Advertisement
ಶಾಲೆ ಮಕ್ಕಳ ಪರದಾಟ: ಬಸ್ ನಿಲ್ದಾಣದ ಪಕ್ಕದಲ್ಲಿರುವ ಬೃಹತ್ ಮರಗಳನ್ನು ಕಡಿದಿದ್ದು, ರಸ್ತೆ ಮಧ್ಯೆ ಹಾಕಿರುವುದರಿಂದ ಸಾರ್ವಜನಿಕರಿಗೆ ಮತ್ತು ಶಾಲೆ ಮಕ್ಕಳಿಗೆ ತೀವ್ರ ತೊಂದರೆಯಾಗುತ್ತಿದೆ. ವ್ಯಾಪಾರಸ್ಥರಿಗೂ ತೊಡಕಾಗಿದೆ. ರಸ್ತೆ ಮಧ್ಯೆ ಇರುವ ಮರದ ಕೊಂಬೆಗಳನ್ನು ತೆರವುಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಡಬೇಕಿದೆ.
Related Articles
ಕಳೆದ ವರ್ಷಗಳ ಹಿಂದೆ ಮರಗಳನ್ನು ಕಡಿಯಬೇಕು ಎಂಬ ಸುದ್ದಿ ಕೇಳಿ ನಾನು ಅದನ್ನು ವಿರೋಧಿಸಿದ್ದೆ. ಈಗ ವಾಹನಗಳು ಒಡಾಡಲು ತೊಂದರೆಯಾಗುತ್ತಿದೆ ಎಂದು ಮರ ಕಡಿಯುತ್ತಿರುವುದು ತುಂಬಾ ಬೇಸರ ತಂದಿದೆ ಎಂದು ರಾಷ್ಟ್ರಪ್ರಶಸ್ತಿ ವಿಜೇತೆ, ಪರಿಸರ ಪ್ರೇಮಿ ಸಾಲು ಮರದ ತಿಮ್ಮಕ್ಕ ಹೇಳಿದರು
Advertisement
ಮೂರು ದಿನಗಳಿಂದ ಮಂದಿಗತಿ ಯಲ್ಲಿ ಮರ ತೆರವು ಕಾರ್ಯ ನಡೆದಿದೆ. ಇದರಿಂದ ವ್ಯಾಪಾರ ನಡೆಸಲು ಕಷ್ಟವಾಗುತ್ತಿದೆ. ಟ್ರಾಫಿಕ್ ಸಮಸ್ಯೆ ಹೆಚ್ಚಿದೆ. ಗ್ರಾಹಕರು ಬರುವುದಕ್ಕೆ ತೊಂದರೆಯಾ ಗುತ್ತಿದ್ದು, ಅದಷ್ಟು ಬೇಗ ಮರ ತೆರವುಗೊಳಿಸಿದರೇ ವ್ಯಾಪಾರಕ್ಕೆ ಅನುಕೂಲವಾಗುವುದು.-ರಾಜಣ್ಣ, ಹಣ್ಣಿನ ವ್ಯಾಪಾರಿ 3-4 ದಿನದಿಂದ ಕರೆಂಟ್ ಇಲ್ಲ. ಶುದ್ಧ ನೀರಿನ ಘಟಕ ಬೇರೆ ಕೆಟ್ಟು ಹೋಗಿದೆ. ಗ್ರಾಪಂಯವರು ಬೈಪಾಸ್‌ನಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಸರಿಪಡಿಸಿ ನೀರಿನ ಬವಣೆ ತಪ್ಪಿಸಬೇಕೆಂದರು.
-ಸುಭಾಷ, ಗ್ರಾಮಸ್ಥ,
ಕುದೂರು