Advertisement

ಪೊಲೀಸ್‌ ಸಿಬಂದಿ ಕಾರಿನಲ್ಲೇ ಹೆರಿಗೆ

08:40 AM Apr 13, 2018 | Karthik A |

ಮಂಗಳೂರು: ಮಹಿಳೆಯೊಬ್ಬರು ಹೆರಿಗೆ ನೋವು ಕಾಣಿಸಿಕೊಂಡು ಸಕಾಲದಲ್ಲಿ ಆಸ್ಪತ್ರೆಗೆ ತೆರಳುವುದಕ್ಕೆ ಸಾಧ್ಯವಾಗದೆ ಪೊಲೀಸ್‌ ಪೇದೆಯೊಬ್ಬರ ಕಾರಿನಲ್ಲೇ ಮಗುವಿಗೆ ಜನ್ಮನೀಡಿದ  ಘಟನೆ ಗುರುವಾರ ನಗರದಲ್ಲಿ ಸಂಭವಿಸಿದೆ. ವಾಮಂಜೂರು ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ರವಿ ಕುಮಾರ್‌ ಅವರು ಎಕ್ಕೂರಿನ ಕೇಂದ್ರೀಯ ವಿದ್ಯಾಲಯಕ್ಕೆ ತನ್ನ ಮಕ್ಕಳನ್ನು ಬಿಟ್ಟು ವಾಪಸ್‌ ಹೋಗುತ್ತಿದ್ದಾಗ ಎಕ್ಕೂರಿನ ಫಿಶರೀಸ್‌ ಕಾಲೇಜಿನ ಮುಂಭಾಗದಲ್ಲಿ ರಿಕ್ಷಾದವರೊಬ್ಬರು ಕಾರನ್ನು ತಡೆದು ನಿಲ್ಲಿಸಿದ್ದಾರೆ. ತನ್ನ ರಿಕ್ಷಾದಲ್ಲಿ ‘ಮಹಿಳೆಯೊಬ್ಬರು ಹೆರಿಗೆ ನೋವಿನಿಂದ ಗಂಭೀರ ಸ್ಥಿತಿಯಲ್ಲಿದ್ದಾರೆ. ತತ್‌ಕ್ಷಣಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಿದೆ. ರಿಕ್ಷಾದಲ್ಲಿ ಹೋಗಲು ಆಗುತ್ತಿಲ್ಲ, ಸಹಾಯ ಮಾಡಿ’ ಎಂದು ಕೇಳಿಕೊಂಡರು.

Advertisement

ಕೂಡಲೇ ರವಿ ಅವರು ಆ ಮಹಿಳೆಯನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು ಮಂಗಳೂರಿನ ಆಸ್ಪತ್ರೆ ಕಡೆಗೆ ಸಾಗುತ್ತಿದ್ದಾಗ ಪಂಪ್‌ವೆಲ್‌ ತಲುಪುತ್ತಿದ್ದಂತೆ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ. ಬಳಿಕ ತಾಯಿ- ಮಗುವನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸುವ ಮೂಲಕ ರವಿ  ಮಾನವೀಯತೆ ಮೆರೆದಿದ್ದಾರೆ. ತಾಯಿ ಮಗು ಆರೋಗ್ಯವಾಗಿದ್ದಾರೆ. ರವಿ ಕುಮಾರ್‌ ಅವರ ಈ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದ್ದು, ಸಾಮಾಜಿಕ ತಾಣಗಳಲ್ಲಿಯೂ ಈ ವಿಚಾರ ಹರಿದಾಡುತ್ತಿದೆ.  

Advertisement

Udayavani is now on Telegram. Click here to join our channel and stay updated with the latest news.

Next