Advertisement

31ರಿಂದ ಮಾನವ ಹಕ್ಕು ಆಯೋಗ ವಿಚಾರಣೆ

10:38 PM Dec 28, 2019 | Team Udayavani |

ಮಂಗಳೂರು: ನಗರದಲ್ಲಿ ನಡೆದ ಗೋಲಿಬಾರ್‌ ಮತ್ತು ಹಿಂಸಾಚಾರದಲ್ಲಿ ಪೊಲೀಸರು ಜನರ ಮೇಲೆ ದೌರ್ಜನ್ಯ ಎಸಗಿ ಮಾನವ ಹಕ್ಕು ಉಲ್ಲಂಘಿಸಿದ್ದಾರೆಂದು ಆರೋಪಿಸಿ ಎಐಸಿಸಿಯ ಸಾಮಾಜಿಕ ಜಾಲತಾಣ ವಿಭಾಗದ ಸಂಯೋಜಕಿ ಲಾವಣ್ಯ ಬಲ್ಲಾಳ್‌ ಸೇರಿ ನಾಲ್ವರು ರಾಜ್ಯ ಮಾನವ ಹಕ್ಕು ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದು, ಡಿ.31ರಂದು ವಿಚಾರಣೆ ಆರಂಭವಾಗುವ ಸಾಧ್ಯತೆಯಿದೆ.

Advertisement

ಲಾವಣ್ಯ ಬಲ್ಲಾಳ್‌, ಯುವ ಕಾಂಗ್ರೆಸ್‌ ಉಪಾಧ್ಯಕ್ಷ ಲುಕ್ಮಾನ್‌ ಬಂಟ್ವಾಳ, ಮೂನಿಷ್‌ ಆಲಿ ಅಹಮ್ಮದ್‌, ರಕ್ಷಿತ್‌ ಶಿವರಾಮ್‌ ಅವರು ಡಿ. 26ರಂದು ಆಯೋಗಕ್ಕೆ ದೂರು ನೀಡಿದ್ದಾರೆ. ಧೀರೇಂದ್ರ ಹೀರಾಲಾಲ್‌ ವಾಘೇಲ ಅಧ್ಯಕ್ಷತೆಯ ಮಾನವ ಹಕ್ಕು ಆಯೋಗದ ಪೂರ್ಣ ಪ್ರಮಾಣದ ಪೀಠ ಈ ವಿಚಾರಣೆ ಕೈಗೆತ್ತಿಕೊಳ್ಳಲಿದೆ ಎಂದು ಲಾವಣ್ಯ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next