Advertisement
ಜಿಲ್ಲೆಯ ತಲಪಾಡಿ ಕಡಲ ತೀರದಿಂದ ಉಳ್ಳಾಲ, ಬೆಂಗ್ರೆ, ತಣ್ಣೀರುಬಾವಿ, ಪಣಂಬೂರು, ಸುರತ್ಕಲ್, ಸಸಿಹಿತ್ಲು ಕಡಲತೀರದವರೆಗೆ 42 ಕಿ.ಮೀ. ವರೆಗೆ ನಡೆದ ಮಾನವ ಸರಪಣಿಯಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡಿದ್ದು ವಿಶೇಷ. ಮತದಾನ ಜಾಗೃತಿಯ ಅಂಗವಾಗಿ ಪ್ರಹಸನ, ಹಾಡು, ಗಾಳಿಪಟ ಉತ್ಸವ
ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಮಾತನಾಡಿ, ಚುನಾವಣೆ ಪ್ರತಿಯೊಬ್ಬರ ಹಕ್ಕು. ಮತದಾನವನ್ನು ಸಂಭ್ರಮಿಸಿ, ಪ್ರತಿಯೊಬ್ಬರೂ ಮತ ಹಾಕಬೇಕು. ಕಡಲ ತೀರದಲ್ಲಿ ಸಹಸ್ರಾರು ಮಂದಿ ಸೇರಿಸಿ ಕಾರ್ಯಕ್ರಮ ಆಯೋಜಿಸಬೇಕು ಎಂಬ ಕನಸ ನನಗಿತ್ತು. ಇದೀಗ ಈಡೇರಿದೆ. ಬೆಂಗ್ರೆ ಕಡಲ ತೀರವನ್ನು ಮತ್ತಷ್ಟು ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು. ಅಭಿವೃದ್ಧಿಗೆ ಮತ ನೀಡಿ
ರಾಜ್ಯ ಯುವ ಸಮಿತಿಯ ರಾಯಭಾರಿ, ಬಹುಮುಖ ಪ್ರತಿಭೆ ಶಬರಿ ಗಾಣಿಗ ಮಾತನಾಡಿ, ಯುವ ಜನಾಂಗ ದೇಶದ ಅಭಿವೃದ್ಧಿಗೆ ತಮ್ಮ ಅತ್ಯಮೂಲ್ಯವಾದ ಮತವನ್ನು ನೀಡಿ ಎಂದು ಹೇಳಿದರು. ಇದೇ ವೇಳೆ ದ.ಕ. ಜಿಲ್ಲಾ ಪಂಚಾಯತ್ ಸಿಇಒ ಡಾ| ಆರ್. ಸೆಲ್ವಮಣಿ,
ಪಣಂಬೂರು ಬೀಚ್ ಅಭಿವೃದ್ಧಿ ನಿಗಮದ ಸಿಇಒ ಯತೀಶ್ ಬೈಕಂಪಾಡಿ ಸೇರಿದಂತೆ ಮತ್ತಿತರರು ಇದ್ದರು.
Related Articles
ಸಸಿಹಿತ್ಲು: ಮತದಾನ ಜಾಗೃತಿಗಾಗಿ ಸಸಿಹಿತ್ಲು ಬೀಚ್‌ನಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಮಾನವ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭ ತಾ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಘು, ನೆಹರೂ ಯುವ ಕೇಂದ್ರದ ರಘುವೀರ ಸೂಟರ್‌ಪೇಟೆ, ಹಾಗೂ ಮೂಲ್ಕಿ ಹೋಬಳಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು,ಕಂದಾಯ ಇಲಾಖೆಯ ಸಿಬಂದಿಗಳು ಪಂಚಾಯತ್ ಸಿಬಂದಿಗಳು ಸಸಿಹಿತ್ಲು ವಿನಿಂದ ಸುರತ್ಕಲ್ ಹೊರಗೆ 14 ಕಿಲೋಮೀಟರ್ ವ್ಯಾಪ್ತಿಯಲ್ಲಿ 14ಸಾವಿರ ಮಂದಿ ಭಾಗವಹಿಸಿದ್ದರು.
Advertisement
ಉಳ್ಳಾಲದಲ್ಲಿ ಮರಳು ಶಿಲ್ಪ ರಚನೆ, ವಿವಿಧ ಸ್ಪರ್ಧೆಉಳ್ಳಾಲ: ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಉಳ್ಳಾಲ ನಗರಸಭೆ ವತಿಯಿಂದ ಎ. 18ರಂದು “ತಪ್ಪದೇ ಮತ
ದಾನ ಮಾಡ ಬನ್ನಿ’ ಎನ್ನುವ ಘೋಷ ವಾಕ್ಯದಡಿ ಉಳ್ಳಾಲದ ಸಮುದ್ರ ತೀರದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಳೊಂದಿಗೆ
ಮತಾದನ ಜಾಗೃತಿ ಕುರಿತ ಹಬ್ಬ ನಡೆಯಿತು. ಕಿನ್ಯಾ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಲದ ಆಶ್ರಯದಲ್ಲಿ ಮತದಾನ ಜಾಗೃತಿಯ ಯಕ್ಷಗಾನ,
ಕಲಾವಿದ ಜಯಪ್ರಕಾಶ್ ಆಚಾರ್ಯ ಅವರ ನೇತೃತ್ವದ ಸ್ಥಳೀಯ ಸ್ಪರ್ಶ ಕಲಾವಿದರಿಂದ ಮರಳು ಶಿಲ್ಪಕಲೆ, ಉಳ್ಳಾಲ ಕಡಲ ಕಿನಾರೆಯಲ್ಲಿ ಬಲೆ ಬೀಸಿ ಮೀನು ಹಿಡಿಯುವ ಸ್ಪರ್ಧೆ, ರೋಷನಿ
ನಿಲಯ ಕಾಲೇಜಿನ ವಿದ್ಯಾರ್ಥಿಗಳಿಂದ ಸ್ವಚ್ಛತೆ ಜಾಗೃತಿಗಾಗಿ ಬೀದಿ ನಾಟಕ ಹಾಗೂ ಉಳ್ಳಾಲದಿಂದ ಮುಕ್ಕಚ್ಚೇರಿವರೆಗಿನ ಸಮುದ್ರ ತೀರದಲ್ಲಿ ಸಾರ್ವಜನಿಕರಿಂದ ಮಾನವ ಸರಪಳಿ ನಡೆಯಿತು. ಸಹಾಯಕ ಆಯುಕ್ತ ರವಿಚಂದ್ರ ನಾಯಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ಸ್ವತ್ಛತಾ ರಾಯಭಾರಿ ಶೀನ ಶೆಟ್ಟಿ, ನಗರಸಭೆ ಆಯುಕ್ತ ಶ್ರೀನಿವಾಸ ಮೂರ್ತಿ, ಮೊಗವೀರ ಮುಖಂಡರಾದ ದಯಾನಂದ, ಮನೋಜ್ ಸಾಲ್ಯಾನ್,
ವಾಸುದೇವ ರಾವ್ ಉಪಸ್ಥಿತರಿದ್ದರು. ಉಳ್ಳಾಲ ಪೊಲೀಸರು, ಕರಾವಳಿ ಕಾವಲು ಪೊಲೀಸ್ ಮತ್ತು ಕರಾವಳಿ ನಿಯಂತ್ರಣ
ದಳದ ಸಿಬಂದಿ ಬಂದೋಬಸ್ತ್ಏರ್ಪಡಿಸಿದ್ದರು.