Advertisement

ಸಕ್ಕರೆ ಧಣಿಗಳ ನಡುವೆ ಉಕ್ಕೇರಿದ ಚುನಾವಣಾ ಕದನ

06:25 AM Apr 26, 2018 | |

ಬೆಳಗಾವಿ: ಅಭಿವೃದ್ಧಿ ವಿಷಯದಲ್ಲಿ ಉತ್ತರ ಕರ್ನಾಟಕ ನಿರ್ಲಕ್ಷ್ಯಕ್ಕೊಳಗಾಗಿದ್ದು ಅದಕ್ಕಾಗಿ ಪ್ರತ್ಯೇಕ ರಾಜ್ಯ ಆಗಬೇಕು ಎಂದು ಆಗಾಗ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗುವ ಉಮೇಶ ಕತ್ತಿ ಹಾಗೂ ಜನತಾ ಪರಿವಾರದಲ್ಲಿ ಸಚಿವರಾಗಿ ಕೆಲಸ ಮಾಡಿದ ಅನುಭವಿ ರಾಜಕಾರಣಿ ಎ.ಬಿ. ಪಾಟೀಲ ಹುಕ್ಕೇರಿ ಕ್ಷೇತ್ರದ ಸ್ಟಾರ್‌ ಅಭ್ಯರ್ಥಿಗಳು. ಇಬ್ಬರೂ ಮೂಲತಃ ಜನತಾಪರಿವಾರದವರು. ರಾಜಕೀಯ ಭವಿಷ್ಯ ಕಂಡುಕೊಂಡಿದ್ದು ಇದೇ ಪರಿವಾರದಿಂದ. ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಕತ್ತಿ ಬಿಜೆಪಿ ಶಾಸಕರಾದರೆ ಎ.ಬಿ. ಪಾಟೀಲ ಎರಡು ಬಾರಿ ಜನತಾದಳ ಹಾಗೂ ಒಂದು ಸಲ ಕಾಂಗ್ರೆಸ್‌ದಿಂದ ಶಾಸಕರಾದವರು. ಸಕ್ಕರೆ ಕಾರ್ಖಾನೆಯ ರಾಜಕಾರಣದಿಂದ ಇಬ್ಬರೂ ರಾಜಕೀಯದಲ್ಲಿ ನೆಲೆ ಕಂಡುಕೊಂಡಿರುವುದು ಇಲ್ಲಿನ ವಿಶೇಷ.

Advertisement

ಉಮೇಶ ಕತ್ತಿ ಈ ಕ್ಷೇತ್ರದ ಸರದಾರ. 2004 ರ ಚುನಾವಣೆ ಒಂದು ಹೊರತುಪಡಿಸಿದರೆ 1985 ರಿಂದ 2008 ರವರೆಗೆ ಎಲ್ಲ ಚುನಾವಣೆಗಳಲ್ಲಿ ಕತ್ತಿಯದ್ದೇ ಜಯಗಳಿಸಿದ್ದಾರೆ.

ಟರ್ನಿಂಗ್‌ ಪಾಯಿಂಟ್‌
ಇಲ್ಲಿ ಸತತ ಗೆದ್ದು ದಾಖಲೆ ಬರೆದಿರುವ ಕತ್ತಿಗೆ ಅವರ ಹಳೆಯ ಎದುರಾಳಿ ಎ.ಬಿ. ಪಾಟೀಲ ಮತ್ತೆ ಕಾಂಗ್ರೆಸ್‌ನಿಂದ 
ಮುಖಾಮುಖೀಯಾಗಿದ್ದಾರೆ. ಕತ್ತಿ ಅಭಿವೃದಿಟಛಿ ಕೆಲಸ ಮಾಡಿದ್ದರೂ ಕ್ಷೇತ್ರದ ಒಂದು ಭಾಗದ ಜನ ಬದಲಾವಣೆ ಕಡೆ ಮುಖ ಮಾಡಿದ್ದಾರೆ. ಇದು ಮತ್ತೆ ಕಾಂಗ್ರೆಸ್‌ದಿಂದ ಅಖಾಡಾಕ್ಕೆ ಇಳಿದಿರುವ ಎ.ಬಿ.ಪಾಟೀಲಗೆ ಟರ್ನಿಂಗ್‌ ಪಾಯಿಂಟ್‌ ಆಗಬಹುದು.

