Advertisement
ಮಠದ ಕಣಿಯ ಅಶ್ವಿನ್- ಪ್ರಿಯಾಂಕಾ ದಂಪತಿಯ ಪುತ್ರಿ ಆದ್ಯಾ ಎರಡೂವರೆ ವರ್ಷ ವಯಸ್ಸಿನಿಂದಲೇ ನೃತ್ಯಾಭ್ಯಾಸ ಆರಂಭಿಸಿದ್ದಳು. ಈಗ ಹುಲ್ಲಾ ಹೂಪ್‌ನಲ್ಲಿ ಮೊಣಕಾಲು ಊರಿ 34 ನಿಮಿಷಗಳಲ್ಲಿ 4 ಸಾವಿರ ಬಾರಿ ನರ್ತಿಸಿ ದಾಖಲೆ ನಿರ್ಮಿಸಿದ್ದಾಳೆ. ಪ್ರಿಯದರ್ಶಿನಿ ಮೊಂಟೆಸರಿ ಹೌಸ್ ಆಫ್ ಚಿಲ್ಡ್ರನ್ಸ್ ನ ಯುಕೆಜಿ ವಿದ್ಯಾರ್ಥಿನಿ ಆದ್ಯಾ, ಹಾಡುಗಾರಿಕೆ, ಜಿಮ್ನಾಸ್ಟಿಯನ್, ನಾಟಕ, ಸಿನೆಮಾ, ಸ್ಕೇಟಿಂಗ್‌ನಲ್ಲಿ ಸೈ ಅನಿಸಿಕೊಂಡಿದ್ದಾಳೆ. ಈಕೆಯ ಶಾಲೆಯಲ್ಲೇ ವಿಶ್ವದಾಖಲೆ ಪ್ರದರ್ಶನ 2019ರ ಎ.6ರಂದು ನಡೆದಿತ್ತು. ಪ್ರಸ್ತುತ ಚಂದ್ರಶೇಖರ್ ಅವರಲ್ಲಿ ನೃತ್ಯಭ್ಯಾಸ ಮಾಡುತ್ತಿದ್ದಾಳೆ.
ಈ ನೃತ್ಯ ಶೈಲಿ ಪಾಶ್ಚಾತ್ಯ ಮೂಲದ್ದು. ಪ್ರಸ್ತುತ ಭಾರತದಲ್ಲೂ ಸದ್ದು ಮಾಡುತ್ತಿದೆ. ರಿಂಗ್‌ನ್ನು ಸೊಂಟದ ಭಾಗಕ್ಕೆ ಹಾಕಿ ಅದನ್ನು ಸಂಗೀತಕ್ಕೆ ತಕ್ಕಂತೆ ಅಲುಗಾಡಿಸುವುದೇ ಈ ನೃತ್ಯ.