Advertisement

ಮಾನವ ಹಕ್ಕುಗಳ ರಕ್ಷಣೆ ಎಲ್ಲರ ಹೊಣೆ: ಕೆ.ಸಿ.ಎನ್.ಸುರೇಶ್

12:31 PM Nov 27, 2021 | Team Udayavani |

ಪಿರಿಯಾಪಟ್ಟಣ: ಮನುಷ್ಯನಿಗೆ ಸಂವಿಧಾನ ದತ್ತವಾಗಿ ಬಂದಿರುವ  ಹಕ್ಕುಗಳಿಗೆ ತೊಂದರೆಯದಾಗ ಅವುಗಳ ರಕ್ಷಣೆಗೆ ನಿಲ್ಲುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಬೇಕು ಎಂದು ಮಾನವ ಹಕ್ಕುಗಳ ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ  ಕೆ.ಸಿ.ಎನ್.ಸುರೇಶ್ ತಿಳಿಸಿದರು.

Advertisement

ಪಟ್ಟಣದ ರೋಟರಿ ಭವನದಲ್ಲಿ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆಯ ನೂತನ ತಾಲ್ಲೂಕು ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಮನುಷ್ಯ ಹುಟ್ಟಿನಿಂದಲೇ ಸಮಾಜದಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಸಮಾನವಾಗಿ ಪಡೆಯುತ್ತಾನೆ. ಅದು ಸಂವಿಧಾನ ಕಲ್ಪಿಸಿರುವ ಅವಕಾಶ. ಈ ನಿಟ್ಟಿನಲ್ಲಿ ಸಂವಿಧಾನವು ಇದಕ್ಕೆ ತನ್ನದೆಯಾದ ಮಿತಿಯನ್ನು ವಿಧಿಸಿ ತಾನು ಬದುಕುವುದರೊಂದಿಗೆ ಇತರರ ಹಕ್ಕುಗಳನ್ನು ಗೌರವಿಸಲು ಅವಕಾಶ ಕಲ್ಪಿಸಲಾಗಿದೆ. ಇಂಥ ಹಕ್ಕುಗಳಿಗೆ ಹಕ್ಕುಗಳಿಂದ ಉಲ್ಲಂಘನೆಗೊಳಗಾದ ನಿರ್ಗತಿಕರಿಗೆ ಕಾನೂನಿನ ರಕ್ಷಣೆ, ನೆರವು, ಬದುಕಲು ದಾರಿ ತೋರಿಸುವುದು ಪ್ರತಿಯೊಬ್ಬರ ಕರ್ತವ್ಯ. ಮಾನವ ಹಕ್ಕುಗಳ ಉಲ್ಲಂಘನೆ ದೇಶದ ಅಭಿವೃದ್ದಿ ಮೇಲೆ ದುಷ್ಪರಿಣಾಮ ಬೀರುತ್ತದೆ ಆದ್ದರಿಂದ ಈ ಬಗ್ಗೆ ವಿದ್ಯಾರ್ಥಿಗಳು ಪೋಷಕರಲ್ಲಿ ಅರಿವು ಮೂಡಿಸಬೇಕು, ಎಲ್ಲಿ ಮಾನವ ಹಕ್ಕುಗಳು ಉಲ್ಲಂಘನೆ ಆಗುತ್ತವೆಯೋ ಅಲ್ಲಿ ಅಸಮಾನತೆ, ದೌರ್ಜನ್ಯ ಇರುತ್ತದೆ  ಆದ್ದರಿಂದ ಹಕ್ಕುಗಳು ಉಲ್ಲಂಘನೆಯಾಗದ ರೀತಿಯಲ್ಲಿ ಎಚ್ಚರಿಕೆ ವಹಿಸಬೇಕು ಎಂದರು.

