ಕಾವೂರು: ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಗೃಹ ಕಾರ್ಮಿಕರ ಒಕ್ಕೂಟದ ವತಿಯಿಂದ ಕುಂಜತ್ತಬೈಲಿನಿಂದ ಕಾವೂರು ಜಂಕ್ಷನ್ ವರೆಗೆ ಜಾಥಾ ಮತ್ತು ಕಾರ್ಮಿಕರ ಮಾನವ ಸರಪಳಿ ಕಾರ್ಯಕ್ರಮ ನಡೆಯಿತು.
ಸರಕಾರಕ್ಕೆ ಒತ್ತಾಯ
ಬೆಂಗಳೂರು ಗೃಹ ಕಾರ್ಮಿಕರ ಹಕ್ಕುಗಳ ಒಕ್ಕೂಟದ ಸಲಹೆಗಾರೆ ಗೀತಾ ಮೆನನ್ ಮಾತನಾಡಿ, ಗೃಹ ಕಾರ್ಮಿಕರಿಗೆ ಕನಿಷ್ಠ ವೇತನ ಕಾಯ್ದೆ, ವಾರದ ರಜೆ, ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತ ಗುರುತಿನ ಚೀಟಿ, ಲೈಂಗಿಕ ದೌರ್ಜನ್ಯ, ಜಾತೀಯತೆ ತಡೆಗಟ್ಟುವಿಕೆ, ಬಿಪಿಎಲ್ ಪಡಿತರ ಸಿಗುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸುತ್ತಿದ್ದೇವೆ ಎಂದರು.
ಗೃಹ ಕಾರ್ಮಿಕರಿಗೂ ಇತರ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು ಕೊಡಬೇಕು ಎಂದು ನಿರ್ಧರಿಸಲಾಯಿತು. ಮಂಗಳೂರಿನಲ್ಲಿ ಗೃಹ ಕಾರ್ಮಿಕರ ಸಂಖ್ಯೆ ಅಪಾರವಾಗಿದೆ. ಎಲ್ಲರೂ ಹಲವು ಸಮಸ್ಯೆ ಗಳನ್ನು ಎದುರಿಸುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು.
ಮಂಗಳೂರಿನ ಸ್ತ್ರೀ ಜಾಗೃತಿ ಸಮಿತಿ ಕಾರ್ಯಕರ್ತೆ ಶಂಸಾದ್, ಗೃಹ ಕಾರ್ಮಿಕರ ಕಾರ್ಯಕರ್ತೆ ಗೀತಾ,
ರತನ್, ಸುಂಕದಕಟ್ಟೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಲತಾ, ಸಮಾಜ ಸೇವಕಿ ಹರಿಣಿ ಉಪಸ್ಥಿತರಿದ್ದರು.