Advertisement

ದುರುದ್ದೇಶವಿಲ್ಲದೆ ಮಹಿಳೆಯರನ್ನು ತಬ್ಬಿಕೊಳ್ಳುವುದು ಅಪರಾಧವಲ್ಲ: ಬ್ರಿಜ್ ಭೂಷಣ್

08:27 AM Aug 10, 2023 | Team Udayavani |

ನವದೆಹಲಿ: ಲೈಂಗಿಕ ಉದ್ದೇಶವಿಲ್ಲದೆ ಮಹಿಳೆಯನ್ನು ತಬ್ಬಿಕೊಳ್ಳುವುದು ಅಪರಾಧವಲ್ಲ ಎಂದು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತ ಕುಸ್ತಿ ಫೆಡರೇಷನ್‌ನ ನಿರ್ಗಮಿತ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್‌ಭೂಷಣ್‌ ಶರಣ್ ಸಿಂಗ್‌ ನ್ಯಾಯಾಲಯದ ಮುಂದೆ ಹೇಳಿದ್ದಾರೆ.

Advertisement

ಪ್ರಕರಣ ಸಂಬಂಧ ಬುಧವಾರ ದೆಹಲಿಯ ರೂಸ್​ ಅವೆನ್ಯೂ ನ್ಯಾಯಾಲಯಕ್ಕೆ ಹಾಜರಾದ ಬ್ರಿಜ್​ ಭೂಷಣ್​ ತಮ್ಮ ವಿರುದ್ಧ ಮಾಡಿರುವ ಆರೋಪಗಳನ್ನು ವಿರೋಧಿಸಿ ವಕೀಲರ ಮೂಲಕ ವಾದವನ್ನು ಮಂಡಿಸಿದ್ದಾರೆ. ಬ್ರಿಜ್​ ಭೂಷಣ್​ ಪರ ಹಿರಿಯ ವಕೀಲ್​ ರಾಜೀವ್​ ಮೋಹನ್ ವಕಾಲತ್ತು ವಹಿಸಿದ್ದಾರೆ. ನ್ಯಾಯಮೂರ್ತಿ ಹರ್ಜಿತ್​ಸಿಂಗ್​ ಜಸ್ಬಾಲ್​ ಅರ್ಜಿ ವಿಚಾರಣೆ ನಡೆಸುತ್ತಿದ್ದಾರೆ.

ಕುಸ್ತಿ ಪಂದ್ಯಗಳು ಹೆಚ್ಚಾಗಿ ಪುರುಷ ತರಬೇತುದಾರರನ್ನೇ ಹೊಂದಿರುತ್ತವೆ ಎಂದು ಹೇಳಿದ ವಕೀಲರು. “ಆತಂಕದಿಂದ ಅಥವಾ ಉತ್ತಮ ಸಾಧನೆಗಾಗಿ ಆಟಗಾರನನ್ನು ಹುರಿದುಂಬಿಸುವ ಸಲುವಾಗಿ ಪುರುಷ ಕೋಚ್ ತಬ್ಬಿಕೊಂಡರೆ, ಅದು ಸಹಜ” ಎಂದು ಅವರು ಹೇಳಿದರು.

ಈ ವೇಳೆ ವಾದ-ಪ್ರತಿವಾದವನ್ನೂ ಸುಧೀರ್ಘವಾಗಿ ಆಲಿಸಿದ ನ್ಯಾಯಾಲಯವೂ ವಿವಾರಣೆಯನ್ನೂ ಗುರುವಾರ ನಡೆಸುವುದಾಗಿ ತಿಳಿಸಿದೆ.

ಇದನ್ನೂ ಓದಿ: Daily Horoscope: ಈ ರಾಶಿ ಅವರಿಗಿಂದು ಉದ್ಯೋಗದಲ್ಲಿ ಪ್ರಗತಿ, ಆರೋಗ್ಯ ಗಮನಿಸಿ

Advertisement
Advertisement

Udayavani is now on Telegram. Click here to join our channel and stay updated with the latest news.

Next