌ರು.
ಯಶೋದಾ ಪ್ರಾರ್ಥಿಸಿದರು.

ಉಪಪ್ರಾಚಾರ್ಯ ಕಾಶಿನಾಥ ಕೂಡ್ಲಿ ಸ್ವಾಗತಿಸಿದರು. ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರಾಧಿಕಾರಿ ತಿಪ್ಪಣ್ಣ ಕೆಂಪೆನೋರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲ ವಿಜಯಕುಮಾರ ನಾತೆ ನಿರೂಪಿಸಿದರು. ಪ್ರೊ|ತುಳಜಾರಾಮ ಗಾಯದನಕರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next