ಜೇವರ್ಗಿ: ತಾಲೂಕಿನ ಸೊನ್ನ ಗ್ರಾಮದ ಆರಾಧ್ಯ ದೈವ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಸಾವಿರಾರು ಭಕ್ತಾದಿಗಳ ಮದ್ಯೆ ಅದ್ಧೂರಿ ರಥೋತ್ಸವ ಜರುಗಿತು. ಸೊನ್ನ ಮಠದ ಪೀಠಾಧಿಪತಿ ಡಾ| ಶಿವಾನಂದ ಸ್ವಾಮೀಜಿ ನೇತೃತ್ವದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.
ಮಂಗಳವಾರ ಬೆಳಗ್ಗೆ 6:00 ಗಂಟೆಗೆ ಸಿದ್ಧಲಿಂಗೇಶ್ವರ ಕತೃ ಗದ್ದುಗೆಗೆ ವಿಶೇಷ ಪೂಜೆ, ಅಲಂಕಾರ, ಮಹಾಮಂಗಳಾರತಿ ನೆರವೇರಿಸಲಾಯಿತು. ನಂತರ ಪಲ್ಲಕ್ಕಿ ಮಹೋತ್ಸವ ವಿವಿಧ ಭಾಜಾ ಭಜಂತ್ರಿಗಳೊಂದಿಗೆ ಗ್ರಾಮದ ವಿವಿಧ ಬಡಾವಣೆಗಳಲ್ಲಿ ಅದ್ಧೂರಿಯಾಗಿ ಜರುಗಿತು.
ಸಂಜೆ 7:00 ಗಂಟೆಗೆ ಹೂವಿನಿಂದ ಅಲಂಕೃತಗೊಂಡ ರಥೋತ್ಸವಕ್ಕೆ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಚಾಲನೆ ನೀಡಿದರು. ರಥೋತ್ಸವದ ಸಂದರ್ಭದಲ್ಲಿ ಬದಾಮಿ, ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತರು ಹರಕೆ ತೀರಿಸಿದರು.
ಸಂಜೆ ರತ್ನ ಮಾಂಗಲ್ಯ ಎಂಬ ನಾಟಕ ಪ್ರದರ್ಶನ, ಸಂಗೀತ ಕಾರ್ಯಕ್ರಮ ಜರುಗಿತು. ರಥೋತ್ಸವ ಸಂದರ್ಭದಲ್ಲಿ ತಾಪಂ ಸದಸ್ಯ ಶಿವಾನಂದ ಸಾಹು ಮಾಕಾ, ವಕೀಲರಾದ ಬಸವರಾಜ ಬಿರಾದಾರ, ವಿಜಯಕುಮಾರ ಬಿರಾದಾರ, ರೋಮೇಶ ಮುದೋಳ, ಮಹೇಶ ಮಹಾಜನಶೆಟ್ಟಿ, ಸುನೀಲ ಗೋಳಾ ಕಲ್ಲಹಂಗರಗಾ, ಶರಣು ಮಣೂರ,
ಶರಣು ಕ್ಷತ್ರಿ ನೆಲೋಗಿ, ಸಿದ್ಧು ಧನ್ನೂರ, ಭೀಮರಾಯ ಕಲಾಲ, ಭೀಮರಾಯ ಮಾಂಗ, ವಿಜಯಕುಮಾರ ಧರೇನ್, ಶಿವಲಿಂಗ ಕ್ಷತ್ರಿ ನೆಲೋಗಿ, ಭಾಗೇಶ ಶಿರೂರ, ಅಶೋಕ ಬಿರಾದಾರ ಸೇರಿದಂತೆ ಸುತ್ತಮುತ್ತಲಿನ ಕಲ್ಲಹಂಗರಗಾ, ನೆಲೋಗಿ, ಕಾಸರಭೋಸಗಾ, ಮುತ್ತಕೋಡ, ಹೆಗ್ಗಿನಾಳ ಗ್ರಾಮಸ್ಥರು ಭಾಗವಹಿಸಿದ್ದರು.