Advertisement

ಕಟಪಾಡಿ: ಉರುಳಿ ಬಿದ್ದ ಬೃಹತ್ ಗಾತ್ರದ ಹುಣಸೆ ಮರ; ಅಪಾರ ನಷ್ಟ

10:20 AM Jun 01, 2021 | Team Udayavani |

ಕಟಪಾಡಿ: ಹಳೆ ಎಂಬಿಸಿ ರಸ್ತೆ ರಾಘವೇಂದ್ರ ಭಟ್ ಎಂಬವರ ಮನೆಯ ಮೇಲೆ ಬೃಹತ್ ಗಾತ್ರದ ಹುಣಸೆ ಹುಳಿ ಮರವೊಂದು ಉರುಳಿ ಬಿದ್ದಿದೆ. ಜೊತೆಗೆ ನಾಲ್ಕು ವಿದ್ಯುತ್ ಕಂಬಗಳು ಧರಾಶಾಹಿಯಾಗಿದೆ.

Advertisement

ಇವರ ಮನೆಯ ಮೇಲ್ಚಾವಣಿ, ವಿದ್ಯುತ್ ಪರಿಕರಗಳು ಸಹಿತ ಅಪಾರ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಮೆಸ್ಕಾಂ ಅಧಿಕಾರಿ ರಾಜೇಶ್ ನಾಯಕ್, ಅರಣ್ಯ ರಕ್ಷಕ ಮಂಜುನಾಥ್, ಗ್ರಾಮಕರಣಿಕ ಡೇನಿಯಲ್ ಡೊಮ್ನಿಕ್ ಡಿಸೋಜ, ಗ್ರಾಮ ಪಂಚಾಯತ್ ಸದಸ್ಯರಾದ ಅಶೋಕ್ ರಾವ್, ವಿಜಯ ಮಾಬಿಯನ್, ಪ್ರಸಿನ್ ಜಿ. ಪೂಜಾರಿ ಸಹಿತ ಮತ್ತಿತರರು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಮದುವೆಯಾಗಲು ಒತ್ತಾಯಿಸಿದ ಪ್ರೇಯಸಿಯನ್ನು ಕೊಂದು ಶವ ಬಿಸಾಕಿದ!

ಮೆಸ್ಕಾಂ ಇಲಾಖೆಗೆ ಸುಮಾರು ರೂ. 92,000ಕ್ಕೂ ಅಧಿಕ ನಷ್ಟ ಸಂಭವಿಸಿದೆ. ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಮರ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next