Advertisement

ಕೆಲಸದ ಸ್ಥಳದಲ್ಲಿ ರೋಬೋಟ್ ಬಂದ್ರೆ ಪುರುಷರಿಗಿಂತ ಮಹಿಳೆಯರಿಗೇ ಹೆಚ್ಚು ಅಪಾಯ!

09:43 AM Nov 13, 2019 | Hari Prasad |

ಲಂಡನ್‌: ಈಗ ಎಲ್ಲ ಕ್ಷೇತ್ರಗಳಲ್ಲೂ ಕೆಲಸಕ್ಕೆ ರೊಬೋಟ್‌ಗಳು ಬರುತ್ತಿವೆ. ಅತಿ ಸುಲಭದ ಕೆಲಸಗಳನ್ನೂ ರೊಬೋಟ್‌ಗಳು ಮಾಡುತ್ತಿವೆ. ಹೀಗೆ ಹೆಚ್ಚು ಹೆಚ್ಚು ರೊಬೋಟ್‌ಗಳು ಬರುವುದರ ನೇರ ಪರಿಣಾಮ ಮಹಿಳೆಯರ ಕೆಲಸದ ಮೇಲಾಗುತ್ತದೆ ಅರ್ಥಾತ್‌ ಕೆಲಸ ಕಳೆದುಕೊಳ್ಳುವವರ ಸಾಲಿನಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ ಎಂದು ಸಮೀಕ್ಷೆಯೊಂದು ವರದಿ ಮಾಡಿದೆ.

Advertisement

ವಿಶ್ವ ಬ್ಯಾಂಕ್‌ ಸಮೀಕ್ಷೆ ವರದಿಯಲ್ಲಿ ಈ ವಿಚಾರವನ್ನು ಹೇಳಲಾಗಿದೆ. ಮುಂದುವರಿದ ದೇಶಗಳು, ಅಭಿವೃದ್ಧಿ ಹೊಂದಿದ ದೇಶಗಳು ರೊಬೋಟಿಕ್‌ ಮತ್ತು ಅಟೋಮ್ಯಾಟಿಕ್‌ ಪದ್ಧತಿ ಕೆಲಸಗಳಿಗೆ ತೆರೆದುಕೊಳ್ಳುತ್ತಿದ್ದು ಎಲ್ಲ ಕಡೆಗಳಲ್ಲಿ ಮಹಿಳೆಯರು ಕೆಲಸ ಕಳೆದುಕೊಳ್ಳುತ್ತಿರುವುದು ಹೆಚ್ಚಿದೆ. ಸದ್ಯ ಮುಂದುವರಿದ ದೇಶದಲ್ಲಿ ಇದರ ಪರಿಣಾಮ ಹೆಚ್ಚಿದ್ದು, ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಮಹಿಳೆಯರು ಕೂಡ ಕೆಲಸ ಕಳೆದುಕೊಳ್ಳುವ ಭೀತಿಗೆ ಒಳಗಾಗಿದ್ದಾರೆ ಎಂದು ಈ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.

ಮಹಿಳೆಯರು ಸಾಮಾನ್ಯ ಕೆಲಸಗಾರರು, ಹೆಚ್ಚು ದೈನಂದಿನ ಕೆಲಸಗಳಿಗೆ ಅವರು ಇರುವುದು ಅಥವಾ ಅದಕ್ಕಾಗಿಯೇ ಅವರನ್ನು ಬಳಸುತ್ತಿರುವುದರಿಂದ ಅದೇ ಕೆಲಸಗಳನ್ನು ರೊಬೊಟಿಕ್‌ ವ್ಯವಸ್ಥೆಗಳು ಮಾಡುತ್ತವೆ. ಪುರುಷರು ರೊಬೊಟಿಕ್‌ಗಳಿಗಿಂತ ಹೆಚ್ಚು ಪರಿಣಾಮಕಾರಿ ಎಂಬ ಭಾವನೆಗಳು ಇರುವುದರಿಂದ ಸಾಮಾನ್ಯ ಕೆಲಸಗಳಿಗೆ ಅಂದರೆ ಮಹಿಳೆಯರು ಮಾಡುತ್ತಿರುವ ಕೆಲಸಗಳಿಗೆ ರೊಬೊಟ್‌ಗಳನ್ನು ನೇಮಿಸುವುದು ಕಂಡು ಬರುತ್ತಿದೆ ಎಂದು ಸಮೀಕ್ಷೆ ಹೇಳಿದೆ.

