ಕೋಲ್ಕತ್ತಾ : ಕೇವಲ ಪಶ್ಚಿಮ ಬಂಗಾಳ ಮಾತ್ರವಲ್ಲದೇ ಇಡೀ ದೇಶದ ಗಮನ ಸೆಳೆದಿರುವ ನಂದಿಗ್ರಾಮ್ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಮಮತಾ ಬ್ಯಾನರ್ಜಿ VS ಸುವೇಂದು ಅಧಿಕಾರಿ ಎಂಬಷ್ಟರ ಮಟ್ಟಿಗೆ ಕುತೂಹಲ ಕೆರಳಿಸಿದೆ.
ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸ್ಪರ್ಧಿಸಿರುವ ನಂದಿಗ್ರಮ್ ದಿಂದ, ಮಮತಾ ಟೀಂ ತೊರೆದಿದ್ದ ಸುವೇಂದು ಅಧಿಕಾರಿಯನ್ನು ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಈ ಕಾರಣದಿಂದಲೇ ಮಮತಾ ಬ್ಯಾನರ್ಜಿ ಈ ಬಾರಿಯ ಚುನಾವಣೆಯಲ್ಲಿ ನಂದಿಗ್ರಾಮ್ ನಲ್ಲಿ ಸ್ಪರ್ಧೆ ನಡೆಸಿದ್ದರು.
ಸದ್ಯದ ಮತ ಎಣಿಕೆ ಪ್ರಕಾರ ಟಿಎಂಸಿಯು 189 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅಲ್ಲದೆ ಬಿಜೆಪಿಯು 98 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಇನ್ನು ಸುವೇಂದು ಅಧಿಕಾರಿ 3611 ಮತಗಳ ಮುನ್ನಡೆ ಸಾಧಿಸಿದ್ದಾರೆ. ಆದ್ರೆ ಮಮತಾ ಬ್ಯಾನರ್ಜಿ ಮಾತ್ರ ಸುವೇಂದು ಅಧಿಕಾರಿ ಅಭಿಮುಖವಾಗಿ ಹಿನ್ನಡೆ ಸಾಧಿಸುತ್ತಿದ್ದಾರೆ.
ಸದ್ಯ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿಯಾಗಿದ್ದರೂ ಕೂಡ ಹಿನ್ನಡೆ ಸಾಧಿಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇನ್ನು ನಂದಿಗ್ರಾಮ ಕ್ಷೇತ್ರದಲ್ಲಿ ಮಮತಾ ಸೋತು ಸುವೇಂದು ಗೆದ್ದರೆ ಮುಂದಿನ ಪಶ್ಚಿಮ ಬಂಗಾಳದ ರಾಜಕೀಯ ಚಿತ್ರಣ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ.
ಒಂದು ಕಾಲದಲ್ಲಿ ಮಮತಾ ಬಲಗೈ ಬಂಟನಾಗಿದ್ದ ಸುವೇಂದು ಅಧಿಕಾರಿ ಬಿಜೆಪಿ ಸೇರಿಕೊಂಡು ತನ್ನ ಮೂಲ ಪಕ್ಷದ ವಿರುದ್ಧವೇ ಸಮರ ಸಾರಿದ್ದು ಎಲ್ಲರ ಗಮನ ಸೆಳೆದಿದೆ