ಮಾನವ ಹಕ್ಕುಗಳ ರಕ್ಷಣಾ ಸಮಿತಿಯ ಜಿಲ್ಲಾಧ್ಯಕ್ಷ ಜಿ.ಯೋಗೀಶ್ ಮಾತನಾಡಿ ಮತ್ತೊಬ್ಬರ ಹಕ್ಕುಗಳನ್ನು ಕಸಿದುಕೊಳ್ಳುವುದು ದೊಡ್ಡ ಅಪರಾಧವಾಗಿದ್ದು ಹೀಗಾಗಿ ಎಲ್ಲರ ಹಕ್ಕುಗಳ ರಕ್ಷಣೆಗೆ ಪ್ರತಿಯೊಬ್ಬರು ಕೈ ಜೋಡಿಸಬೇಕಾಗಿದೆ. ಮಾನವ ಹಕ್ಕುಗಳ ರಕ್ಷಣೆ ದೇಶದ ಸಂವಿಧಾನದ ಆದ್ಯ ಆಶಯವಾಗಿದೆ. ದೇಶದಲ್ಲಿ ಮಾನವ ಹಕ್ಕುಗಳ ರಕ್ಷಣೆಗಾಗಿ ಕಾಯಿದೆ, ನಿಯಮಗಳನ್ನು ರೂಪಿಸಿದ್ದರೂ ನಿತ್ಯ ಉಲ್ಲಂಘನೆಯಾಗುತ್ತಿರುವುದು ದುರದೃಷ್ಟಕರ ಸಂಗತಿ. ಭ್ರೂಣ ಹತ್ಯೆ, ಬಾಲ್ಯ ವಿವಾಹ, ಶಿಕ್ಷಣದಿಂದ ವಂಚಿತ, ವರದಕ್ಷಿಣೆ ಪಿಡುಗು ಇತರೆ ರೂಪದಲ್ಲಿ ಮಾನವ ಹಕ್ಕುಗಳ ಉಲ್ಲಂಘಟನೆ ಆಗುತ್ತಲೇ ಇದ್ದು, ಇಂಥ ಪರಿಸ್ಥಿತಿಯಲ್ಲಿ ಸಾಮಾಜಿಕ ಮೌಲ್ಯವನ್ನು ಎತ್ತಿ ಹಿಡಿಯುವ ಕಾರ್ಯ ಹೆಚ್ಚಾಗಿ ನಡೆಯಬೇಕಾಗಿದೆ. ಸಾಮಾಜಿಕ ಜವಾಬ್ದಾರಿಯೆಂಬುದು ಪ್ರತಿಯೊಬ್ಬರಲ್ಲೂ ಮೂಡಬೇಕಾಗಿದೆ. ಹೀಗಾಗಿ ಎಲ್ಲರೂ ಮಾನವೀಯತೆಯೊಂದಿಗೆ ಬೆರೆಯಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನೂತನ ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಮತ್ತು ಗುರುತಿನ ಚೀಟಿ ವಿತರಣಾ ಕಾರ್ಯಕ್ರಮ ನಡೆಯಿತು.

Advertisement

ಈ ಸಂದರ್ಭದಲ್ಲಿ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಆರ್.ಶಿವಶಂಕರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಂಜುನಾಥ್, ಕಾರ್ಯದರ್ಶಿಗಳಾದ ಸುರೇಶ್, ಕೆ.ಶಿವಶಂಕರ್, ಸಂಘಟನಾ ಕಾರ್ಯದರ್ಶಿ ಸತೀಶ್, ಜಿಲ್ಲಾ ಗೌರವಾಧ್ಯಕ್ಷ ಎಂ.ಅಂಬರೀಷ್, ತಾಲ್ಲೂಕು ಘಟಕದ ಅಧ್ಯಕ್ಷ ಸಂತೋಷ್ ಗೌಡ, ಗೌರವಾಧ್ಯಕ್ಷ ರೂಪ್ ಸಿಂಗ್, ಉಪಾಧ್ಯಕ್ಷರಾದ ಮುತ್ತುರಾಜ್, ದೇವರಾಜ್, ಕಾನೂನು ಸಲಹೆಗಾರ ಹೆಮ್ಮಿಗೆ ಶ್ರೀನಿವಾಸ್, ಕಾರ್ಯದರ್ಶಿಗಳಾದ ಕೆ.ಆರ್. ವಿನೋದ್ ಕುಮಾರ್, ಮಹಾಲಿಂಗ, ನಿರ್ದೆಶಕರಾದ ಸಂತೋಷ್ ಪಾಟೆಲ್, ಮೋಹನ್, ಧನಂಜಯ್, ಪ್ರವೀಣ್, ವಸಂತ, ಮೈಲಾರಿ, ಕುಮಾರ್, ತ್ರಿನೇಶ್, ಸುಮೇಶ್, ಅರುಣ್ , ಪ್ರದೀಪ್, ಕಿರಣ್, ರಾಜೇಶ್, ನವೀನ್, ಮಂಜುನಾಥ್, ಸಿಂಚನ ಸುರೇಶ್ ಸೇರಿದಂತೆ ಮತ್ತಿತರರು  ಹಾಜರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next