ಎಲ್ಲೆಲ್ಲಿ ಆಟೋಮ್ಯಾಟಿಕ್‌ ವ್ಯವಸ್ಥೆ?
ಹೆಲ್ಪ್ ಕೌಂಟರ್‌ಗಳು, ಆರ್ಡರ್‌ ಕೌಂಟರ್‌ಗಳಲ್ಲಿ ಈಗ ಕಿಯೋಸ್ಕ್ ಗಳನ್ನು ಸ್ಥಾಪಿಸಲಾಗಿದೆ. ಇದರಿಂದ ವ್ಯಕ್ತಿಗಳನ್ನು ನೇಮಿಸುವುದು ಕಡಿಮೆಯಾಗಿದೆ.
ಅಮೆರಿಕದಂತ ದೇಶಗಳಲ್ಲಿ ಖರೀದಿ ಸ್ಥಳಗಳಲ್ಲಿ ಯಾರೂ ಇಲ್ಲ. ಅಲ್ಲಿ ಬಿಲ್ಲಿಂಗ್‌ ಸೇರಿದಂತೆ ಎಲ್ಲವನ್ನೂ ಮಷೀನ್‌ಗಳೇ ಮಾಡುತ್ತವೆ. ಸದ್ಯ ಇಂತಹ ವ್ಯವಸ್ಥೆಯನ್ನು 16 ದೇಶಗಳಲ್ಲಿ ಅಮೆಜಾನ್‌ ಪರಿಶೀಲಿಸುತ್ತಿದ್ದು, ನಿರ್ದಿಷ್ಟ ಫ‌ಲಿತಾಂಶ ಸಿಕ್ಕರೆ ಶೀಘ್ರ ಬಿಲ್ಲಿಂಗ್‌ ಕೌಂಟರ್‌ಗಳಲ್ಲಿ ಮಷೀನ್‌ಗಳು ಇರಲಿವೆ.

ಆದರೆ ಎಲ್ಲ ಕಡೆಗಳಲ್ಲಿ ರೊಬೋಟ್‌ ಯಂತ್ರಗಳ ಕೆಲಸ ಕಾರ್ಯಸಾಧುವಾಗಲಾರದು. ಸಂಕೀರ್ಣ ಕ್ಷೇತ್ರಗಳಲ್ಲಿ ಮನುಷ್ಯನ ಕೆಲಸಗಳೇ ಬೇಕಾಗತ್ತವೆ. ವಿವಿಧ ಉತ್ಪನ್ನಗಳು, ಸೇವೆಯ ಕ್ಷೇತ್ರಗಳಲ್ಲಿ ಕುಶಲ ಕೆಲಸಗಳ ಅಗತ್ಯವಿರುವಲ್ಲಿ ಮನುಷ್ಯನ ನೆರವು ಬೇಕಾಗುತ್ತದೆ. ಇಂತಹ ಕ್ಷೇತ್ರಗಳಲ್ಲಿ ಬೇಡಿಕೆ ಹೆಚ್ಚಾದಾಗ ಉದ್ಯೋಗಗಳೂ ಹೆಚ್ಚಬಹುದು ಎಂದು ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ನ ಅರ್ಥಶಾಸ್ತ್ರಜ್ಞರೊಬ್ಬರು ಹೇಳುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next