ಸ್ಪರ್ಧಿಗಳು:
– ಉಮೇಶ ಕತ್ತಿ: ಹುಕ್ಕೇರಿ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ. ಈ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರ ಎಂಬ ಖ್ಯಾತಿ ಇವರದ್ದು. 2004 ಮತ್ತು 2008 ರಲ್ಲಿ ಜೆಡಿಎಸ್‌ದಿಂದ ಗೆದ್ದು ಬಂದಿದ್ದ ನಂತರ ಬಿಜೆಪಿ ಸೇರಿ 2008ರಲ್ಲಿ ನಡೆದ ಉಪಚುನಾವಣೆಯಲ್ಲಿ ಗೆದ್ದರು.

ಎ.ಬಿ.ಪಾಟೀಲ: ಕ್ಷೇತ್ರ ಪುನರ್‌ ವಿಂಗಡಣೆಗೆ ಮೊದಲು ಸಂಕೇಶ್ವರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದ ಪಾಟೀಲ 1994ರಲ್ಲಿ ಜನತಾದಳದ ಮೂಲಕ ಮೊದಲ ಬಾರಿಗೆ ಶಾಸಕರಾದರು. 1999ರಲ್ಲಿ ಸಂಯುಕ್ತ ಜನತಾದಳದಿಂದ, 2004 ರಲ್ಲಿ ಕಾಂಗ್ರೆಸ್‌ ಪಕ್ಷ ಸೇರಿ 3ನೇ ಬಾರಿಗೆ ಶಾಸಕರಾದರು.

Advertisement

ಎಂ.ಬಿ.ಪಾಟೀಲ: ಜೆಡಿಎಸ್‌ ಅಭ್ಯರ್ಥಿ.

ನಿರ್ಣಾಯಕರು: ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಹುಕ್ಕೇರಿ ಮತ್ತು ಸಂಕೇಶ್ವರ ಹೋಬಳಿ ಬರುತ್ತವೆ. ಲಿಂಗಾಯತ ಮತದಾರರ ಜೊತೆಗೆ ಮುಸ್ಲಿಂ ಸಮಾಜದ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಅಭ್ಯರ್ಥಿಗಳ ಗೆಲುವಿನಲ್ಲಿ ಇವರೇ ನಿರ್ಣಾಯಕರು.

ಐದು ವರ್ಷಗಳಲ್ಲಿ ಸಾಧ್ಯವಾದಷ್ಟು ಪ್ರಮುಖ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಮಹಾರಾಷ್ಟ್ರದಿಂದ ಹಿರಣ್ಯಕೇಶಿಗೆ
ನದಿಗೆ ನೀರು ಬಿಡುಗಡೆ ಸಂಬಂಧ ಪ್ರಯತ್ನ ಮಾಡಿದ್ದೇನೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಸಮಾಧಾನ ಇದೆ. ಗೆಲುವಿಗೆ ಯಾವುದೇ ಸಮಸ್ಯೆ ಇಲ್ಲ.

– ಉಮೇಶ ಕತ್ತಿ

ಜನರಿಗೇ ಅವರು ಬೇಡವಾಗಿದ್ದಾರೆ.ಹೊಸ ನೀರಾವರಿ ಯೋಜನೆಗಳೇ ಇಲ್ಲ.ನಾವು ಪ್ರಯತ್ನ ಮಾಡಿ ತಂದ ಯೋಜನೆಗಳಿಗೆ ತಮ್ಮ ಹೆಸರು ಹೇಳಿಕೊಳ್ಳುತ್ತಿದ್ದಾರೆ. ಜಯಗಳಿಸುವ ವಿಶ್ವಾಸ ಇದೆ. ಈಗಿನ ನಾಯಕರ ಬಗೆಗಿನ ಬೇಸರ ನಮಗೆ ಟರ್ನಿಂಗ್‌ ಪಾಯಿಂಟ್‌ ಆಗಲಿದೆ. 
– ಎ.ಬಿ. ಪಾಟೀಲ

ಕ್ಷೇತ್ರದಲ್ಲಿ ಬದಲಾವಣೆಗೆ ಅವಕಾಶ ಕೊಟ್ಟಿದ್ದೇವೆ. ವಾತಾವರಣ ಬದಲಾಗುತ್ತಿದೆ. ಜನರೂ ಸಹ ಒಂದೇ ಮುಖ ನೋಡಿ
ಬೇಸತ್ತಿದ್ದಾರೆ. ಕ್ಷೇತ್ರದಲ್ಲಿ ಅಭಿವೃದಿಟಛಿ ಕಾಣುತ್ತಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಹಣ ಪೋಲಾಗುತ್ತಿದೆ. ಅವಕಾಶ ನೀಡಿದರೆ ಒಳ್ಳೆಯ ಕೆಲಸ ಮಾಡಬಹುದು. 

– ಎಂ.ಬಿ. ಪಾಟೀಲ

– ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next