ಪಾಟ್ನಾ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆ ವಿವಾಹ ಮಾಡಿಸಿಕೊಟ್ಟ ಘಟನೆ ಬಿಹಾರದ ನಾವಡ ಜಿಲ್ಲೆಯಲ್ಲಿ ನಡೆದಿದೆ.
ಕಳೆದ ಕೆಲ ಸಮಯದ ಹಿಂದೆ ಮಹಿಳೆ ಮದುವೆಯಾಗಿದ್ದಾಳೆ. ಆದರೆ ಮನಸ್ಸಿನಲ್ಲಿ ತನ್ನ ಪ್ರಿಯಕರನ ಯೋಚನೆ ಆಕೆಯನ್ನು ಕಾಡುತ್ತಿತ್ತು. ಅದೇ ಕಾರಣಕ್ಕೆ ಗಂಡನಿಲ್ಲದ ವೇಳೆ ಆಕೆ ಕದ್ದು ಮುಚ್ಚಿ ರಾತ್ರಿ ಪ್ರಿಯಕರನನ್ನು ಭೇಟಿ ಆಗುತ್ತಿದ್ದಳು. ಪ್ರಿಯಕರನ ಗ್ರಾಮಕ್ಕೆ ಬರುತ್ತಿದ್ದ. ಈ ವೇಳೆ ಯಾರಿಗೂ ಸಂಶಯ ಬರದಂತೆ ಇಬ್ಬರು ಭೇಟಿ ಆಗುತ್ತಿದ್ದರು.
ಪ್ರತಿಬಾರಿಯಂತೆ ಈ ಬಾರಿಯೂ ಗಂಡನಿಲ್ಲದ ವೇಳೆ ರಾತ್ರಿ ಪ್ರಿಯಕರನನ್ನು ಭೇಟಿ ಆಗಲು ಹೋಗುವಾಗ ಗಂಡನ ಮನೆಯವರು ರೆಡ್ ಹ್ಯಾಂಡ್ ಆಗಿ ಇಬ್ಬರನ್ನು ಹಿಡಿದಿದ್ದಾರೆ. ಈ ವೇಳೆ ಪ್ರಿಯಕರನ ಮೇಲೆ ಹಿಗ್ಗಾಮುಗ್ಗವಾಗಿ ಥಳಿಸಿದ್ದಾರೆ. ಇಬ್ಬರನ್ನು ಸೆರೆ ಹಿಡಿದು ಊರು ಬಿಟ್ಟು ಹೋಗಲು ಹೇಳಿದ್ದಾರೆ.
ಮರುದಿನ ಬೆಳಗ್ಗೆ ಗಂಡ ಪತ್ನಿಯ ಪ್ರೇಮದ ಬಗ್ಗೆ ತಿಳಿದಿದ್ದು, ಇಬ್ಬರನ್ನು ಕರೆದುಕೊಂಡು ಹೋಗಿ ಪತ್ನಿಯನ್ನು ಪ್ರಿಯಕರನ ಜೊತೆ ಊರಿನ ದೇವಸ್ಥಾನದಲ್ಲಿ ವಿವಾಹ ಮಾಡಿಸಿದ್ದಾರೆ. ಪ್ರಿಯಕರನ ಹಣೆಗೆ ಸಿಂಧೂರವನ್ನು ಇಡುವ ವೇಳೆ ಮಹಿಳೆ ಅತ್ತಿದ್ದಾರೆ. ಗಂಡನೇ ಮುಂದೆ ನಿಂತು ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆ ಮದುವೆ ಮಾಡಿಸಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಪೊಲೀಸರು ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಆದರೆ ತಾವು ಪ್ರಕರಣ ದಾಖಲಾಗಿಲ್ಲ ಎಂದು ವರದಿ ತಿಳಿಸಿದೆ.