Advertisement

Texas; ಮಾನವ ಕಳ್ಳಸಾಗಣೆ: ಅಮೆರಿಕದಲ್ಲಿ 4 ಭಾರತೀಯರ ಬಂಧನ

09:42 PM Jul 09, 2024 | Team Udayavani |

ನ್ಯೂಜೆರ್ಸಿ: ಮಾನವ ಕಳ್ಳಸಾಗಣೆ ಆರೋಪದಡಿ ಅಮೆರಿಕದ ನ್ಯೂಜೆರ್ಸಿಯಲ್ಲಿ ನಾಲ್ವರು ಭಾರತೀಯರನ್ನು ಬಂಧಿಸಲಾಗಿದೆ. ಈ ಬಂಧನ ಮಾರ್ಚ್‌ನಲ್ಲೇ ನಡೆದಿದ್ದರೂ ಪೊಲೀಸರು ಈಗ ಮಾಹಿತಿ ಬಿಡುಗಡೆ ಮಾಡಿದ್ದಾರೆ.

Advertisement

ಅಕ್ರಮ ಚಟುವಟಿಕೆಗಳು ನಡೆಯುತ್ತಿದೆ ಎಂಬ ಕರೆಯನ್ನು ಆಧರಿಸಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಗಿನ್ಸ್‌ಬರ್ಗ್‌ ಲೇನ್‌ನಲ್ಲಿರುವ ಮನೆಗಳಲ್ಲಿ 3ರಿಂದ 5 ಹೆಣ್ಣುಮಕ್ಕಳು ಕೋಣೆಗಳಲ್ಲಿ ಮಲಗಿದ್ದಾರೆ ಎಂದು ಕೀಟ ನಿಯಂತ್ರಣಾ ಕಂಪನಿಯೊಂದು ಪೊಲಿಸರಿಗೆ ಮಾಹಿತಿ ನೀಡಿತ್ತು. ಇದನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರು ನಾಲ್ವರು ಭಾರತೀಯರನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next