Advertisement

ಭೂಮಿಗೆ ಭಾರ ಹಾಕುತ್ತಿರುವ ಮಾನವ

12:16 AM Dec 16, 2020 | mahesh |

ಲಂಡನ್‌: ಮನುಷ್ಯ ನಿರ್ಮಿಸಿರುವ ಕಟ್ಟಡಗಳು, ರಸ್ತೆಗಳು, ಕಾರುಗಳು ಹಾಗೂ ಒಟ್ಟಾರೆ ಎಲ್ಲ ರೀತಿಯ ಉತ್ಪನ್ನಗಳ ರಾಶಿ ಎಷ್ಟಿರಬಹುದು? ಇತ್ತೀಚಿನ ಸಂಶೋ ಧನ ವರದಿಯೊಂದರ ಪ್ರಕಾರ, ಇವೆಲ್ಲದರ ಒಟ್ಟು ತೂಕವು ಭೂಮಿಯ ಮೇಲಿನ ಮರಗಿಡಗಳು ಹಾಗೂ ಎಲ್ಲ ಪ್ರಾಣಿ ಪಕ್ಷಿಗಳಿಗಿಂತಲೂ ಅಧಿಕವಿದೆ! ನೇಚರ್‌ ವಿಜ್ಞಾನ ನಿಯತಕಾಲಿಕದಲ್ಲಿ ಪ್ರಕಟವಾದ ಈ ವರದಿ, ಪ್ರತಿ ವಾರದ ಮಾನವ ನಿರ್ಮಿತ ವಸ್ತುಗಳ ಒಟ್ಟು ಭಾರವೇ, ಜಗತ್ತಿನಲ್ಲಿರುವ ಅಜಮಾಸು 800 ಕೋಟಿ ಜನರ ತೂಕಕ್ಕೆ ಸಮವಾಗಿದೆ ಎಂದೂ ಹೇಳುತ್ತದೆ.

Advertisement

ಇಂದು ರಸ್ತೆ, ಕಟ್ಟಡಗಳು, ವಾಹನ, ಆಟಿಕೆ, ಆಟೊಮೊಬೈಲ್‌, ಎಲೆಕ್ಟ್ರಾನಿಕ್ಸ್‌ ವಸ್ತುಗಳ ಸೇರಿ ಮಾನವ ನಿರ್ಮಿತ ಉತ್ಪನ್ನಗಳ ಭಾರ 1.1 ಟೆರಾಟನ್‌ಗಳಷ್ಟಿದೆ ಎನ್ನುತ್ತದೆ ಈ ವರದಿ(1 ಟೆರಾಟನ್‌ ಅಂದರೆ 1,00,00,00,00­,00,00,000 ಕೆಜಿ!). ಇನ್ನೊಂದೆಡೆ ಇತರ ಜೀವರಾಶಿಯ(ಮರಗಿಡ, ಪ್ರಾಣಿ) ಒಟ್ಟು ಭಾರ ಪ್ರಸಕ್ತ 1 ಟೆರಾಟನ್‌ನಷ್ಟಿದೆ. 2040ರ ವೇಳೆಗೆ ಮನುಷ್ಯ ನಿರ್ಮಿತ ವಸ್ತುಗಳ ಪ್ರಮಾಣ 3 ಟೆರಾಟನ್‌ನಷ್ಟಾಗಬಹುದು ಎಂಬ ಅಂದಾಜಿದೆೆ.

ಕಾರಣವೇನು?: 20ನೇ ಶತಮಾನದ ಆರಂಭದಲ್ಲಿ ಮಾನವ ನಿರ್ಮಾಣಗಳ ಪ್ರಮಾಣ ಒಟ್ಟಾರೆ ಜೀವರಾಶಿಯ ಪ್ರಮಾಣಕ್ಕೆ ಹೋಲಿಸಿದರೆ ಕೇವಲ 3 ಪ್ರತಿಶತದಷ್ಟಿತ್ತು. ಆದರೆ ಜಗತ್ತು ಕೈಗಾರಿಕೀಕರಣದತ್ತ ವೇಗವಾಗಿ ಹೊರಳಿದ್ದು, ಕೃಷಿ ಕ್ರಾಂತಿ, ಹೆಚ್ಚಾದ ಜನಸಂಖ್ಯೆಯಿಂದ ನೈಸರ್ಗಿಕ ಸಂಪನ್ಮೂಲಗಳ ಅಪರಿಮಿತ ಬಳಕೆಯು ಮರಗಿಡಗಳು, ಪ್ರಾಣಿಗಳ ಸಂಖ್ಯೆಯನ್ನು ತಗ್ಗಿಸಿತು. ಇನ್ನೊಂದೆಡೆ ನವನವೀನ ಆವಿಷ್ಕಾರಗಳಿಗೆ ಜೋತು ಬಿದ್ದ ಮನುಷ್ಯ, ನಿತ್ಯವೂ ಭೂಮಿಯ ಮೇಲೆ ಭಾರಹಾಕುತ್ತಲೇ ಇದ್ದಾನೆ. ಜಗತ್ತು ಕಾಂಕ್ರೀಟ್‌ಮಯವಾಗಿರುವುದು ಭೂಮಿಗೆ ಭಾರ ಹೆಚ್ಚುತ್ತಲೇ ಸಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next