Advertisement

ಆಲಿಂಗನ ಮೋದಿ ಟ್ರೇಡ್‌ ಮಾರ್ಕ್‌; ರಾಹುಲ್‌ ಅದ್ಭುತ: ಶತ್ರುಘ್ನ ಸಿನ್ಹ

04:40 PM Jul 24, 2018 | Team Udayavani |

ಹೊಸದಿಲ್ಲಿ : ಕಳೆದ ಶುಕ್ರವಾರ ಲೋಕಸಭೆಯಲ್ಲಿ ವಿಶ್ವಾಸಮತದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಬ್ಬಿಕೊಂಡ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸ್ನೇಹಚರ್ಯೆಯನ್ನು ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ ಬೆಂಬಲಿಸಿದ್ದಾರೆ. 

Advertisement

ರಾಹುಲ್‌ ಗಾಂಧಿ ಅವರನ್ನು ಓರ್ವ ಚುರುಕಿನ ಯುವ ಮತ್ತು ಮುಂದಿನ ತಲೆಮಾರಿನ ನಾಯಕನೆಂದು ತಮ್ಮ ಟ್ವಿಟರ್‌ ಬರಹದಲ್ಲಿ ಕರೆದಿರುವ ಶತ್ರುಘ್ನ ಸಿನ್ಹಾ, ಕಾಂಗ್ರೆಸ್‌ ಅಧ್ಯಕ್ಷ ಪ್ರಧಾನಿ ಮೋದಿ ಅವರಿಗೆ ತೋರಿರುವ ಪ್ಯಾರ್‌ ಕೀ ಝಪ್ಪಿ ಬಗ್ಗೆ ಇಷ್ಟೊಂದು ಹುಯಿಲೆಬ್ಬಿಸುವುದು ಅದೇನಿದೆ ಎಂದು ಪ್ರಶ್ನಿಸಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಎಲ್ಲ ವಿದೇಶಿ ನಾಯಕರನ್ನು ಆಲಿಂಗನದ ಮೂಲಕ ಸ್ವಾಗತಿಸುವುದನ್ನು ತಮ್ಮ ಟ್ರೇಡ್‌ ಮಾರ್ಕ್‌ ಮಾಡಿಕೊಂಡಿದ್ದಾರೆ; ಹಾಗೆಯೇ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಸದನದಲ್ಲಿ ಪ್ರಧಾನಿಯನ್ನು ತಬ್ಬಿಕೊಂಡದ್ದನ್ನು ಪ್ರೀತಿ ಮತ್ತು ಸದ್ಭಾವನೆಯ ಸಂಕೇತವೆಂದು ತಿಳಿಯಬೇಕು ಎಂದು ಶತ್ರುಘ್ನ ಸಿನ್ಹಾ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next