Advertisement

ಅದ್ಧೂರಿ ಕೆರೆ ಬಸವೇಶ್ವರ ರಥೋತ್ಸವ

01:46 PM May 08, 2019 | Team Udayavani |

ಕಾರಟಗಿ: ಪಟ್ಟಣದ ಕೆರೆ ಬಸವೇಶ್ವರ ರಥೋತ್ಸವ ಅಪಾರ ಭಕ್ತ ಸಮೂಹದ ಜಯಘೋಷಗಳೊಂದಿಗೆ ಮಂಗಳವಾರ ಅದ್ಧೂರಿಯಾಗಿ ನಡೆಯಿತು. ಶಾಸಕ ಬಸವರಾಜ ದಢೇಸುಗೂರು ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ದೇವಸ್ಥಾನದ ಎದುರಿನ ಮುಖ್ಯ ರಸ್ತೆಯ ಮೂಲಕ ಸಾಗಿದ ರಥೋತ್ಸವ ಚಳ್ಳೂರ ಕ್ರಾಸ್‌ನ ಪಾದಗಟ್ಟೆ ತಲುಪಿ ಮರಳಿ ದೇವಸ್ಥಾನ ಬಂತು. ಬೆಳಗ್ಗೆ ದೇವಸ್ಥಾನದಲ್ಲಿ ಬಸವಜಯಂತಿ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಇದಕ್ಕೂ ಮುನ್ನ ಉತ್ಸವಕ್ಕೆ ಕಳಸಧಾರಣೆ, ಧ್ವಜಾರೋಹಣ, ರಥೋತ್ಸವ ನಂದಿಕೋಲು, ತಾಷ್ಯ, 501 ರುದ್ರಾಕ್ಷಿಧಾರಣೆ ನಡೆಸಲಾಯಿತು. ಸಂಜೆ ಶರಣ ಬಸವೇಶ್ವರ ದೇವಸ್ಥಾನದಿಂದ ವಾದ್ಯ ಮೇಳದೊಂದಿಗೆ ಬಸವೇಶ್ವರರ ಪಲ್ಲಕ್ಕಿ ಉತ್ಸವದ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

Advertisement

ಬೆಳಗ್ಗೆಯಿಂದಲೇ ಮಹಿಳೆಯರು, ಮಕ್ಕಳು ಸಾರ್ವಜನಿಕರು ದೇವಸ್ಥಾನಕ್ಕೆ ಬಂದು ಹಣ್ಣು-ಕಾಯಿ ನೈವೇದ್ಯ ಅರ್ಪಿಸಿದರು. ಸಂಜೆ ರಥೋತ್ಸವದಲ್ಲಿ ಪಾಲ್ಗೊಳ್ಳಲು ಪಟ್ಟಣದ ಸೇರಿದಂತೆ ವಿವಿಧ ಗ್ರಾಮಗಳ ಅಪಾರ ಸಂಖ್ಯೆಯ ಭಕ್ತರು ದೇವಸ್ಥಾನದ ಬಳಿ ಜಮಾವಣೆಗೊಂಡಿದ್ದರು.

ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಮರುಳ ಸಿದ್ಧಯ್ಯಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಉದ್ಯಮಿಗಳು, ವರ್ತಕರು ಸಾರ್ವಜನಿಕರು ಪ್ರಮುಖರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next