ಜಿನೇವಾ/ನವದೆಹಲಿ: ಭಾರತ-ಪಾಕಿಸ್ತಾನ ನಡುವಿನ ಗಡಿ ನಿಯಂತ್ರಣ ರೇಖೆಗೆ ಅಂತಾರಾಷ್ಟ್ರೀಯ ಸಮುದಾಯದ ಪ್ರವೇಶ ಅತ್ಯಗತ್ಯವಾಗಿದೆ ಎಂಬ ಯುಎನ್‌ಎಚ್‌ಆರ್‌ಸಿಯ ಅಧ್ಯಕ್ಷ ಝೈದ್ ರಿಯಾದ್ ಅಲ್ ಹುಸೇನ್ ಹೇಳಿಕೆಗೆ ಭಾರತ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದೆ. ಕಾಶ್ಮೀರದಲ್ಲಿ ಭಾರತ ಮಾನವ ಹತ್ತುಗಳ ಉಲ್ಲಂಘನೆ ಮಾಡುತ್ತಿದೆ ಎಂಬುದೇ ತಪ್ಪು. ಜತೆಯಲ್ಲಿ ಭಯೋತ್ಪಾದಕ ಸಂಘಟನೆಗಳನ್ನು “ಸಶಸ್ತ್ರ ಗುಂಪು’ಗಳು ಎಂದು ಕರೆದಿರುವುದಲ್ಲದೇ, ಭಯೋತ್ಪಾದಕರನ್ನು “ನಾಯಕ’ರು ಎಂದು ವರದಿಯಲ್ಲಿ ಕರೆಯ ಲಾಗಿದೆ. ಇಂಥ ವರದಿ ಕೊಟ್ಟಿರುವ ಯುಎನ್‌ಎಚ್‌ಆರ್‌ಸಿ ಕ್ರಮ ತೀರಾ ಕಳವಳಕಾರಿ ಎಂದು ವಿಶ್ವಸಂಸ್ಥೆಯಲ್ಲಿರುವ ಭಾರತದ ಕಾಯಂ ರಾಯಭಾರಿ ರಾಜೀವ್ ಕೆ. ಚಂದರ್ ತಿರುಗೇಟು ನೀಡಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಚುನಾಯಿತ ಸರ್ಕಾರವಿದ್ದು, ಪ್ರಜಾಪ್ರಭುತ್ವ ಜಾರಿಯಲ್ಲಿದೆ. ಅಲ್ಲದೆ, ಕಳೆದ ವಾರವಷ್ಟೇ ಉಗ್ರರಿಂದ ಹತ್ಯೆಯಾದ ಪತ್ರಕರ್ತ ಸುಝಾತ್ ಬುಖಾರಿ ಮತ್ತು ಯೋಧ ಔರಾಂಗಜೇಬ್ ಪ್ರಕರಣಗಳು ಮಾನವ ಹಕ್ಕುಗಳ ಮಂಡಳಿ ಕಣ್ಣಿಗೆ ಕಾಣುತ್ತಲೇ ಇಲ್ಲ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಸೋಮವಾರವಷ್ಟೇ ಝೈದ್, ಕಾಶ್ಮೀರದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆ ತನಿಖೆಗಾಗಿ ಸಮಿತಿ ರಚಿಸಬೇಕು ಎಂದು ಹೇಳಿದ್ದರು. ಮಂಡಳಿ ಅಧ್ಯಕ್ಷರ ಈ ಪ್ರಸ್ತಾಪವನ್ನು ಪಾಕಿಸ್ತಾನ ಸ್ವಾಗತಿಸಿದೆ.
ಅಮೆರಿಕ ಹೊರಕ್ಕೆ: ಇದೇ ವೇಳೆ, ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂಬ ವರದಿ ನೀಡಿ ಸುದ್ದಿಯಲ್ಲಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಅಮೆರಿಕ ಶಾಕ್ ನೀಡಿದೆ. ಇಸ್ರೇಲ್ ವಿರುದ್ಧ ವರದಿ ಕೊಟ್ಟ ಕ್ರಮದಿಂದ ಆಕ್ರೋಶಗೊಂಡಿರುವ ಅದು, ಮಂಡಳಿಯಿಂದಲೇ ಹೊರಬರುವುದಾಗಿ ಘೋಷಣೆ ಮಾಡಿದೆ. ಮಾನವ ಹಕ್ಕುಗಳನ್ನು ಉಲ್ಲಂ ಸುವರ ವಿರುದ್ಧ ಮೌನವಾಗಿರುವ ಮೂಲಕ ಈ ಸಂಸ್ಥೆ ನಾಚಿಕೆಯಿಲ್ಲದೆ ಬೂಟಾಟಿಕೆ ಮಾಡುತ್ತಿದೆ ಎಂದು ಕಿಡಿಕಾರಿದೆ. ಇಸ್ರೇಲ್ ವಿರುದ್ಧ ಕಾರಣವಿಲ್ಲದೆ ಮಂಡಳಿ ಕಿಡಿ ಕಾರುತ್ತಿದೆ. ಮಾನವ ಹಕ್ಕುಗಳನ್ನು ಉಲ್ಲಂ ಸುವವರೇ ಮಂಡಳಿಗೆ ಆಯ್ಕೆಯಾಗುತ್ತಾ ಬರುತ್ತಿದ್ದಾರೆ. ಜಗತ್ತಿನಲ್ಲಿ ಮಾನವ ಹಕ್ಕುಗಳನ್ನು ಪದೇ ಪದೆ ಉಲ್ಲಂ ಸುತ್ತಾ ಬರುವವರು ವಿಶ್ವಸಂಸ್ಥೆಯ ತಪಾಸಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಅಂಥ ರಾಷ್ಟ್ರಗಳ ತಪ್ಪುಗಳನ್ನು ಮುಚ್ಚಿಡುವುದಕ್ಕಾಗಿ ಈ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ ರಾಷ್ಟ್ರಗಳನ್ನು ಬಲಿಪಶು ಮಾಡಲಾಗುತ್ತಿದೆ. ಇಂಥ ಮಂಡಳಿಯಲ್ಲಿ ಅಮೆರಿಕ ಮುಂದುವರಿಯಲು ಸಾಧ್ಯವೇ ಇಲ್ಲ ಎಂದು ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿ ನಿಕ್ಕಿ ಹ್ಯಾಲೆ ಘೋಷಿಸಿದ್ದಾರೆ.
ಅಮೆರಿಕ ಆರೋಪಗಳನ್ನು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆéಂಟೋನಿಯೋ ಗುಟ್ರೆಸ್ ತಳ್ಳಿ ಹಾಕಿದ್ದಾರೆ. ಮಂಡಳಿ ಹಕ್ಕುಗಳ ರಕ್ಷಣೆಯಲ್ಲಿ ಪ್ರಧಾನ ಪಾತ್ರ ವಹಿಸಿದೆ ಎಂದಿದ್ದಾರೆ.