Advertisement

ಮಾನವ ಸರಪಳಿ ನಿರ್ಮಾಣ, ಸ್ವಚ್ಛತೆ ಸಂಕಲ್ಪ

11:56 PM Sep 30, 2019 | Sriram |

ಹೆಬ್ರಿ: ಹೆಬ್ರಿ ತಹಶೀಲ್ದಾರ್‌ ಮಹೇಶ್ಚಂದ್ರ ಅವರ ನೇತೃತ್ವದಲ್ಲಿ ಗ್ರಾ.ಪಂ. ಹಾಗೂ ವಿವಿಧ ಸಂಘ ಸಂಸ್ಥೆ ಗಳ ಸಹಯೋಗದೊಂದಿಗೆ ಎಲ್ಲಾ ಪದವಿ ಪೂರ್ವ ಕಾಲೇಜಿನ ಸುಮಾರು 1,000 ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಸೇರಿದಂತೆ ಸಾರ್ವಜನಿಕರಿಂದ ಹೆಬ್ರಿ ಬಸ್‌ಸ್ಟಾಂಡ್‌ನ‌ಲ್ಲಿ ಮಾನವ ಸರಪಳಿ ನಿರ್ಮಾಣದೊಂದಿಗೆ ಸ್ವಚ್ಛತೆಯ ಸಂಕಲ್ಪ ಸ್ವೀಕಾರ ನಡೆಯಿತು.

Advertisement

ಉಡುಪಿ ಜಿಲ್ಲಾ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಸೀತಾನದಿ ವಿಟuಲ ಶೆಟ್ಟಿ ಸ್ವತ್ಛತೆಯ ಸಂಕಲ್ಪ ಬೋಧಿಸಿದರು. ಹೆಬ್ರಿಯ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ರಸ್ತೆಯ ಎರಡು ಬದಿಗಳಲ್ಲಿ ಮಾನವ ಸರಪಳಿ ನಿರ್ಮಿಸಿದರೆ ಹೆಬ್ರಿ ಸರ್ಕಲ್‌ನ ಬಳಿ ಗ್ರಾ.ಪಂ. ಸಮುದಾಯ ಆರೋಗ್ಯ ಕೇಂದ್ರ ಹಾಗೂ ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ಸುಮಾರು 1,500 ಜನ ಏಕಕಾಲದಲ್ಲಿ ವೃತ್ತ ನಿರ್ಮಿಸಿ ಸ್ವತ್ಛತೆಯ ಸಂಕಲ್ಪ ಸ್ವೀಕರಿಸಿದರು.

ಹೆಬ್ರಿ ಠಾಣಾಧಿಕಾರಿ ಮಹಾಬಲ ಶೆಟ್ಟಿ ವಾಹನ ಸಂಚಾರ ನಿಯಂತ್ರಿಸಿ ಮಾನವ ಸರಪಳಿ ಸಂಕಲ್ಪದಲ್ಲಿ ಭಾಗವಹಿಸಿದರು. ಈ ಸಂದರ್ಭ ಹೆಬ್ರಿ ಗ್ರಾ.ಪಂ. ಅಧ್ಯಕ್ಷ ಎಚ್‌.ಕೆ. ಸುಧಾಕರ್‌, ತಾ.ಪಂ. ಸದಸ್ಯ ಚಂದ್ರಶೇಖರ ಶೆಟ್ಟಿ, ವಿವಿಧ ಇಲಾಖಾ ಅಧಿಕಾರಿಗಳು, ಸಂಘ ಸಂಸ್ಥೆಯ ಪ್ರಮುಖರು, ಕಾಲೇಜು ಉಪನ್ಯಾಸಕರು, ವರ್ತಕರು, ಗ್ರಾಮಸ್ಥರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next