ಹುನಗುಂದ: ಲೋಕಸಭೆ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಬಾಗಲಕೋಟೆ ಲೋಕಸಭೆ ಮತಕ್ಷೇತ್ರದ ವ್ಯಾಪ್ತಿಯ ಹುನಗುಂದ ಕ್ಷೇತ್ರದಲ್ಲಿ ಏ.23 ರಂದು ನಡೆಯವ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಒಟ್ಟು 254 ಮತಗಟ್ಟೆಗಳಿಗೆ 1,112 ಸಿಬ್ಬಂದಿ ನೇಮಿಸಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಗಣಪತಿ ಪಾಟೀಲ ತಿಳಿಸಿದರು.
ಚುನಾವಣೆಗೆ ನಿಯೋಜಿಸಿದ ಸಿಬ್ಬಂದಿ:
ಕ್ಷೇತ್ರದ 254 ಮತಗಟ್ಟೆಗಳ ಪೈಕಿ ಒಂದು ಮತಗಟ್ಟೆಗೆ ನಾಲ್ಕು ಸಿಬ್ಬಂದಿಯಂತೆ 1,112 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಅದರಲ್ಲಿ ಎಪಿಆರ್‌ಒ 254 ಇತರೆ 24, ಪಿಆರ್‌ಒ 254 ಇತರೆ 24, ಪಿಒ 508 ಇತರೆ 50 ಜನ ಸೇರಿದಂತೆ 1,112 ಜನ ಸಿಬ್ಬಂದಿ ನಿಯೋಜಿಸಿದ್ದಾರೆ. 21 ಜನ ವಿಶೇಷವಾಗಿ ಸೆಕ್ಟರ್ ಆಫೀಸರ್, 6 ಪ್ಲಾ ್ಯನ್ ಸ್ಕ್ವ್ಯಾಡ್‌ಗಳು, 12 ಜನ ವಿಡೀಯೋ ಸರ್ವೇಂಟ್ ನೇಮಿಸಲಾಗಿದೆ ಎಂದು ತಹಶೀಲ್ದಾರ ಎಸ್.ಎಂ. ಮ್ಯಾಗೇರಿ ತಿಳಿಸಿದರು.
ಪೊಲೀಸ್ ಸಿಬ್ಬಂದಿ: ಲೋಕಸಭೆ ಚುನಾವಣೆ ಶಾಂತಿಯುತ ಮತದಾನಕ್ಕಾಗಿ ಮತ್ತು ಭದ್ರತೆಗಾಗಿ ಒಬ್ಬರು ಡಿಎಸ್‌ಪಿ, 4 ಜನ ಸಿಪಿಐ, 8 ಜನ ಪಿಎಸ್‌ಐ ಮತ್ತು 364 ಜನ ಪಿಸಿ ಹಾಗೂ ಹೋಮ್‌ಗಾರ್ಡ್ಸ್ ನೇಮಿಸಲಾಗಿದೆ. ವಿಶೇಷ ಭದ್ರತೆಗಾಗಿ 4 ಡಿಆರ್ ತುಕುಡಿಗಳು, 2 ಕೆಎಸ್‌ಆರ್‌ಪಿ ತುಕುಡಿಗಳು, 6 ಪ್ಯಾರ್ ಮಿಲಿಟರಿ ಪಡೆ ನೇಮಿಸಲಾಗಿದೆ. ಒಂದು ಮತಗಟ್ಟೆಗೆ ಒಬ್ಬ ಪಿ.ಸಿ ಹಾಗೂ ಒಬ್ಬರು ಹೋಮ್‌ಗಾರ್ಡ್ಸ್ ನಿಯೋಜಿಸಲಾಗಿದೆ ಎಂದು ಸಿಪಿಐ ಸಂಜೀವ ಬಳಿಗಾರ ತಿಳಿಸಿದರು.
Advertisement
ಬಾಗಲಕೋಟೆ ಲೋಕಸಭೆ ಕ್ಷೇತ್ರದ ಪೈಕಿ ಹುನಗುಂದ ಕ್ಷೇತ್ರದಲ್ಲಿ ಒಟ್ಟು 2,14,542 ಮತದಾರರಿದ್ದಾರೆ. ಅದರಲ್ಲಿ 1,07,206 ಪುರುಷ ಮತದಾರರು, 1,07,325 ಮಹಿಳಾ ಮತದಾರ ಹಾಗೂ 11 ಇತರೆ ಮತದಾರರಿದ್ದಾರೆ. ಕ್ಷೇತ್ರದಲ್ಲಿ 254 ಮತಗಟ್ಟಿಗಳಿವೆ. ಈ ಬಾರಿ ಪಿಂಕ್ ಮತಗಟ್ಟೆಗಳ ಬದಲು ಸಖೀ ಮತಗಟ್ಟೆಗಳನ್ನಾಗಿ ಮಾಡಲಾಗಿದು,್ದ ಹುನಗುಂದ ಕೇಂದ್ರ ಶಾಲೆ ಹಾಗೂ ಇಲಕಲ್ಲದ ಸರ್ಕಾರಿ ಉರ್ದು ಶಾಲೆಗಳನ್ನು ವಿಶೇಷವಾಗಿ ಸಖೀ ಮತಗಟ್ಟೆ ಸ್ಥಾಪಿಸಲಾಗಿದೆ.
Related Articles
Advertisement