Advertisement

ಬೆಳಗಾವಿ ಚರಂಡಿಯಲ್ಲಿ ಪತ್ತೆಯಾಯಿತು ಬೃಹತ್ ಗಾತ್ರದ ಹೆಬ್ಟಾವು

01:38 PM Oct 04, 2020 | sudhir |

ಸಾಂಬ್ರಾ: ಬೆಳಗಾವಿ ಶಾಸ್ತ್ರೀನಗರದ 9ನೇ ಕ್ರಾಸ್‌ ಚರಂಡಿಯಲ್ಲಿ ಬೃಹತ್‌ ಹೆಬ್ಟಾವು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಶುಕ್ರವಾರ ರಾತ್ತಿ ಬೃಹತ್‌ ಹೆಬ್ಟಾವು ಕಾಣಿಸಿಕೊಂಡಿದ್ದು, ಜನರು ಭಯಭೀತರಾಗಿದ್ದಾರೆ. ಶಾಸ್ತ್ರೀನಗರದ 9ನೇ ಕ್ರಾಸ್‌ ಬಳಿ ಚರಂಡಿಗೆ ಹೋಗುತ್ತಿದ್ದಾಗ ಜನರಿಗೆ ಕಾಣಿಸಿಕೊಂಡಿದೆ. ಹೆಬ್ಟಾವಿನ ದೃಶ್ಯಾವಳಿಯನ್ನು ಜನ ಮೊಬೈಲ್‌ಲ್ಲಿ ಚಿತ್ರೀಕರಿಸಿ  ಸಾಮಾಜಿಕ ಜಾಲತಾಣ ಹರಿ ಬಿಟ್ಟಿದ್ದಾರೆ. ಬಳಿಕ ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಜನರು ಮಾಹಿತಿ ನೀಡಿದ್ದಾರೆ.
ಚರಂಡಿಯಲ್ಲಿ ಇಷ್ಟೊಂದು ಬೃಹತ್‌ ಗಾತ್ರದ ಹೆಬ್ಟಾವು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಚರ್ಚೆಗೆ ಗ್ರಾಸವಾಗಿದೆ.

Advertisement

ಇಂದು ವಿದ್ಯುತ್‌ ವ್ಯತ್ಯಯ
ಬೆಳಗಾವಿ: ಹೆಸ್ಕಾಂದಿಂದ ಮೂರನೇಯ ತ್ತೈಮಾಸಿಕ ಹಾಗೂ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಅ.4 ರಂದು ಬೆಳಗ್ಗೆ 10 ಗಂಟೆಯಿಂದಸಂಜೆ 4 ಗಂಟೆಯವರೆಗೆ ಹಿಂಡಲಗಿ, ಮಂಗ್ಯಾನಕೊಪ್ಪ, ಕೇರವಾಡ, ಬೀಡಿ, ಕಕ್ಕೇರಿ, ಚುಂಚವಾಡ, ರಾಮಾಪೂರ, ಸುರಪೂರ, ಗೋಲಿಹಳ್ಳಿ, ಭುರುಣಕಿ, ಕರಿಕಟ್ಟಿ, ಗಸ್ತೋಳ್ಳಿದಡ್ಡಿ, ಗಸ್ತೊಳ್ಳಿ, ಹೊಸೆಟ್ಟಿ, ಶಿವಾಜಿ ನಗರ, ಹಾಲಜುಂಜವಾಡ, ಚನ್ನಕ್ಕೇಬೈಲ, ಮಾಸ್ಕಾನಟ್ಟಿ, ಹಲಸಾಳ, ಪಾದಲವಾಡಿ, ಅನಗಡಿ, ಕರಂಜಲ, ಪೋತೋಳಿ, ಕಾಪೋಲಿ, ಶಿವಠಾಣ, ಶಿಂಧೋಳ್ಳಿ ಬಿ.ಕೆ, ಶಿಂಧೋಳ್ಳಿ ಕೆ.ಎಚ್‌, ಗೋಸೆ ಬಿ.ಕೆ, ಗೋಸೆ ಕೆ.ಎಚ್‌, ಮಡವಾಲ, ಗೋಟಗಾಳಿ, ದೇವರಾಯಿ, ಜಂಬೇಗಾಳಿ, ನಂಜನಕೊಡಲ, ಸುಳೇಗಾಳಿ, ಹತ್ತರವಾಡ, ಮೇರ್ಡಾ, ಕಾರಜಗಿ, ಬಸ್ತವಾಡ, ಹಲಗಾ, ಹಂದೂರ, ಹುಲಿಕೊತ್ತಲ, ನವೋದಯ ನಗರ, ಕಸಮಳಗಿ, ಮುಗಳಿಹಾಳ, ಕಡತನ ಬಾಗೇವಾಡಿ ಗ್ರಾಮಗಳಲ್ಲಿ ವಿದ್ಯುತ್‌
ನಿಲುಗಡೆಯಾಗಲಿದೆ.

ಅದೇ ರೀತಿ ಬಿಳಕೆ, ಅವರೊಳ್ಳಿ, ಚಿಕದಿನಕೊಪ್ಪ, ಕೊಡಚವಾಡ, ದೇಮಿನಕೊಪ್ಪ, ವಡ್ಡೇಬೈಲ, ಸುರಪುರ ಕೆರವಾಡ, ಚಿಕ್ಕಅಂಗ್ರೊಳ್ಳಿ, ಕುಣಕಿಕೊಪ್ಪ, ಬೇಕವಾಡ, ಬಂಕಿ, ಬಸರಿಕಟ್ಟಿ, ಜುಂಜವಾಡ ಕೆ.ಎನ್‌, ಗರ್ಬಾನಟ್ಟಿ, ನಂಜನಕೊಡಲ, ಸಗರೆ, ದೊಡ್ಡೆಬೈಲ, ಚನ್ನೇವಾಡಿ, ಭುತೇವಾಡಿ, ಹಲಶಿ, ಗುಂಡಪಿ, ಬಿಜಗರ್ಣಿ, ಬಂಬರಡಾ ಹಾಗೂ ಮೆಂಡಗಾಳಿ ಗ್ರಾಮಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಕಾರ್ಯನಿರ್ವಾಹಕ ಇಂಜಿನಿಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next