Advertisement
ಪ್ರಾಣಿ ಪಕ್ಷಿಗಳಿಗೆ ಹಣ್ಣು ಸಿಗುತ್ತಿತ್ತು: ಬುಕ್ಕಾಪಟ್ಟಣ ವಲಯ ಅರಣ್ಯ ಪ್ರದೇಶಕ್ಕೆ ಸೇರಿದ ದಸೂಡಿ ಸರ್ಕಾರಿಸರ್ವೆ ನಂಬರ್ 100, 101, 104, 106 ರಲ್ಲಿ ಸುಮಾರು290 ಎಕರೆ ಅರಣ್ಯದಲ್ಲಿ ಈ ಹಿಂದೆ ಜಾಣೆ, ಕಮರಸೇರಿದಂತೆ ಅನೇಕಗಿಡಗಳನ್ನು ಅರಣ್ಯ ಇಲಾಖೆನೆಟ್ಟು 5-6 ವರ್ಷ ಟ್ಯಾಂಕರ್‌ಗಳಲ್ಲಿ ನೀರುಣಿಸಿಬೆಳೆಸಿತ್ತು. ಆದರೆ, ಈಗ ಈ ಎಲ್ಲಾ ಮರಗಳುಹೆಮ್ಮರವಾಗಿ ಬೆಳೆದು ಪ್ರಾಣಿ ಪಕ್ಷಿಗಳಿಗೆ ನೆರಳು, ಹಣ್ಣು ನೀಡುತ್ತಿರುವ ಸಂದರ್ಭದಲ್ಲಿ ನಿರ್ದಾಕ್ಷಿಣ್ಯವಾಗಿ ಕಡಿದು ಧರೆಗುರುಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
Related Articles
Advertisement
ಬುಕ್ಕಾಪಟ್ಟಣ ಅರಣ್ಯ ಪ್ರದೇಶಲ್ಲಿ ಅರಣ್ಯೀಕರಣಗೊಳಿಸಲು ಸಾಕಷ್ಟು ಅರಣ್ಯ ಪ್ರದೇಶವಿದ್ದರೂ ಮರಗಳನ್ನು ಕಡಿದು ಪುನಃ ಅದೇ ಸ್ಥಳದಲ್ಲಿ ನೆಡಲು ಹೊರಟಿರುವುದರ ಹಿಂದಿರುವ ರಹಸ್ಯವಾದರೂ ಏನು. ಅರಣ್ಯೀಕರಣ ಮಾಡುವ ಮೊದಲು ಸ್ಥಳೀಯ ಸಭೆ ನಡೆಸಬೇಕಿದೆ. ಆದರೆ, ಬುಕ್ಕಾಪಟ್ಟಣ ವಲಯ ಅರಣ್ಯಾಧಿಕಾರಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ಈಗಾಗಲೇ ಹುಲುಸಾಗಿ ಬೆಳೆದಿರುವ ಮರಗಳನ್ನು ತೆರವುಗೊಳಿಸಿ ಮತ್ತೆ ಗಿಡಗಳನ್ನು ನೆಡಲು ತೀರ್ಮಾನಿಸಿರುವುದು ಆಕ್ಷೇಪಾರ್ಹ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಹಿಟಾಚಿ ಓಡಾಡುವಾಗ ಮುರಿದಿವೆ :
ಕುಂದಾಪುರ, ಹೊನ್ನಾವರದ ಮಾರ್ಗದಲ್ಲಿ ಅರಣ್ಯ ಜಾಗ ಬಿಟ್ಟುಕೊಡಲಾಗಿತ್ತು. ಅದಕ್ಕೆ ಪರ್ಯಾಯವಾಗಿ ಜಿಲ್ಲೆಯಲ್ಲಿ 300 ಹೆಕ್ಟೇರ್ ಅರಣ್ಯೀಕರಣ ಮಾಡಲು 2010ರಲ್ಲಿ ನಿರ್ಧರಿಸಿ ದಸೂಡಿ ಭಾಗದ 120 ಹೆಕ್ಟೇರ್ ಅನ್ನು ಆಯ್ಕೆ ಮಾಡಲಾಗಿತ್ತು. ಈಗ ಅನುಮೋದನೆ ದೊರೆತಿದ್ದು ಹೊಸ ಸಸಿ ನೆಡಲು ಟ್ರಂಚ್ ತೆಗೆಯಲು ಹಿಟಾಚಿ ಬಳಸಲಾಗಿತ್ತು. ಟ್ರಂಚ್ ತೆಗೆಯಲು ಹಿಟಾಚಿ ಓಡಾಡುವಾಗ ಕೆಲ ಉದಯದ ಗಿಡಗಳು ಮುರಿದಿವೆಯೇ ವಿನಃ ಉದ್ದೇಶ ಪೂರ್ವಕವಾಗಿ ಗಿಡಗಳನ್ನು ಕೀಳಲಾಗಿಲ್ಲ. ಇದನ್ನು ಗಮನಿಸಿ ಕೆಲಸ ನಿಲ್ಲಿಸಿದ್ದು ಹಿಟಾಚಿ ಸಹ ಅಲ್ಲಿಯೇ ನಿಲ್ಲಿಸಲಾಗಿದೆ. ಪಂಚಾಯ್ತಿಯವರು ಬಯಲು ಸ್ಥಳದಲ್ಲಿ ಕೂಲಿಯವರಿಂದ ಕೆಲಸ ಮಾಡಿಸಿ ಸಸಿ ನೆಡಲುತಿಳಿಸಿದ್ದಾರೆ. ಮೇಲಧಿಕಾರಿಗಳ ಅನುಮತಿಪಡೆದು ಮುಂದಿನ ಹೆಜ್ಜೆ ಇಡಲಾಗುವುದು ಎಂದು ಬುಕ್ಕಾಪಟ್ಟಣ ವಲಯ ಅರಣ್ಯಾಧಿಕಾರಿ ಮಲ್ಲಿಕಾರ್ಜುನಯ್ಯ ತಿಳಿಸಿದ್ದಾರೆ.