Advertisement
ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಬಾಳೆಪುಣಿ ಸಮೀಪದ ಯರ್ಮಾಜೆ ಎಂಬಲ್ಲಿನ ನಿವಾಸಿ ಜಯಶಂಕರ ನೋಂಡ ಅವರು ಕೆಲಸ ಮಾಡುತ್ತಿರುವಾಗ ಅನಿರೀಕ್ಷಿತವಾಗಿ ಆಘಾತಗೊಂಡು ಪಾರ್ಶ್ವದ ಬಲವನ್ನು ಕಳೆದುಕೊಂಡು ಮಲಗಿದ್ದಲ್ಲಿಯೇ ಕಳೆದ ಎರಡೂವರೆ ವರ್ಷ ಗಳಿಂದ ಇದ್ದು, ತನ್ನ ಅನಾರೋಗ್ಯದಿಂದಾಗಿ ಮನೆ ನಿರ್ಮಾಣ ಮಾಡುವುದಕ್ಕೆ ಅನಾನುಕೂಲವಾದ ಹಿನ್ನೆಲೆಯನ್ನು ಜಾಗತಿಕ ಬಂಟರ ಸಂಘ ಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರ ಬಳಿ ತಮ್ಮ ಅಸಹಾಯಕತೆ ತೋಡಿಕೊಂಡಾಗ ಒಕ್ಕೂಟದ ಸಮಾಜ ಕಲ್ಯಾಣ ಯೋಜನೆ ಯಡಿ ಮನೆಯನ್ನು ಪೂರ್ಣಗೊಳಿಸಿ ಸುಮತಿ ನೊಂಡ ಮತ್ತು ಜಯಶಂಕರ ನೋಂಡ ಅವರಿಗೆ ಹಸ್ತಾಂತರಿಸಲಾಯಿತು. ಜಯಶಂಕರ ನೋಂಡರಿಗೆ ಜಾಗತಿಕ ಬಂಟರ ಸಂಘದ ಮೂಲಕ ಆರೋಗ್ಯ ನೆರವು ನೀಡಿ ಚಿಕಿತ್ಸೆಗಾಗಿ ಪ್ರತೀ ತಿಂಗಳು 5,000 ರೂ. ಗಳನ್ನು ನೀಡುವುದಾಗಿ ಹಾಗೂ ಮಕ್ಕಳ ವಿದ್ಯಾಭ್ಯಾಸದ ಬಗ್ಗೆಯೂ ಸಹಕರಿಸುವುದಾಗಿ ಐಕಳ ಹರೀಶ್ ಶೆಟ್ಟಿ ತಿಳಿಸಿದರು.
Related Articles
ಸಾಲೆತ್ತೂರು ವಲಯ ಬಂಟರ ಸಂಘದ ಕಾರ್ಯದರ್ಶಿ ಶಶಿಧರ್ ರೈ ಕುಳಾಲು, ಒಕ್ಕೂಟದ ಸದಸ್ಯ ಸುರೇಶ್ ಶೆಟ್ಟಿ ಸೂರಿಂಜೆ, ರವಿ ಶೆಟ್ಟಿ ಜತ್ತಬೆಟ್ಟು, ಮಹಿಳಾ ಘಟಕದ ಅಧ್ಯಕ್ಷೆ ವಿಜಯಾ ಬಿ.ಶೆಟ್ಟಿ ಸಾಲೆತ್ತೂರು, ಜಯಶಂಕರ ನೋಂಡ ಉಪಸ್ಥಿತರಿದ್ದರು. ಸಾಲೆತ್ತೂರು ವಲಯದ ಬಂಟರ ಸಂಘದ ಅಧ್ಯಕ್ಷ ದೇವಪ್ಪ ಶೇಖ ಪೀಲ್ಯಡ್ಕ ಪ್ರಸ್ತಾವಿಸಿ ಸ್ವಾಗತಿಸಿದರು. ಶಶಿಧರ ರೈ ಕುಳಾಲು ವಂದಿಸಿ ದರು. ಜಾಗತಿಕ ಬಂಟರ ಸಂಘಗಳ ಮಾಜಿ ಕೋಶಾ ಧಿಕಾರಿ ಬಾಲಕೃಷ್ಣ ರೈ ಕೊಲ್ಲಾಡಿ ನಿರೂಪಿಸಿದರು.
Advertisement