Advertisement

ಮಾನವ ದೋಷವೇ ಪೋಖರಾ ವಿಮಾನ ದುರಂತಕ್ಕೆ ಕಾರಣ: ವರದಿ

09:53 AM Feb 17, 2023 | Team Udayavani |

ಕಾಠ್ಮಂಡು: ಕಳೆದ ತಿಂಗಳು ನೇಪಾಳದಲ್ಲಿ ನಡೆದ ಯೇತಿ ಏರ್‌ ಲೈನ್ಸ್ ವಿಮಾನ ಪತನಕ್ಕೆ ಮಾನವ ದೋಷವೇ ಕಾರಣ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

Advertisement

ಜನವರಿ 15 ರಂದು ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ನಂತರ ಯೇತಿ ಏರ್‌ಲೈನ್ಸ್ ಫ್ಲೈಟ್ 691, ರೆಸಾರ್ಟ್ ಸಿಟಿ ಪೊಖರಾದಲ್ಲಿನ ಹೊಸ ವಿಮಾನ ನಿಲ್ದಾಣದ ನಡುವಿನ ಸೇಟಿ ನದಿಯ ಕಮರಿಯಲ್ಲಿ ಅಪಘಾತಕ್ಕೀಡಾಯಿತು.

ವಿಮಾನ ಪತನಗೊಂಡಾಗ ಅದರಲ್ಲಿ ನಾಲ್ಕು ಸಿಬ್ಬಂದಿ ಸೇರಿದಂತೆ 72 ಜನರಿದ್ದರು, ಆದರೆ ರಕ್ಷಣಾ ಅಧಿಕಾರಿಗಳು ಇದುವರೆಗೆ 71 ಶವಗಳನ್ನು ಮಾತ್ರ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಕಾಣೆಯಾದ ಇತರ ಪ್ರಯಾಣಿಕರು ಸತ್ತಿದ್ದಾರೆ ಎಂದು ಭಾವಿಸಲಾಗಿದೆ.

ಇದನ್ನೂ ಓದಿ:ಡೆಲ್ಲಿ ಕೋಟೆಯಲ್ಲಿ ಇಂಡೋ-ಆಸೀಸ್ ಕಾಳಗ; ತಂಡಕ್ಕೆ ಮರಳಿದ ಶ್ರೇಯಸ್ ಅಯ್ಯರ್

“ಅಪಘಾತದಲ್ಲಿ ಮಾನವ ಅಂಶವನ್ನು ಕಡೆಗಣಿಸಲಾಗುವುದಿಲ್ಲ. ಹಾಗಾಗಿ ಇದು ತನಿಖೆಯ ವಿಷಯವಾಗಿದೆ”ಎಂದು ಅಧಿಕಾರಿಯೊಬ್ಬರು ಹೇಳಿದರು.

Advertisement

ಪ್ರಾಥಮಿಕ ವರದಿಯ ಪ್ರಕಾರ, ವಿಮಾನದ ಸಿಬ್ಬಂದಿ ಬೆಳಿಗ್ಗೆ ಕಠ್ಮಂಡು ಮತ್ತು ಪೋಖರಾ ನಡುವೆ ಎರಡು ವಿಮಾನಗಳನ್ನು ಹಾರಾಟ ನಡೆಸಿದ್ದಾರೆ. ಅಪಘಾತಕ್ಕೀಡಾದ ವಿಮಾನವು ಅದೇ ಸಿಬ್ಬಂದಿಯಿಂದ ಸತತ ಮೂರನೇ ವಿಮಾನವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next